ಯಾದಗಿರಿ: ವಿಧಿಯಾಟವೆಂದರೆ ಇದೇ ಇರಬೇಕು! ಒಂದೇ ದಿನ ಒಂದೇ ಕುಟುಂಬದ ಇಬ್ಬರು ಸಹೋದರರು ಹೃದಯಾಘಾತಕ್ಕೆ ಬಲಿಯಾದ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ನಡೆದಿದೆ.
ಮೃತರನ್ನು ಶಂಶೋದ್ದೀನ್ (42) ಮತ್ತು ಇರ್ಫಾನ್ (38) ಎಂದು ಗುರುತಿಸಲಾಗಿದೆ. ಮೊದಲು ಅಣ್ಣ ಶಂಶೋದ್ದೀನ್ ಹೃದಯಾಘಾತದಿಂದ ಕುಸಿದರೆ, ಆ ಸುದ್ದಿ ತಿಳಿದ ತಮ್ಮ ಇರ್ಫಾನ್ ಗೂ ಹೃದಯಾಘಾತ ಬಂದು ಪ್ರಾಣ ಕಳೆದುಕೊಂಡಿದ್ದಾರೆ.ಎದೆ ನೋವು ಕಾಣಿಸಿಕೊಂಡ ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಒಂದೇ ದಿನ ಇಬ್ಬರನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಜೀವನದಲ್ಲೂ ಜೊತೆಯಾದ ಸಹೋದರರು, ಸಾವಿನಲ್ಲೂ ಒಂದಾಗಿದ್ದಾರೆ ಎಂಬ ವ್ಯಥಿತ ಚಿತ್ರ ಗ್ರಾಮದಲ್ಲಿ ಆವರಿಸಿದೆ.
For More Updates Join our WhatsApp Group :
