ಕೊರಟಗೆರೆ:- ಪೂರ್ವಿಕರು ತಲೆ ತಲೆ ಮಾರಿನಿಂದಲೂ ನಮ್ಮ ತಾತ ಮುತ್ತಾತರ ಅಂತ್ಯಕ್ರಿಯೆ ಗೊಳಿಸಿದ ಸ್ಮಶಾನ ಸ್ಥಳವನ್ನ ಖಾಸಗಿ ವ್ಯಕ್ತಿ ಓರ್ವ ಕಬಳಿಸುತ್ತಿದ್ದು ನಮಗೆ ಸ್ಮಶಾನ ಜಾಗ ಬಿಡಿಸಿಕೊಡಿ ಎಂದು ಊರಿನ ಸ್ಥಳಿಯ ನೂರಾರು ಜನ ಸಾರ್ವಜನಿಕರು ತಹಸೀಲ್ದಾರ್ ಮಂಜುನಾಥ್ ಅವರಿಗೆ ಸ್ಥಳ ಬಿಡಿಸಿಕೊಡಿ ಎಂದು ಆಗ್ರೆöÊಹಿಸಿ ಮನವಿ ಸಲ್ಲಿಸಿದ ಘಟನೆ ಇಂದು ತಹಸಿಲ್ದಾರ್ ಕಚೇರಯಲ್ಲಿ ಜರುಗಿತು.
ಕೊರಟಗೆರೆ ತಾಲೂಕಿನ ಹೊಸಹಳ್ಳಿ ಸರ್ವೇ ನಂಬರ್ ೧೬೯ ರಲ್ಲಿ ಸುಮಾರು ನೂರಾರು ವರ್ಷಗಳಿಂದ ನಮ್ಮ ಪೂರ್ವಿಕರ ಅಂತ್ಯಕ್ರಿಯೆ ನಡೆಸಿದಂತ ಸ್ಥಳವನ್ನು ಖಾಸಗಿ ವ್ಯಕ್ತಿಯೂರ್ವ ಈ ಜಮೀನನ್ನ ನಾನು ಕೊಂಡುಕೊAಡಿದ್ದೇನೆ ಎಂದು ನಮ್ಮ ಪೂರ್ವಿಕರ ಕೋರಿಗಳನ್ನ ತೆರವುಗೊಳಿಸಲು ಮುಂದಾಗಿದ್ದಾರೆ, ಆದ್ದರಿಂದ ನಮಗೆ ರಕ್ಷಣೆ ಕೊಡಿ ಹಾಗೂ ನಮಗೆ ಸ್ಮಶಾನ ಜಾಗ ಗುರ್ತಿಸಿ ಕೊಡಿ ಹಾಗೂ ಈಗಿರುವ ಸ್ಮಶಾನ ಜಾಗವನ್ನು ಉಳಿಸಿಕೊಡಿ ಎಂದು ಮನವಿ ಮಾಡಿಕೊಂಡರು.
ಹೊಸಹಳ್ಳಿ ಸರ್ವೆ ನಂಬರ್ ೧೬೯ರಲ್ಲಿನ ಸ್ಮಶಾನವನ್ನು ನೂರಾರು ವರ್ಷಗಳಿಂದ ಬಳಸಿಕೊಂಡು ಬಂದಿದ್ದೇವೆ, ಖಾಸಗಿ ವ್ಯಕ್ತಿ ಓರ್ವ ಆ ಜಾಗವನ್ನು ನನ್ನದು ಎಂದು ತಂತಿ ಬೇಲಿ ಹಾಕಿ ವಶಕ್ಕೆ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದು, ಆ ಜಾಗದಲ್ಲಿ ನೂರಾರು ವರ್ಷಗಳಿಂದ ನಮ್ಮ ಪೂರ್ವಿಕರ ಗೋರಿಗಳನ್ನು ಕಟ್ಟಿದ್ದಾರೆ ಅವುಗಳನ್ನು ಉಳಿಸಿಕೊಡಿ, ಒಂದು ವೇಳೆ ಖಾಸಗಿ ಅವರದಾದರೂ ಸರ್ಕಾರದಿಂದ ಕೊಂಡು ಸ್ಮಶಾನ ಜಾಗಕ್ಕೆ ಅವಕಾಶ ಮಾಡಿಕೊಡಿ ಎಂದು ಸಾರ್ವಜನಿಕರು ಮನವಿ ಮಾಡಿಕೊಂಡರು.
ದಲಿತರು ಹಾಗೂ ಎಸ್ಸಿ ಎಸ್ಟಿ ಗಳು ಹೆಚ್ಚಿರುವ ಈ ಗ್ರಾಮದಲ್ಲಿ ಬಹಳಷ್ಟು ಬಡ ಜನತೆಗೆ ತಾವು ಸತ್ತರೆ ಅಂತ್ಯಕ್ರಿಯೆಗೆ ೬ ಅಡಿ ೩ಅಡಿ ಜಾಗವಿಲ್ಲ ಭೂ ರಹಿತ ಜನರೇ ಹೆಚ್ಚಾಗಿ ವಾಸವಿದ್ದು, ಒಂದು ವೇಳೆ ಈಗ ಅಂತ್ಯಕ್ರಿಯೆ ನಡೆಸುತ್ತಿರುವ ಸ್ಮಶಾನ ಜಾಗವನ್ನ ಖಾಸಗಿ ವ್ಯಕ್ತಿ ವಶಪಡಿಸಿಕೊಂಡರೆ, ಬಹಳಷ್ಟು ಜನ ಬಹುಹಿತ ಜನರು ಸರ್ಕಾರಿ ಜಾಗ ರಸ್ತೆ ಬದಿಯಲ್ಲೂ ಜಯಮಂಗಲ ನದಿ ಪಾತ್ರದಲ್ಲಿಯೂ ಇಲ್ಲ ನದಿಯ ಮಧ್ಯ ಭಾಗ ಮಳ್ಳನ್ನು ತೆಗೆದು ಅಂತ್ಯಕ್ರಿಯೆ ನಡೆಸುವ ಅನಿವಾರ್ಯತೆ ಇದೆ, ಆದ್ದರಿಂದ ದಯಮಾಡಿ ಕಂದಾಯ ಇಲಾಖೆ ಈ ಜಾಗವನ್ನು ನಮಗೆ ಸಾರ್ವಜನಿಕರ ಅವಶ್ಯಕತೆ ಇರುವಂತಹ ಸ್ಮಶಾನಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ತಹಸೀಲ್ದಾರ್ ಮಂಜುನಾಥ್ ರವರಿಗೆ ಕೈಮುಗಿದು ಸಾರ್ವಜನಿಕರು ಬೇಡಿಕೊಂಡರು.
ಸಾರ್ವಜನಿಕರ ಅಹವಾದ ಸ್ವೀಕರಿಸಿದ ತಹಸಿಲ್ದಾರ್ ಮಂಜುನಾಥ್ ಸ್ಥಳದಲ್ಲಿಯೇ ಅರ್ಜಿ ಹಿಡಿದು ತತಕ್ಷಣ ಸ್ಥಳಕ್ಕೆ ಕಂದಾಯ ಇಲಾಖೆಯ ಕಂದಾಯ ತನಿಖಾ ಅಧಿಕಾರಿ, ವಿಎ ಹಾಗೂ ಆರ್ ಐ ತಾಲೂಕು ಸರ್ವೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಸ್ಥಳದ ವಾಸ್ತವಾಂಶವನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು, ದಾಖಲಾತಿ ಇಲ್ಲದಿದ್ದರೆ ಅತಿಕ್ರಮ ಪ್ರವೇಶ ಮಾಡಿರುವ ಖಾಸಗಿ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು, ಹೊಸಹಳ್ಳಿ ಗ್ರಾಮಸ್ಥರಿಗೆ ಸ್ಮಶಾನ ಜಾಗಕ್ಕೆ ತ್ವರಿತವಾಗಿ ಜಾಗ ನೀಡಲಾಗುವುದು, ಒಂದು ವೇಳೆ ಇದೇ ಜಾಗವನ್ನ ಸಾರ್ವಜನಿಕರು ಅತಿ ಹೆಚ್ಚು ಒತ್ತಡ ಹಾಕುತ್ತಿರುವುದರಿಂದ ಪರಿಶೀಲನೆ ನಡೆಸಿ ಕಾನೂನಾತ್ಮಕವಾಗಿ ಸಾರ್ವಜನಿಕರಿಗೆ ಅನುಕೂಲಕರವಾದ ವಾತಾವರಣ ಕಲ್ಪಿಸಲಾಗುವುದು.