ಕರ್ನಾಟಕದ ವಿವಿಧ ಜೈಲುಗಳಲ್ಲಿ ಡಿಜಿಪಿ ಅಲೋಕ್ ಕುಮಾರ್ ನೇತೃತ್ವದ ಭಾರಿ ದಾಳಿ.
ಬೆಂಗಳೂರು: ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಕರ್ನಾಟಕದ ಜೈಲುಗಳಾದ್ಯಂತ ಭಾರಿ ಕಾರ್ಯಾಚರಣೆ ನಡೆಸಲಾಗಿದ್ದು, ಕೈದಿಗಳಿಂದ ಮೊಬೈಲ್ ಫೋನ್ಗಳು, ಶಸ್ತ್ರಾಸ್ತ್ರಗಳು ಮತ್ತು ಇತರ ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಸಿದ ವಿಶೇಷ ತಪಾಸಣೆಯಲ್ಲಿ 6 ಮೊಬೈಲ್ ಫೋನ್‌ಗಳು ಮತ್ತು 4 ಚಾಕುಗಳು ಪತ್ತೆಯಾಗಿವೆ.
ಮೋಜು ಮಸ್ತಿ ಮಾಡುತ್ತಿದ್ದ ಕೈದಿಗಳಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಮೈಸೂರು ಜೈಲಿನಲ್ಲಿ 9 ಫೋನ್‌ಗಳು ಮತ್ತು 11 ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ. ಬೆಳಗಾವಿ ಜೈಲಿನಲ್ಲಿ 4 ಫೋನ್‌ಗಳು ಮತ್ತು 366 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಆರೋಪಿಗಳು ಗಾಂಜಾವನ್ನು ಹೊರಗೆ ಎಸೆದಿದ್ದರು ಎನ್ನಲಾಗಿದೆ. ಮಂಗಳೂರು ಜೈಲಿನಲ್ಲಿಯೂ 4 ಮೊಬೈಲ್ ಫೋನ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
For More Updates Join our WhatsApp Group :




