ರಾಷ್ಟ್ರಪತಿ ದ್ರೌಪದಿ ಮುರ್ಮು ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ: ಫೈಟರ್ ಪ್ಲೇಟ್ ಸೂಟ್ ಧರಿಸಿ ಪ್ರದರ್ಶನ.

ರಾಷ್ಟ್ರಪತಿ ದ್ರೌಪದಿ ಮುರ್ಮು ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ: ಫೈಟರ್ ಪ್ಲೇಟ್ ಸೂಟ್ ಧರಿಸಿ ಪ್ರದರ್ಶನ.

ಅಂಬಾಲಾ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಅಂಬಾಲಾ ವಾಯುನೆಲೆಯಿಂದ ಫ್ರೆಂಚ್ ನಿರ್ಮಿತ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ವಾಯುಪಡೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಕೂಡ ಉಪಸ್ಥಿತರಿದ್ದರು.

2023 ರಲ್ಲಿ, ರಾಷ್ಟ್ರಪತಿ ಮುರ್ಮು ಅವರು ಅಸ್ಸಾಂನ ತೇಜ್‌ಪುರ ವಾಯುಪಡೆ ನಿಲ್ದಾಣದಲ್ಲಿ ಭಾರತೀಯ ವಾಯುಪಡೆಯ ಸುಖೋಯ್-30MKI ಫೈಟರ್ ಜೆಟ್‌ನಲ್ಲಿ ಹಾರಾಟ ನಡೆಸಿದ್ದರು. ಬ್ರಹ್ಮಪುತ್ರ ನದಿ ಮತ್ತು ತೇಜ್‌ಪುರ ಕಣಿವೆಯ ಮೇಲೆ ಹಾರಾಟ ನಡೆಸಿದ್ದರು, ನಂತರ ಸುರಕ್ಷಿತವಾಗಿ ನೆಲೆಗೆ ಮರಳಿದ್ದರು. ಈ ಬಾರಿ ಅಂಬಾಲಾ ವಾಯುನೆಲೆಯ ಸುತ್ತಲೂ ಅವರು ಹಾರಾಟ ನಡೆಸಲಿದ್ದಾರೆ. ಅವರು ಫೈಟರ್ ಪ್ಲೇಟ್ ಸೂಟ್ ಧರಿಸಿ ವಿಮಾನದಲ್ಲಿ ಕುಳಿತಿದ್ದು ಎಲ್ಲರ ಗಮನ ಸೆಳೆದಿತ್ತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *