ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆಗೆ ವೇಗ ನೀಡಿತ್ತು. ಐದಾರು ಸ್ಥಳಗಳಲ್ಲಿ ಎರಡು ಸ್ಥಳಗಳನ್ನು ಕಾಯ್ದಿರಿಸಿರುವ ಸರ್ಕಾರ, ಪೈನಲ್ ಮಾಡಲು ಸಕಲ ಸಿದ್ಧತೆ ಆರಂಭಿಸಿತ್ತು. ಈ ಬಗ್ಗೆ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರೇ ಹೇಳಿದ್ದರು. ಇದೀಗ ಈ ಕಾರಣದಿಂದಾಗಿ ನಿರ್ಮಾಣ ಕಾರ್ಯಕ್ಕೆ ಜಾಗ ಅಂತಿಮಗೊಳಿಸುವುದು ಮತ್ತೆ ವಿಳಂಬವಾಗುತ್ತಿದೆ.
ಹೌದು, ಬೆಂಗಳೂರು ನಗರದ ಸಮೀಪವೇ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರ DPR ಸಿದ್ಧಪಡಿಸಿದೆ. ಈ ಮೂಲಕ ಹಾಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಉಂಟಾಗುವ ಪ್ರಯಾಣಿಕರ ದಟ್ಟಣೆ ಹೊರೆಗೆ ಮುಂದಾಗಿದೆ.
ನೆಲಮಂಗಲ, ಇಲ್ಲವೇ ಬಿಡದಿ ಸಮೀಪ ಈ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗ ಹುಡುಕಿ ಇಡಲಾಗಿದೆ. ತುಮಕೂರು ಹಾಗೂ ಹಾಸ ರಸ್ತೆ ಹೀಗೆ ಅನೇಕ ಕಡೆಗಳಲ್ಲಿ ಬೆಂಗಳೂರು ಎರಡನೇ ಏರ್ಪೋರ್ಟ್ಗೆ ನಿರ್ಮಿಸುವಂತೆ ಬೇಡಿಕೆ ಬಂದಿವೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವರು ಫೆಬ್ರವರಿ 17ರೊಳಗೆ ಜಾಗ ಅಂತಿಮಗೊಳಿಸುತ್ತೇವೆ. ಈ ಸಂಬಂಧ ಮುಖ್ಯಮಂತ್ರಿ ಜೊತೆಗೂಡಿ ಜಾಗ ಫೈನಲ್ ಮಾಡುತ್ತೇವೆ ಎಂದಿದ್ದರು.
ಯೋಜನೆಗೆ ಸ್ಥಳ ಅಂತಿಮಗೊಳಿಸಿದ ನಂತರವೇ ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಕಳಿಸುತ್ತೇವೆ ಎಂದಿದ್ದರು. ಆದರೆ ಸಚಿವ ಎಂ.ಬಿ.ಪಾಟೀಲ್ ಅವರು ಮುಖ್ಯಮಂತ್ರಿ ಮಧ್ಯೆ ಈ ಸಂಬಂಧ ಮಾತುಕತೆ, ಸಭೆ ನಡೆದಿಲ್ಲ. ಕಾರಣ ಕರ್ನಾಟಕ ಬಜೆಟ್ 2025-26 ಸಮೀಪಿಸಿದೆ. ಇದರ ಸಿದ್ಧತೆಯಲ್ಲಿ ಮುಖ್ಯಮಂತ್ರಿಗಳು ತೊಡಗಿದ್ದಾರೆ. ಹೀಗಾಗಿ ಜಾಗ ಅಂತಿಮಗೊಳಿಸುವುದು ಮತ್ತೆ ವಿಳಂಬವಾಗುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.
4000 ಎಕರೆ ಜಾಗ ಬೇಕು! ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಕರ್ನಾಟಕ ಬಜೆಟ್ ಮಂಡನೆಯಲ್ಲಿ ಮುಳುಗಿದ್ದಾರೆ. ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಕಾಲು ನೋವಾಗಿತ್ತು. ಹೀಗೆ ಕೆಲವು ಕಾರಣಗಳಿಂದ ಅವರೊಂದಿಗೆ ಈ ಹೊಸ ವಿಮಾನ ನಿಲ್ದಾಣ ನಿರ್ಮಾಣ ಬಗ್ಗೆ ಸಭೆ ನಡೆದಿಲ್ಲ.
ಒಂದು ವೇಳೆ ಸಿಎಂ ಜೊತೆಗೆ ಸಚಿವರ ಸಭೆ ನಡೆದಿದ್ದರು. ಇಷ್ಟೊತ್ತಿಗಾಗಲೇ ಜಾಗ ಅಂತಿಮಗೊಂಡು, ಪ್ರಸ್ತಾವನೆಯು ಕೇಂದ್ರದ ಅಂಗಳದಲ್ಲಿ ಇರುತ್ತಿತ್ತು. ಅಲ್ಲದೇ, ಈ ಯೋಜನೆ ಸಾಕಾರಕ್ಕೆ 4000 ಎಕರೆ ಜಾಗ ಬೇಕಿದೆ. ಈ ಬೃಹತ್ ಜಾಗ ಇರುವ ಸ್ಥಳಗಳನ್ನು ಸರ್ಕಾರ, ಅಧಿಕಾರಿಗಳು ಈಗಾಗಲೇ ಗುರುತಿಸಿದ್ದಾರೆ. ಫೈನಲ್ ಮಾಡಿ, ಡಿಪಿಆರ್ ಸಮೇತ ಅನುಮೋದನಗೆ ಕೇಂದ್ರ ಸಚಿವಾಲಯಗಳಿಗೆ, ಸಂಸ್ಥೆಗಳ ಕಳುಹಿಸುವುದು ಬಾಕಿ ಇದೆ. ಬಿಡದಿ ಇಲ್ಲವೇ ನೆಲಮಂಗಲ ಸಮೀಪ ಜಾಗ ಅಂತಿಮ? ಬೆಂಗಳೂರು ಎರಡನೇ ವಿಮಾನ ನಿಲ್ದಾನ ಬಿಡದಿ ಸಮೀಪ ನಿರ್ಮಾಣಕ್ಕೆ, ಇಲ್ಲಿನ ಜಾಗ ಫೈನಲ್ ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇತ್ತ ಕೆಲವರು ನೆಲಮಂಗಲ ಬಳಿ ಮಾಡಿದರೆ ಅನುಕೂಲ ಎಂದು ಹೇಳುತ್ತಿದ್ದಾರೆ. ಇವೆರಡದಲ್ಲಿ ಒಂದು ಕಡೆ ಜಾಗ ಅಂತಿಮವಾಗುವ ನಿರೀಕ್ಷೆಗಳು ದಟ್ಟವಾಗಿದೆ.
ಇನ್ನೂ ಹಾಸನ ರಸ್ತೆಯಲ್ಲಿ ಇಲ್ಲವೇ ತುಮಕೂರು ಸಮೀಪ ನಿರ್ಮಿಸಬೇಕು. ಇಲ್ಲಿ ಎರಡು ಕಡೆ ಹೆದ್ದಾರಿ ಇದೆ. ಈ ಭಾಗ ಬೆಳೆಯುತ್ತಿರುವುದರಿಂದ ಜನರಿಗೆ, ಕೈಗಾರಿಕೆ ಅಭಿವೃದ್ಧಿಗೆ ಅನುಕೂಲವಾಗಲಿದೆ. ಅನೇಕ ಜಿಲ್ಲೆಗಳ ಜನರಿಗೆ ಸಹಾಯವಾಗಲಿದೆ ಎಂದು ಕೆಲ ರಾಜಕೀಯ ನಾಯಕರು, ಸ್ಥಳೀಯರು ಒತ್ತಾಯಿಸಿದ್ದಾರೆ. ಸದ್ಯ ಜಾಗ ಅಂತಿಮಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಈ ಬಗ್ಗೆ ಕುತೂಹಲ ಹೆಚ್ಚಾಗಿದೆ.