ಉತ್ತರ ಪ್ರದೇಶ : ಇತ್ತೀಚಿನ ದಿನಗಳಲ್ಲಿ ದೇಶದ ಸಾಕಷ್ಟು ಕಡೆಗಳಲ್ಲಿ ವರದಕ್ಷಿಣೆಕಿರುಕುಳದ ಹಲವು ಘಟನೆಗಳು ಬೆಳಕಿಗೆ ಬರುತ್ತಿವೆ. ಹಲವು ವರ್ಷಗಳ ಹಿಂದೆ ಬಡ ಕುಟುಂಬದಿಂದ ಹೆಣ್ಣನ್ನು ಮದುವೆ ಮಾಡಿಕೊಂಡು ಹೋಗಿ ವರದಕ್ಷಿಣೆಗಾಗಿ ಪೀಡಿಸುತ್ತಿರುವ ಘಟನೆಗಳು ನಡೆಯುತ್ತಿದ್ದವು. ಆದರೆ ಈಗೆಲ್ಲಾ ಮಗಳಿಗೆ ಮೈತುಂಬಾ ಒಡವೆಗಳನ್ನು ಹಾಕಿ, ಅಳಿಯನಿಗೆ ಕಾರು, ಬೈಕ್, ಚಿನ್ನವೆಲ್ಲಾ ಕೊಟ್ಟು ಲಕ್ಷ ಲಕ್ಷ ಖರ್ಚು ಮಾಡಿ ಮದುವೆ ಮಾಡಿಕೊಟ್ಟರೂ ಈ ವರದಕ್ಷಿಣೆ ಪಿಡುಗಿನಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತಿಲ್ಲ.
ಉತ್ತರ ಪ್ರದೇಶದ ಅಮ್ರೋಹಾದಲ್ಲಿ ವರದಕ್ಷಿಣೆ ಕಿರುಕುಳದ ಘಟನೆ ಬೆಳಕಿಗೆ ಬಂದಿದೆ. ಅತ್ತೆ -ಮಾವ ಸೊಸೆಗೆ ಆ್ಯಸಿಡ್ ಕುಡಿಸಿರುವ ಘಟನೆ ವರದಿಯಾಗಿದ್ದು, 17 ದಿನಗಳ ಬಳಿಕ ಆಕೆ ಸಾವನ್ನಪ್ಪಿದ್ದಾಳೆ.ಗುಲ್ ಫಿಜಾ ಎಂದು ಗುರುತಿಸಲಾದ ಮಹಿಳೆ ಮೊರಾದಾಬಾದ್‌ನ ಆಸ್ಪತ್ರೆಯಲ್ಲಿ 17 ದಿನಗಳ ಕಾಲ ಹೋರಾಡಿದ ನಂತರ ಮೃತಪಟ್ಟಿದ್ದಾಳೆ.
ಗುಲ್ ಫಿಜಾಳ ತಂದೆ ಫುರ್ಖಾನ್, ತಮ್ಮ ಮಗಳು ಗುಲ್ ಫಿಜಾಳನ್ನು ಸುಮಾರು ಒಂದು ವರ್ಷದ ಹಿಂದೆ ಅಮ್ರೋಹಾದ ಕಲಾ ಖೇಡಾ ಗ್ರಾಮದ ಪರ್ವೇಜ್ ಜೊತೆ ವಿವಾಹವಾಗಿದ್ದರು ಎಂದು ತಿಳಿಸಿದ್ದಾರೆ.ಮದುವೆಯಾದಾಗಿನಿಂದಲೂ ತನ್ನ ಮಗಳಿಗೆ ಆಕೆಯ ಪತಿ, ಅತ್ತೆ, ಮಾವ ಮತ್ತು ಇತರ ಕುಟುಂಬ ಸದಸ್ಯರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಫುರ್ಖಾನ್ ಆರೋಪಿಸಿದ್ದಾರೆ. ಆಗಸ್ಟ್ 11 ರಂದು, ಗುಲ್ ಫಿಜಾಳ ಅತ್ತೆ ಮಾವ ಆಕೆಗೆ ಆ್ಯಸಿಡ್ ಕುಡಿಯುವಂತೆ ಒತ್ತಾಯಿಸಿದಾಗ ಕಿರುಕುಳ ಹಿಂಸಾತ್ಮಕ ರೂಪ ತಾಳಿತ್ತು.
ಆಕೆಯನ್ನು ಮೊರಾದಾಬಾದ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆ 17 ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದಳು. ವೈದ್ಯರ ಪ್ರಯತ್ನಗಳ ಹೊರತಾಗಿಯೂ, ಚಿಕಿತ್ಸೆಯ ಸಮಯದಲ್ಲಿ ಆಕೆ ಸಾವನ್ನಪ್ಪಿದ್ದಾರೆ. ಆಕೆಯ ಮರಣೋತ್ತರ ಪರೀಕ್ಷೆಯನ್ನು ಮೊರಾದಾಬಾದ್‌ನಲ್ಲಿಯೂ ನಡೆಸಲಾಯಿತು.
For More Updates Join our WhatsApp Group :
