ಜಪಾನ್: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಜಪಾನ್ ಭೇಟಿಯಲ್ಲಿದ್ದಾರೆ. ಅವರು ಆಗಸ್ಟ್ 29, ಶುಕ್ರವಾರದಂದು ಟೋಕಿಯೊಗೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಜಪಾನಿನ ಕಲಾವಿದರು ಭಾರತೀಯ ಉಡುಪುಗಳನ್ನು ತೊಟ್ಟು ಸಾಂಪ್ರದಾಯಿಕವಾಗಿ ಸ್ವಾಗತವನ್ನು ಕೋರಿದ್ದಾರೆ. ಅದೇ ರೀತಿ ಜಪಾನಿನಲ್ಲಿ ಅನಿವಾಸಿ ಭಾರತೀಯರು ಭಾರತದ ಬಾವುಟವನ್ನು ಹಿಡಿದು ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ್ದು, ಆ ಗುಂಪಿನಲ್ಲಿದ್ದ ಭಾರತೀಯ ಮೂಲದ ಯುವತಿಯೊಬ್ಬಳು ಮೋದಿಯನ್ನು ಕಂಡು ಭಾವುಕಳಾಗಿದ್ದಾಳೆ. ಮೋದಿ ಬರುತ್ತಿದ್ದಂತೆ ಆಕೆ ಸೇನಾ ಕಮಾಂಡರ್‌ನಂತೆ ಸೆಲ್ಯೂಟ್ ಹೊಡೆದಿದ್ದು, ಈ ಭಾವನಾತ್ಮಕ ದೃಶ್ಯ ಇದೀಗ ಭಾರೀ ವೈರಲ್ ಆಗುತ್ತಿದೆ.
ಪ್ರಧಾನಿ ಮೋದಿಯನ್ನು ಕಂಡು ಭಾವುಕಳಾದ ಯುವತಿ.
ಶುಕ್ರವಾರ ಜಪಾನ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರನ್ನು ಅನಿವಾಸಿ ಭಾರತೀಯರು ತ್ರಿವರ್ಣ ಧ್ವಜವನ್ನು ಹಿಡಿದು ಭವ್ಯವಾಗಿ ಸ್ವಾಗತಿಸಿದ್ದು, ಈ ವೇಳೆಯಲ್ಲಿ ಭಾರತೀಯ ಮೂಲಕ ಯುವತಿ ಸೇನಾ ಕಮಾಂಡರ್‌ನಂತೆ ಹೆಮ್ಮೆಯಿಂದ ಮೋದಿಯವರಿಗೆ ಸೆಲ್ಯೂಟ್ ಹೊಡೆದಿದ್ದಾಳೆ. ಆಕೆ ಪ್ರಧಾನಿ ಮೋದಿಯವರನ್ನು ನೋಡಿ ಭಾವುಕಳಾಗಿದ್ದು, ಈ ದೃಶ್ಯ ಇದೀಗ ಭಾರೀ ವೈರಲ್ ಆಗುತ್ತಿದೆ.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಆ ಯುವತಿ, “ ನಾನು ಜಪಾನ್‌ನಲ್ಲಿ 8 ವರ್ಷಗಳಿಂದ ವಾಸಿಸುತ್ತಿದ್ದೇನೆ, ನಾವು ಜಪಾನಿನಲ್ಲಿ ಸುರಕ್ಷಿತವಾಗಿ ವಾಸಿಸುತ್ತಿದ್ದೇವೆ. ಪ್ರಧಾನಿ ಮೋದಿ ಅವರ ಸಂಪರ್ಕದಿಂದಾಗಿ ನಾನು ಇಲ್ಲಿ ಸುರಕ್ಷಿತವಾಗಿದ್ದೇವೆ” ಎಂದು ಹೇಳಿದ್ದಾಳೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಅನಿವಾಸಿ ಭಾರತೀಯರು ಭಾರತದ ಬಾವುಟವನ್ನಿಡು ನಿಂತಿರುವ ದೃಶ್ಯವನ್ನು ಕಾಣಬಹುದು. ಅದರಲ್ಲೊಬ್ಬಳು ಯುವತಿ ಪ್ರಧಾನಿ ಮೋದಿ ಹತ್ತಿರ ಬರುತ್ತಿದ್ದಂತೆ ಬಹಳ ಹೆಮ್ಮೆಯಿಂದ ಸೆಲ್ಯೂಟ್ ಹೊಡೆದಿದ್ದಾಳೆ. ಆಕೆಯ ತಲೆಗೆ ಕೈಯಿಟ್ಟು ಮೋದಿ ಆಶಿರ್ವಾದ ಮಾಡಿದ್ದು, ಆಕೆ ಭಾವುಕಳಾಗಿದ್ದಾಳೆ.
ಆಗಸ್ಟ್ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಕೆಲವರು ಇದೆಲ್ಲಾ ನಾಟಕ ಎಂದು ಟೀಕಿಸಿದರೆ, ಇನ್ನೂ ಹಲವರು ನಮ್ಮ ಹೆಮ್ಮೆಯ ಪ್ರಧಾನಿ ಎಂದು ಮೋದಿಯವರನ್ನು ಹೊಗಳಿದ್ದಾರೆ.
For More Updates Join our WhatsApp Group :
