ದುರಸ್ತಿ ಮಾಡಿ ಕೇವಲ 48 ಗಂಟೆಗಳಲ್ಲೇ ಹಾಳಾದ ಬೆಂಗಳೂರಿನ ರಸ್ತೆ; ವೀಡಿಯೋ ವೈರಲ್.

ದುರಸ್ತಿ ಮಾಡಿ ಕೇವಲ 48 ಗಂಟೆಗಳಲ್ಲೇ ಹಾಳಾದ ಬೆಂಗಳೂರಿನ ರಸ್ತೆ; ವೀಡಿಯೋ ವೈರಲ್.

ಬೆಂಗಳೂರು:  ಎರಡು ದನಗಳ ಹಿಂದೆಯಷ್ಟೇ ದುರಸ್ತಿ ಮಾಡಲ್ಪಟ್ಟಿದ್ದ ಚನ್ನಸಂದ್ರ ರಸ್ತೆಯು ಈಗಾಗಲೇ ಮತ್ತೆ ಹದಗೆಟ್ಟಿದೆ. ಬೆಂಗಳೂರಿನ ರಸ್ತೆ ದುರಸ್ತಿಯು ಹೀನಾಯವಾಗಿ ಸೋಲು ಕಂಡಿದೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಈ ಹೇಳಿಕೆಗೆ ಪುಷ್ಟಿ ನೀಡುವಂತೆ ಚನ್ನಸಂದ್ರ ರಸ್ತೆಯ ಒಂದು ವೀಡಿಯೋ ಈಗ ವೈರಲ್​ ಆಗುತ್ತಿದೆ.

ಚನ್ನಸಂದ್ರ ಸರ್ಕಲ್ ಬಳಿಯ ರಸ್ತೆಯನ್ನು ಸೆಪ್ಟೆಂಬರ್ 27 ರಂದು ದುರಸ್ತಿ ಮಾಡಲಾಗಿತ್ತು ಆದರೆ ಕೇವಲ 48 ಗಂಟೆಗಳಲ್ಲಿಯೇ ಸರಿಪಡಿಸಿದ ಈ ರಸ್ತೆ ಕುಸಿದಿರುವುದು ಕಂಡುಬಂದಿದೆ. ಈ ದೃಶ್ಯಗಳನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *