ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2025 ಇಂದು ಶ್ರದ್ಧಾ-ಸಂಭ್ರಮದಿಂದ ಆರಂಭವಾಗಲಿದ್ದು, ನಗರಾದ್ಯಂತ ಭದ್ರತಾ ಕೈಗಾಲು ಬಿಗಿಯಾಗಿದೆ. ನಗರದ ಹೃದಯ ಭಾಗದಿಂದ ಚಾಮುಂಡಿ ಬೆಟ್ಟದವರೆಗೆ ಎಲ್ಲೆಲ್ಲೂ ಪೋಲೀಸ್ ಬಂದೋಬಸ್ತ್ ಗಟ್ಟಿ ಮಾಡಲಾಗಿದೆ.
ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರ ನೇತೃತ್ವದಲ್ಲಿ ವಿಸ್ತೃತ ಭದ್ರತಾ ವ್ಯವಸ್ಥೆ ರೂಪುಗೊಂಡಿದ್ದು, ಸಂಗೋಳ್ಳಿ ರಾಯಣ್ಣ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳು ಹಾಕಲಾಗಿವೆ.
ಚಾಮುಂಡಿ ಬೆಟ್ಟಕ್ಕೆ ಹೋಗುವವರಿಗೆ ಕಡ್ಡಾಯ ತಪಾಸಣೆ ನಡೆಯುತ್ತಿದೆ. ವಿಐಪಿ ಹಾಗೂ ವಿವಿಐಪಿ ಸಂಚಾರ ಇರುವ ಹಿನ್ನೆಲೆಯಲ್ಲಿ ಬೈಕ್ಗಳಿಗೂ ನಿರ್ಬಂಧ ವಿಧಿಸಲಾಗಿದೆ.
ಭದ್ರತಾ ಸಿದ್ದತೆಗಾಗಿ ಒಟ್ಟು:
- 1 ಡಿಸಿಪಿ
- 2 ಎಸಿಪಿ
- ಸಂಚಾರಿ ಪೊಲೀಸರು
- ಕೆಎಸ್ಆರ್ಪಿ ಹಾಗೂ ಡಿಆರ್ಎಫ್ ಪಡೆ
ಅಲ್ಲದೇ ಮಂಡ್ಯ, ಚಾಮರಾಜನಗರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರು ಕರೆಯಲಾಗಿದ್ದಾರೆ.
ಇದಾದಷ್ಟಲ್ಲ, ದಸರಾ ಉದ್ಘಾಟನೆಗೆ ಬಾನು ಮಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಕಾರಣಕ್ಕೆ ಬಿಜೆಪಿ ಹಾಗೂ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರಿಂದ, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಹೆಚ್ಚುವರಿ ಭದ್ರತೆ ಕೈಗೊಳ್ಳಲಾಗಿದೆ.
For More Updates Join our WhatsApp Group :
