ಅಹಮದಾಬಾದ್ : ಅಪ್ರಾಪ್ತ ಮಗನ ಎದುರೇ ಕಾನ್ಸ್ಟೆಬಲ್ ಪತಿಯನ್ನು ಕೊಲೆ ಮಾಡಿ ಮಹಿಳೆ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಹಮದಾಬಾದ್ನಲ್ಲಿ ನಡೆದಿದೆ. ಮಹಿಳೆ 7 ವರ್ಷದ ಮಗನ ಎದುರು ಗಂಡನನ್ನು ಕೊಲೆ ಮಾಡಿದ್ದಾಳೆ.
ಡ್ಯಾನಿಲಿಮ್ಡಾ ಪೊಲೀಸ್ ಲೈನ್‌ನಲ್ಲಿ ದಂಪತಿಗೆ ನೀಡಲಾದ ಕ್ವಾರ್ಟರ್ಸ್‌ನಲ್ಲಿ ಈ ಘಟನೆ ನಡೆದಿದೆ ಎಂದು ಉಪ ಪೊಲೀಸ್ ಆಯುಕ್ತ ರವಿ ಮೋಹನ್ ಸೈನಿ ತಿಳಿಸಿದ್ದಾರೆ. ಎ ಡಿವಿಷನ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮುಖೇಶ್ ಪರ್ಮಾರ್ ಮತ್ತು ಅವರ ಪತ್ನಿ ಸಂಗೀತಾ ನಡುವೆ ದೀರ್ಘಕಾಲದ ವೈವಾಹಿಕ ಭಿನ್ನಾಭಿಪ್ರಾಯವಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದರು.
ಬೆಳಗ್ಗೆ ದಂಪತಿ ನಡುವೆ ಜಗಳ ನಡೆದಿತ್ತು, ಸಂಗೀತಾ ದೊಣ್ಣೆಯಿಂದ ಗಂಡನ ತಲೆಗೆ ಹೊಡೆದಿದ್ದರು. ಪರಿಣಾಮ ಪರ್ಮಾರ್ ಸ್ಥಳದಲ್ಲೇ ಸಾವನ್ನಪ್ಪಿದರು. ನಂತರ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಪತ್ರ ಬರೆದಿದ್ದಾರೆ, ಇದು ವೈವಾಹಿಕ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ ಜಗಳವಾಗಿದೆ ಎಂದು ಬಹಿರಂಗಪಡಿಸಿದೆ ಎಂದು ಡಿಸಿಪಿ ಹೇಳಿದರು.
ಈ ಸಲ ನಿನಗೆ ರಾಖಿ ಕಟ್ಟೋಕೆ ಆಗಲ್ಲ, ತಮ್ಮನಿಗೆ ಪತ್ರ ಬರೆದಿಟ್ಟು ಮಹಿಳೆ ಆತ್ಮಹತ್ಯೆ ಮದುವೆಯಾಗಿ ಕೇವಲ ಆರು ತಿಂಗಳು ಕಳೆದಿತ್ತಷ್ಟೇ, ಶ್ರೀವಿದ್ಯಾ ಇನ್ನಿಲ್ಲ ಎಂಬ ಸುದ್ದಿ ಕೇಳಿ ಕುಟುಂಬದವರಿಗೆ ಸಿಡಿಲು ಬಡಿದಂತಾಗಿತ್ತು. ಆಕೆ ತಮ್ಮನಿಗೆ ಬರೆದ ಪತ್ರ ಕರುಳು ಹಿಂಡುವಂತಿತ್ತು. ಈ ಸಲ ನನಗೆ ರಾಖಿ ಕಟ್ಟೋಕೆ ಆಗಲ್ಲ, ಕ್ಷಮಿಸಿಬಿಡು ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.
24 ವರ್ಷದ ಶ್ರೀವಿದ್ಯಾ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಕಾಲೇಜು ಉಪನ್ಯಾಸಕಿಯಾಗಿದ್ದರು. ಆರು ತಿಂಗಳ ಹಿಂದಷ್ಟೇ ರಾಂಬಾಬು ಎಂಬುವವರನ್ನು ಮದುವೆಯಾಗಿದ್ದರು. ಮದುವೆಯಾಗಿ ತಿಂಗಳಿನಿಂದಲೇ ಗಂಡನ ಮನೆಯವರಿಂದ ಕಿರುಕುಳ ಶುರುವಾಗಿತ್ತು ಎಂದು ಶ್ರೀವಿದ್ಯಾ ಪತ್ರದಲ್ಲಿ ಬರೆದಿದ್ದಾರೆ.
ರಾಂಬಾಬು ಕುಡಿದು ಮನೆಗೆ ಬರುತ್ತಿದ್ದ. ದೈಹಿಕ ಹಿಂಸೆ ನೀಡುತ್ತಿದ್ದ, ಮಾತಿನಲ್ಲಿ ನಿಂದಿಸುತ್ತಿದ್ದ. ತನ್ನನ್ನು ಅಪಹಾಸ್ಯ ಮಾಡುತ್ತಿದ್ದ. ಬೇರೆ ಮಹಿಳೆಯರ ಮುಂದೆ ತನ್ನನ್ನು ನಿಷ್ಪ್ರಯೋಜಕ ಎಂದು ಕರೆಯುತ್ತಿದ್ದ ಎಂದು ಆಕೆ ಬರೆದಿದ್ದಾರೆ. ನಿರಂತರ ಕಿರುಕುಳದಿಂದ ಬೇಸತ್ತು ಮಹಿಳೆ ಈ ತಪ್ಪು ಹೆಜ್ಜೆ ಇಡಬೇಕಾಯಿತು.
For More Updates Join our WhatsApp Group :