ನಟಿಗೆ ಆನ್ಲೈನ್ ಕಿರುಕುಳ: ಇಬ್ಬರ ಬಂಧನ

ನಟಿಗೆ ಆನ್ಲೈನ್ ಕಿರುಕುಳ: ಇಬ್ಬರ ಬಂಧನ

ಎಐ ಬಳಸಿ ಅಶ್ಲೀಲ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪ

ನಟಿಯರಿಗೆ ಆನ್​ಲೈನ್ ಕಿರುಕುಳ ಎಂಬುದು ಪಿಡುಗಾಗಿ ಪರಿಣಮಿಸಿದೆ. ಹಲವಾರು ನಟಿಯರು ಆನ್​​ಲೈನ್ ಕಿರುಕುಳದಿಂದ ತೀವ್ರ ಸಮಸ್ಯೆ, ಮಾನಸಿಕ ಹಿಂಸೆ ಅನುಭವಿಸುತ್ತಲೇ ಇದ್ದಾರೆ. ಅಶ್ಲೀಲ ಕಮೆಂಟುಗಳು, ಎಐ ಜನರೇಟೆಡ್ ಅಶ್ಲೀಲ ವಿಡಿಯೋಗಳು, ತಿರುಚಿದ ಚಿತ್ರಗಳು ಹೀಗೆ ನಟಿಯರನ್ನು ಹಲವು ರೀತಿಯಲ್ಲಿ ದುರುಳರು ಕಾಡುತ್ತಲೇ ಬಂದಿದ್ದಾರೆ. ಆದರೆ ಕೆಲವು ನಟಿಯರು ಮಾತ್ರ ಇಂಥಹವರ ವಿರುದ್ಧ ಹೋರಾಡುವ ಧೈರ್ಯ ತೋರುತ್ತಾರೆ. ಇತ್ತೀಚೆಗೆ ಸೈಬರ್ ಪೊಲೀಸರು ಸಹ ಇಂಥಹಾ ಟ್ರೋಲ್​​ಗಳ ವಿರುದ್ಧ ಗಂಭೀರವಾಗಿದ್ದು, ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ. ಇದೀಗ ತೆಲುಗಿನ ಗ್ಲಾಮರಸ್ ನಟಿಯೊಬ್ಬರಿಗೆ ಆನ್​​ಲೈನ್ ಕಿರುಕುಳ ನೀಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಈ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ (Forensic) ತನಿಖೆಗೆ ಕಳುಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಒಟ್ಟು 73 ವ್ಯಕ್ತಿಗಳು ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಇದರಲ್ಲಿ ಕೆಲವು ಮಾಧ್ಯಮ ಪ್ರತಿನಿಧಿಗಳು ಮತ್ತು ಪ್ರಭಾವಿ ವ್ಯಕ್ತಿಗಳ ಹೆಸರೂ ಇದೆ ಎಂದು ತಿಳಿದುಬಂದಿದೆ. ನಟಿ ಅನಸೂಯ ಅವರು ಮಹಿಳೆಯರ ಉಡುಪಿನ ಕುರಿತಾದ ಚರ್ಚೆಯೊಂದರಲ್ಲಿ ತಮ್ಮ ವೈಯಕ್ತಿಕ ಸ್ವಾತಂತ್ರ್ಯದ ಪರವಾಗಿ ಮಾತನಾಡಿದ್ದರು. ಇದರ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಟ್ರೋಲ್ ಮತ್ತು ಹರಿತವಾದ ನಿಂದನೆಗಳು ಆರಂಭವಾಗಿದ್ದವು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *