ಬೆಂಗಳೂರು: ಬೆಂಗಳೂರು ನಗರದಲ್ಲಿ ದಿನೇ ದಿನೇ ಭಾರೀ ಸಂಚಾರ ದಟ್ಟಣೆ ಕಾಣಿಸುತ್ತಿರುವ ಬೆಳ್ಳಂದೂರು ಹಾಗೂ ಮಾರತ್ತಹಳ್ಳಿ ಪ್ರದೇಶಗಳಲ್ಲಿನ ಟ್ರಾಫಿಕ್ ಕ್ಲಾರಿಟಿಗೆ ಹೊಸ ಸಂಚಾರ ಯೋಜನೆ ಜಾರಿಯಲ್ಲಿದೆ. ಟ್ರಾಫಿಕ್ ನಿಯಂತ್ರಣಕ್ಕಾಗಿ ಹೆಚ್ಎಎಲ್ ಸಂಚಾರ ಪೊಲೀಸರು ಮಾರ್ಗಬದಲಾವಣೆಗಳನ್ನು ಪ್ರಕಟಿಸಿದ್ದು, ಇಂದಿನಿಂದ ಒಂದು ವಾರದ ಕಾಲ ಪ್ರಾಯೋಗಿಕವಾಗಿ ಈ ನಿಯಮಗಳು ಅನ್ವಯವಾಗಲಿವೆ.
ಹೊಸ ಸಂಚಾರ ನಿಯಮಗಳು ಹೀಗಿವೆ:
- ಕಲಾಮಂದಿರದಿಂದ ಕಾಡುಬೀಸನಹಳ್ಳಿಗೆ ಹೋಗುವ ವಾಹನಗಳಿಗೆ ಸರ್ವಿಸ್ ರಸ್ತೆ ಮೂಲಕ ಮಾತ್ರ ಸಂಚರಿಸಲು ಅನುಮತಿ.
- ರಿಂಗ್ ರಸ್ತೆ ಮೂಲಕ ನೇರ ಸಂಚಾರಕ್ಕೆ ಮಾತ್ರ ಅವಕಾಶ; ಸರ್ವಿಸ್ ರಸ್ತೆಗೆ ಎಡಕ್ಕೆ ತಿರುಗುವ ಪಾಯಿಂಟ್‌ಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿದೆ.
- ಮಾರತ್ತಹಳ್ಳಿ & ಬೆಳ್ಳಂದೂರು ಕಡೆಗೆ ಹೋಗುವ ಎಲ್ಲ ವಾಹನಗಳು ಹೊರ ವರ್ತುಲ ರಸ್ತೆಯ ಮೂಲಕ ತೆರಳಬೇಕು.
ಪರ್ಯಾಯ ಮಾರ್ಗವೀಗ ಹೀಗೆ:
- ಮಹದೇವಪುರ – ಕಾರ್ತಿಕ್ನಗರ ಕಡೆಯಿಂದ ಬರುವ ವಾಹನಗಳು → ಕಲಾಮಂದಿರದ ಬಳಿ ಸರ್ವಿಸ್ ರಸ್ತೆಗೆ ತಿರುಗಿ
- ಮಾರತ್ತಹಳ್ಳಿ ಕಾಂತಿ ಸ್ವೀಟ್ಸ್ ಅಂಡರ್ ಪಾಸ್ ಬಳಿ ಯು–ಟರ್ನ್
- ಮಾರತ್ತಹಳ್ಳಿ ಬ್ರಿಡ್ಜ್ ಬಳಿ ಎಡಕ್ಕೆ ತಿರುಗಿ → ಮುನ್ನೇಕೊಳಲು → ಕಾಡುಬೀಸನಹಳ್ಳಿ ಜಂಕ್ಷನ್ → ಪಣತ್ತೂರು → ಕರಿಯಮ್ಮನ ಅಗ್ರಹಾರ
ಸೇವಾ ರಸ್ತೆಗೆ ಬೀಗ: ಯಾರಿಗೆ?
- ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರು ಕಡೆಗೆ ಸಂಚರಿಸುವ ಎಲ್ಲಾ ವಾಹನಗಳಿಗೆ ಸರ್ವಿಸ್ ರಸ್ತೆಯಲ್ಲಿ ಸಂಚರಿಸಲು ಅವಕಾಶವಿಲ್ಲ.
- ಈ ವಾಹನಗಳು ಕಡ್ಡಾಯವಾಗಿ ಹೊರ ವರ್ತುಲ ರಸ್ತೆಯ ಮೂಲಕವೇ ಸಂಚರಿಸಬೇಕು.
ಬೃಹತ್ ಬದಲಾವಣೆಯೊಂದರಲ್ಲಿ, ಪ್ರಯಾಣಿಕರ ಅನುಭವ ಸುಗಮಗೊಳಿಸುವ ನಿಟ್ಟಿನಲ್ಲಿ ಈ ಪ್ರಯೋಗಾತ್ಮಕ ಯೋಜನೆ ಆರಂಭವಾಗಿದೆ. ಈ ಯೋಜನೆಯ ಫಲಿತಾಂಶವನ್ನು ಅವಲೋಕಿಸಿ ಮುಂದಿನ ದಿಕ್ಕು ನಿರ್ಧರಿಸಲಾಗುತ್ತದೆ ಎಂದು ಸಂಚಾರ ಅಧಿಕಾರಿಗಳು ತಿಳಿಸಿದ್ದಾರೆ.
For More Updates Join our WhatsApp Group :
