ಬೆಂಗಳೂರು : ಆಹಾರ ಮತ್ತು ಆರೋಗ್ಯ ಇಲಾಖೆ ಕಳೆದ ಕೆಲವು ತಿಂಗಳುಗಳಿಂದ ಜನರ ಆರೋಗ್ಯದ ಬಗ್ಗೆ ಸಾಕಷ್ಟು ನಿಗಾವಹಿಸಲು ಮುಂದಾಗಿದೆ. ಅಪಾಯಕಾರಿಯಾದ ಕೃತಕ ಬಣ್ಣ ನಿಷೇಧ, ರಾಸಾಯನಿಕಗಳ ಬಳಕೆಗೆ ಕಡಿವಾಣ ಸೇರಿದಂತೆ ಹಲವು ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲು ಮುಂದಾಗಿದೆ. ಈ ಮಧ್ಯೆ, ಆರೋಗ್ಯ ಇಲಾಖೆ ಮತ್ತೊಂದ್ದು ಪ್ರಯೋಗಕ್ಕೂ ಮುಂದಾಗಿದೆ. ಔಷಧ ನಿಯಂತ್ರಣ ಮಂಡಳಿಗೆ ರಕ್ತ ನಿಧಿ ಘಟಕಗಳ ಬಗ್ಗೆ ಹೆಚ್ಚು ಹಣ ಸೂಲಿಗೆ ಬಗ್ಗೆ ಸಾಲು ಸಾಲು ದೂರುಗಳು ಬಂದ ಕಾರಣ ಬ್ಲಡ್ ಘಟಕಗಳಿಗೆ ಭೇಟಿ ನೀಡಿ ಸ್ಯಾಂಪಲ್ಸ್ ಸಂಗ್ರಹಿಸಲು ಮುಂದಾಗಿದೆ. ಮತ್ತೊಂದೆಡೆ, ರಕ್ತನಿಧಿ ಘಟಕಗಳಿಗೆ ಅಪಾಯಕಾರಿ ಎಚ್ಐವಿ ಸೋಂಕಿತ ರಕ್ತ ಬರುತ್ತಿವೆ ಎಂಬ ಆರೋಪಗಳು ಆತಂಕಕ್ಕೆ ಕಾರಣವಾಗಿವೆ.

ಕ್ತ ನಿಧಿ ಘಟಕಗಳಲ್ಲಿ ಸ್ವಚ್ಛತೆ ಇರುವುದಿಲ್ಲ, ರಕ್ತ ಸಂಗ್ರಹ ಘಟಕದಲ್ಲಿ ನಿಯಮಗಳ ಪಾಲನೆ ಆಗುತ್ತಿಲ್ಲ, ಕಳ್ಳಾಟ ನಡೆಯುತ್ತಿವೆ ಎಂದು ಇತ್ತೀಚೆಗೆ ದೂರುಗಳು ಬಂದಿದ್ದವು. ಹೀಗಾಗಿ ಆರೋಗ್ಯ ಇಲಾಖೆ ರಕ್ತ ಸಂಗ್ರಹ ಘಟಕಗಳ ತಪಾಸಣೆ ಮಾಡುತ್ತಿದೆ. ಜನರಿಂದ ಕ್ಯಾಂಪ್ಗಳ ಮೂಲಕ ಸಂಗ್ರಹವಾದ ರಕ್ತ ಎಲ್ಲಿಗೆ ಹೋಗುತ್ತದೆ? ರಕ್ತ ನಿಧಿ ಘಟಕಗಳಲ್ಲಿ ಯಾವೆಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ? ಸ್ವಚ್ಛತೆ ಹೇಗಿದೆ ಎಂದು ಪರಿಶೀಲಿಸುವುದರ ಜತೆಗೆ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷಗೆ ಒಳಪಡಿಸಲು ಮುಂದಾಗಿದೆ.
ಬ್ಲಡ್ ಬ್ಯಾಂಕ್ಗಳಲ್ಲಿನ ರಕ್ತ ಪರಿಶೀಲಿಸಿದಾಗ ಕಂಡುಬಂತು ಆಘಾತಕಾರಿ ಅಂಶ
ಇತ್ತೀಚೆಗೆ ರಾಜ್ಯದಲ್ಲಿ ರಕ್ತದಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮತ್ತೊಂದೆಡೆ, ಬ್ಲಡ್ ಬ್ಯಾಂಕ್ಗಳಿಗೆ 2024–25ರಲ್ಲಿ ರಾಜ್ಯದ 230 ಕೇಂದ್ರಗಳಿಂದ ಜನರು ರಕ್ತದಾನ ಮಾಡಿದ್ದು, ಲಕ್ಷಂತಾರ ಯುನಿಟ್ ರಕ್ತ ಸಂಗ್ರಹವಾಗಿದೆ . ಈ ಪೈಕಿ 44,776 ಯುನಿಟ್ ರಕ್ತದ ಮಾದರಿಗಳನ್ನು ಪರೀಕ್ಷಿಸಿದಾಗ ಕೆಲವು ಮಾದರಿಗಳಲ್ಲಿ ಎಚ್ಐವಿ, ಹೆಪಟೈಟಿಸ್-B, ಹೆಪಟೈಟಿಸ್-C, ಸಿಫಿಲಿಸ್, ಮಲೇರಿಯಾ ಪಾಸಿಟಿವ್ ಕಂಡು ಬಂದಿದೆ. ಇದರಿಂದ, ಸಂಗ್ರಹಿತವಾದ 44,776 ಯುನಿಟ್ ರಕ್ತ ಈ ವರ್ಷ ವ್ಯರ್ಥವಾಗಿದೆ. ಈ ವರ್ಷದ ಒಟ್ಟಾರೆ ರಕ್ತದಾನದ ಪೈಕಿ ಮೊದಲ 6 ತಿಂಗಳಲ್ಲಿ ದಾನವಾಗಿ ಬಂದ ಶೇಕಡಾ 12.5 ರಕ್ತದಲ್ಲೇ ಸೋಂಕು ಹೆಚ್ಚಾಗಿ ಪತ್ತೆಯಾಗಿದೆ.