ಬೆಂಗಳೂರು: ಬೇಲೂರಿನಲ್ಲಿ ದೋಸೆ ಪ್ರಿಯರು ತಪ್ಪದೆ ಭೇಟಿ ನೀಡುವ ಸ್ಥಳ ಎಂದರೆ, ಲೆಜೆಂಡರಿ ವಿದ್ಯಾರ್ಥಿ ಭವನ. ಸಿಕ್ಕಾಪಟ್ಟೆ ಫೇಮಸ್ ಈ ಉಪಾಹಾರ ಗೃಹಕ್ಕೆ ಇದೀಗ ವಿಶೇಷ ಅತಿಥಿ ಆಗಿ ಇಸ್ರೋದ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ ಪತ್ನಿಯೊಂದಿಗೆ ಭೇಟಿ ನೀಡಿದ್ದು, ಈ ಕ್ಷಣಗಳು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿವೆ!
‘ರಾಕೆಟ್ ಮ್ಯಾನ್’ ದೋಸಾ ಸ್ಟೈಲ್
ಡಾ. ಸೋಮನಾಥ್ ಅವರ ಭೇಟಿಯನ್ನು ಹೋಟೆಲ್ ಅಧಿಕೃತ ಇನ್‌ಸ್ಟಾಗ್ರಾಂ ಖಾತೆ @vidyarthibhavan ನಲ್ಲಿ ಹಂಚಿಕೊಳ್ಳಲಾಗಿದ್ದು, ಹೀಗೆ ಬರೆದು ಭಾವನಾತ್ಮಕ ಪೋಸ್ಟ್ ಹಾಕಲಾಗಿದೆ:
“ಇಂದು ಸಂಜೆ ವಿದ್ಯಾರ್ಥಿ ಭವನದಲ್ಲಿ ಇಸ್ರೋದ ಮಾಜಿ ಅಧ್ಯಕ್ಷರಾದ ಡಾ. ಎಸ್. ಸೋಮನಾಥ್ ಅವರಿಗೆ ಗೌರವ ಸಲ್ಲಿಸಲು ಅವಕಾಶ ದೊರೆತಿದ್ದು ಹೆಮ್ಮೆ. ಚಂದ್ರಯಾನ-3 ಯಶಸ್ಸಿನ ನಾಯಕನನ್ನು ನಮ್ಮ ಪರಂಪರೆಯ ಆಹಾರ ಹಾಗೂ ಸುವಾಸನೆಯೊಂದಿಗೆ ಸ್ವಾಗತಿಸಿದ್ದೆವು.“
ಏನು ಸವಿದರು ಸೋಮನಾಥ್ ದಂಪತಿ?
ಹೆಚ್ಚು ಆಕರ್ಷಣೆ ಗಳಿಸಿದ ಫೋಟೋಗಳಲ್ಲಿ, ಡಾ. ಸೋಮನಾಥ್ ಪತ್ನಿಯೊಂದಿಗೆ ಬೆಣ್ಣೆ ಮಸಾಲೆ ದೋಸೆ ಸವಿಯುತ್ತಿರುವ ದೃಶ್ಯವಿದೆ. ಮತ್ತೊಂದು ಫೋಟೋದಲ್ಲಿ ಅವರು ದೋಸೆಯ ಪ್ಲೇಟ್ ಹಿಡಿದು ನಗುತ್ತಿರುವ ವೆಟರ್ ಪಕ್ಕದಲ್ಲಿ ಖುಷಿಯಿಂದ ಪೋಸ್ ನೀಡಿದ್ದಾರೆ.
ನೆಟ್ಟಿಗರಿಂದ ಮೆಚ್ಚುಗೆ
ಈ ಪೋಸ್ಟ್‌ಗೆ ಹಲವಾರು ಪಾಸಿಟಿವ್ ಕಾಮೆಂಟ್‌ಗಳು ಬಂದಿವೆ:
- “🚀 Rocket Man with Dosa Man!“
- “ಸುಪರ್ 👌🏻”
- “ಇದಕ್ಕೆ ಹೆಸರೂ ಇದೆ, ರಸವೂ ಇದೆ!”
- “ಇದು ನಮ್ಮ ನಮ್ ಬೆಂಗಳೂರು ಸ್ಟೈಲ್!!
ವಿದ್ಯಾರ್ಥಿ ಭವನ – ದೋಸೆ ಪ್ರಿಯರ ತೀರ್ಥ!
ಶನಿವಾರ – ಭಾನುವಾರ ದೋಸೆಯ ರಸಾಸ್ವಾದಕ್ಕಾಗಿ ಜನ ಅಲೆಮಾರಿ ಮಾಡುವ ಈ ಜಾಗ, ಈಗ ಡಾ. ಎಸ್. ಸೋಮನಾಥ್ ಅವರಿಂದ ಮತ್ತೊಂದು ಗೌರವ ಪಡೆದಿದೆ. ರಾಜಕಾರಣಿಗಳು, ಸೆಲೆಬ್ರಿಟಿಗಳು, ವಿಜ್ಞಾನಿಗಳಷ್ಟೆ ಅಲ್ಲ, ಎಂಟುರಿಂದ ಎಂಭತ್ತರ ವರೆಗೆ ಎಲ್ಲರ ಹೃದಯ ಗೆದ್ದಿರುವುದು ಇದುವರೆಗಿನ ಹೋಟೆಲ್ ಯಶಸ್ಸಿನ ಗುಟ್ಟು.
For More Updates Join our WhatsApp Group :
