ಆ್ಯಂಕರ್ ಅನುಶ್ರೀ ಜೀವನವನ್ನು ಪ್ರತಿ ಹಂತದಲ್ಲೂ ಎಂಜಾಯ್ ಮಾಡ ಬಯಸುತ್ತಾರೆ. ಎಲ್ಲಾ ವಿಚಾರವನ್ನು ಗಂಭೀರವಾಗಿ ಸ್ವೀಕರಿಸಲು ಇಷ್ಟಪಡೋದಿಲ್ಲ. ಈಗ ಪತಿ ರೋಶನ್ಗೆ ಬರ್ತ್‌ಡೇ ವಿಶ್ ಮಾಡುವಾಗ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.
ನಟಿ ಅನುಶ್ರೀ ಹಾಗೂ ಅವರ ಪತಿ ರೋಶನ್ ಹಾಯಾಗಿ ದಾಂಪತ್ಯ ನಡೆಸುತ್ತಿದ್ದಾರೆ. ಇಂದು (ಅಕ್ಟೋಬರ್ 14) ರೋಷನ್ ಜನ್ಮದಿನ. ಈ ವಿಶೇಷ ದಿನದಂದು ಪತಿಗೆ ಅನುಶ್ರೀ ವಿಶ್ ಮಾಡಿದ್ದಾರೆ. ವಿಶೇಷ ಸಾಲುಗಳನ್ನು ಕೂಡ ಬರೆದಿದ್ದಾರೆ.
ಜೊತೆಯಲಿ ನಿನ್ನ ಜೊತೆಯಲಿ, ಸದಾ ಸಂತೋಷ ಇರಲಿ, ಜೊತೆಯಲಿ ನಿನ್ನ ಜೊತೆಯಲಿ, ನಿನ್ನೆಲ್ಲಾ ಕನಸು ನನಸಾಗಲಿ.. ಜೊತೆಯಲಿ ನಿನ್ನ ಜೊತೆಯಲಿ, ಅನು ನಾನಿರಲಿ, ಅನು ಮಾತ್ರ ಇರಲಿ..’ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಅನುಶ್ರೀ ಅವರು ಸದಾ ಫನ್ ಆಗಿ ಇರೋಕೆ ಇಷ್ಟಪಡುತ್ತಾರೆ. ಈಗ ಪತಿಗೆ ವಿಶ್ ಮಾಡುವಾಗಲೂ ‘ನಿನ್ನ ಜೊತೆ ನಾನು ಮಾತ್ರ ಇರಬೇಕು’ ಎಂಬರ್ಥ ಬರುವ ಸಾಲುಗಳನ್ನು ಬರೆದು ಪತಿಯ ಕಾಲೆಳೆದಿದ್ದಾರೆ.
For More Updates Join our WhatsApp Group :
