ಬೆಂಗಳೂರು: ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್ಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಆರೋಪಿ ಡಾ. ಮಹೇಂದ್ರ ರೆಡ್ಡಿ ಸಹೋದರನಿಗೂ ಕ್ರಿಮಿನಲ್ ಹಿನ್ನಲೆ ಇದೆ ಎಂದು ಕೃತಿಕಾ ತಾಯಿ ಗಂಭೀರ ಆರೋಪ ಮಾಡಿದ್ದಾರೆ. ಪ್ರಾಣ ಉಳಿಸುವವರೇ ಪ್ರಾಣ ತೆಗೆಯುವ ಕೆಲಸ ಮಾಡಿದ್ದಾರೆ.
ಮಹೇಂದ್ರ ರೆಡ್ಡಿ ಸಹೋದರನ ಮೇಲೂ ಹುಡುಗಿಗೆ ಮೋಸ ಮಾಡಿದ ಆರೋಪವಿದೆ. 20 ಲಕ್ಷ ಕೊಟ್ಟು ಆತ ಈಗ ಕೇಸ್ನ ಸೆಟಲ್ಮೆಂಟ್ ಮಾಡಿಕೊಂಡಿದ್ದಾನೆ. ಅವರದ್ದೇ ಮೆಡಿಕಲ್ ಸ್ಟೋರ್ ಇದ್ದು ಕೃತಿಕಾ ಕೊಲೆಗೆ ಬಳಸಲಾದ ಅನಸ್ತೇಶಿಯಾ ಅಲ್ಲಿಂದಲೇ ತಂದಿರಬಹುದು. ಮಹೇಂದ್ರ ರೆಡ್ಡಿ ಈ ಹಿಂದೆ ಎಷ್ಟು ಜನ ಹುಡುಗಿಯರಿಗೆ ಮೋಸ ಮಾಡಿದ್ದಾನೆ ಎಂಬ ಬಗ್ಗೆಯೂ ತನಿಖೆ ಆಗಬೇಕು. ಅವನಿಗೆ ಇಷ್ಟ ಇಲ್ಲದಿದ್ದರೆ ನಮ್ಮ ಬಳಿ ಹೇಳಬೇಕಿತ್ತು, ಅದನ್ನು ಬಿಟ್ಟು ಈ ರೀತಿ ಕೊಲೆ ಮಾಡಿರೋದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
For More Updates Join our WhatsApp Group :
