ತುಮಕೂರು : ಕೋವಿಡ್ ಸೋಂಕಿನಿಂದ ಮನೆಯಲ್ಲಿಯೇ ಐಸುಲೇಷನ್ ಗೆ ಒಳಗಾಗಿರುವ ಸೋಂಕಿತರನ್ನು ಭೇಟಿ ಮಾಡುವ ಮೂಲಕ ಅರಿವು ಮೂಡಿಸಿದ್ದಾರೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರು.
ತುಮಕೂರು ತಾಲೂಕಿನ ಗೂಳೂರಿನಲ್ಲಿ ಕೋವಿಡ್ ಸೋಂಕಿನಿಂದ ಮನೆಯಲ್ಲೇ ಐಸುಲೇಷನ್ ಒಳಗಾಗಿರುವ ಜನರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿ ಡಾ.ಕೋನ ವಂಸಿ ಕೃಷ್ಣ ರವರು ಭೇಟಿ ಮಾಡಿ ಆತ್ಮಸ್ದೃರ್ಯ ತುಂಬಿದರು.
ಯಾವುದೇ ಆತಂಕಕ್ಕೆ ಒಳಗಾಗದೆ ನಿರ್ಬೀತಿಯಿಂದ ಇರುವಂತೆ ಹಾಗೂ ಜಾಗರೂಕತೆ ವಹಿಸುವಂತೆ ಸಲಹೆ ನೀಡಿದರು. ಸೋಂಕಿನ ಲಕ್ಷಣಗಳು ಕಂಡು ಬಂದ ತಕ್ಷಣವೇ ಪರೀಕ್ಷೆಯನ್ನು ನಡೆಸಿ ವೈದ್ಯರಿಂದ ಚಿಕಿತ್ಸೆಯನ್ನು ಪಡೆಯಿರಿ ನಿರ್ಲಕ್ಷವನ್ನು ಮಾಡಬೇಡಿ ಎಂದು ಹೇಳಿದರು.
Pragati TV Social Connect for more latest u