ಹಾಸನ: ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಜಗಬೋರನಹಳ್ಳಿಯಲ್ಲಿ ಎರಡು ಮದಗಜಗಳ ನಡುವೆ ನಡೆದಿದ್ದ ಭೀಕರ ಕಾಳಗ,ನವೆಂಬರ್ 9ರಂದು ಮದವೇರಿದ ಕಾಡಾನೆಗಳಾದ ಭೀಮಾ ಹಾಗೂ ಕ್ಯಾಪ್ಟನ್ ಪರಸ್ಪರ ಎದುರುಬಿದ್ದು ಬಿಗ್ ಫೈಟ್ ನಡೆಸಿದ್ದವು. ಮದವೇರಿದ ಎರಡೂ ಸಲಗಗಳು ಗ್ರಾಮಾಂತರ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಸಂಚರಿಸುತ್ತಾ ಸ್ಥಳೀಯರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದ್ದವು.
ಪರಸ್ಪರ ಎದುರು ಬಂದಾಗ ಇಬ್ಬರೂ ಆನೆಗಳು ಭಾರೀ ಶಬ್ದ ಮಾಡುತ್ತಾ ದೀರ್ಘ ಕಾಲ ಕಾಳಗ ನಡೆಸಿಕೊಂಡಿದ್ದವು. ಆ ಕಾಳಗದಲ್ಲಿ ಕ್ಯಾಪ್ಟನ್ ಎದುರು ಸೋತ ಭೀಮಾ, ತನ್ನ ಒಂದು ದಂತವನ್ನೇ ಕಳೆದುಕೊಂಡಿತ್ತು. ಆದಾಗ್ಯೂ, ಗಾಯಗಳಿಂದ ಇದೀಗ ಚೇತರಿಸಿಕೊಂಡಿರುವ ಭೀಮಾ ಮತ್ತೆ ಕಾಡಿನಲ್ಲಿ ಸಾಮಾನ್ಯವಾಗಿ ಸಂಚರಿಸುತ್ತಿರುವುದಾಗಿ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
For More Updates Join our WhatsApp Group :
