ಬೆಂಗಳೂರು: ಮಾಜಿ ಸಚಿವ ಕೆಎನ್ ರಾಜಣ್ಣ ಅವರು ಬಿಜೆಪಿ ಸೇರ್ಪಡೆಗೆ ಅರ್ಜಿ ಹಾಕಿಕೊಂಡಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಮಾಗಡಿ ಎಚ್.ಸಿ. ಬಾಲಕೃಷ್ಣ, ಪಕ್ಷದ ಒಳಗೇ ಬಾಂಬ್ ಸಿಡಿಸಿದ್ದಾರೆ.
ಬಾಲಕೃಷ್ಣ ಅವರ ಸ್ಫೋಟಕ ಹೇಳಿಕೆ
* “ರಾಜಣ್ಣ ತಮ್ಮ ಮಾತಿನಿಂದಲೇ ಕೆಟ್ಟುಕೊಂಡಿದ್ದಾರೆ. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬಂತೆ ನಡೆದುಕೊಂಡಿದ್ದಾರೆ.”
* “ಇದರಲ್ಲಿ ನಮ್ಮ ಪಕ್ಷದ ನಾಯಕರ ಯಾವುದೇ ಷಡ್ಯಂತ್ರವಿಲ್ಲ. ಪಕ್ಷದ ಮೇಲೆ ಗೂಬೆ ಕೂರಿಸಲು ಪಿತೂರಿ ನಡೆಯುತ್ತಿದೆ.”
* “ಡೆಲ್ಲಿ ಸಮಾವೇಶ ಮಾಡಲಿ, ನಾವು ಹಿಡಿದುಕೊಳ್ಳಲು ಸಾಧ್ಯವೇ? ಅವರ ಬ್ರೈನ್ ಮ್ಯಾಪಿಂಗ್ ಮಾಡಿದರೆ ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುದು ಬಹಿರಂಗವಾಗುತ್ತದೆ.”
* “ನಮ್ಮ ಸರ್ಕಾರ ಇರುವುದರಿಂದಲೇ ಅವರು ಇಲ್ಲಿಯವರೆಗೆ ಕಾಂಗ್ರೆಸ್‌ನಲ್ಲಿ ಉಳಿದಿದ್ದಾರೆ. ಆದರೆ ಅವರು ಬೇರೆ ನಾಯಕರ ಸಂಪರ್ಕದಲ್ಲಿದ್ದಾರೆ.”
ರಾಜಕೀಯ ವಲಯದಲ್ಲಿ ಗರಂ ಚರ್ಚೆ
ರಾಜಣ್ಣ ಬಿಜೆಪಿ ಸೇರ್ಪಡೆ ವಿಚಾರದಲ್ಲಿ ಯಾವುದೇ ಅಧಿಕೃತ ದೃಢೀಕರಣ ಇಲ್ಲದಿದ್ದರೂ, ಬಾಲಕೃಷ್ಣ ಅವರ ಹೇಳಿಕೆ ಕಾಂಗ್ರೆಸ್ ಒಳಗಿನ ಅಸಮಾಧಾನ ಹಾಗೂ ಅನುಮಾನಗಳನ್ನು ಹೆಚ್ಚಿಸಿದೆ.
For More Updates Join our WhatsApp Group :
