ಬೆಂಗಳೂರು: ಬೆಂಗಳೂರು ನಗರದ ಮಾದನಾಯಕನಹಳ್ಳಿ ಹತ್ತಿರದ ಹುಸ್ಕೂರು APMC ಬಳಿ ನಡೆದ ದುರಂತದಲ್ಲಿ 26 ವರ್ಷದ ಟೆಕ್ಕಿ ಪ್ರಿಯಾಂಕಾ ಸಾವನ್ನಪ್ಪಿದ್ದಾರೆ. ಈ ಘಟನೆಯ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಸ್ಥಳೀಯರೊಬ್ಬರು, ‘ಪೈಪ್ ಹಾಕಲೆಂದು ರಸ್ತೆ ಅಗೆದು ಹಾಕಿದ್ದಾರೆ.
ಕೆಲಸವಾದ ನಂತರ ಅದನ್ನು ಮುಚ್ಚಿಯೇ ಇಲ್ಲ. ಇದರಿಂದಾಗಿ ದಿನನಿತ್ಯ ಪ್ರಯಾಣಿಸುವವರಿಗೆ ತೊಂದರೆಯಾಗುತ್ತಿದೆ. ಈ ದುರವಸ್ಥೆಗೆ ಈಗಾಗಲೇ ಒಂದು ಹುಡುಗಿಯು ಬಲಿಯಾಗಿದ್ದಾಳೆ. ಇದು ಹೆಚ್ಚಿನ ಜನಸಂದಣಿಯಿರುವ ಜಾಗವಾದ್ದರಿಂದ ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.
For More Updates Join our WhatsApp Group :
