ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮ ದಿನಾಚರಣೆಯನ್ನು ಆಗಸ್ಟ್ 3ರಂದು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೀದರ್ನಿಂದ ದಾವಣಗೆರೆಗೆ ವಿಶೇಷ ರೈಲು ಕಲ್ಪಿಸಲಾಗಿದೆ.
ಆಗಸ್ಟ್ 2ರಂದು ಮಧ್ಯಾಹ್ನ 2 ಗಂಟೆಗೆ ಬೀದರ್ನಿಂದ ರೈಲು ಹೊರಡಲಿದೆ. ಮರುದಿನ ಆಗಸ್ಟ್ 3ರಂದು ಮುಂಜಾನೆ 5.30ಕ್ಕೆ ದಾವಣಗೆರೆಗೆ ಈ ರೈಲು ತಲುಪಲಿದೆ. ಬಳಿಕ ಅದೇ ದಿನ ಸಂಜೆ 6 ಗಂಟೆಗೆ ದಾವಣಗೆರೆ ಬಿಡಲಿರುವ ರೈಲು ಮರು ದಿನ ಅಂದರೆ ಆ.4ರಂದು ಬೆಳಗ್ಗೆ 10.30ಕ್ಕೆ ಬೀದರ್ಗೆ ತಲುಪಲಿದೆ.
Pragati TV Social Connect for more latest u