ಗರ್ಭಿಣಿಯಾದ ನಂತರ ಕೈಕೊಟ್ಟ ಆರೋಪ: ಆರೋಪಿ ಬಂಧನ.
ದೇವನಹಳ್ಳಿ: ಗಂಡನಿಂದ ದೂರವಿದ್ದ ಮಹಿಳೆಯನ್ನು ಪ್ರೀತಿ ಹೆಸರಲ್ಲಿ ನಂಬಿಸಿ, ಲೈಂಗಿಕ ಸಂಪರ್ಕ ಬೆಳೆಸಿದ್ದು, ಬಳಿಕ ಆಕೆ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆಯೇ ಕೈಕೊಟ್ಟಿದ್ದಾನೆ. ಪ್ರಕರಣ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ದೊಡ್ಡಬಳ್ಳಾಪುರ ನಗರದ ಶಾಂತಿನಗರ ನಿವಾಸಿ ಪ್ರವೀಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆಗೆ ಓರ್ವ ಮಗಳು ಕೂಡ ಇದ್ದಾಳೆಂಬ ವಿಷಯ ಬಹಿರಂಗವಾಗಿದ್ದು, ತನ್ನ ಮೇಲೆ ಆರೋಪಿ ಮತ್ತು ಆತನ ಕುಟುಂಬ ಶೋಷಣೆ ನಡೆಸಿರೋದಾಗಿ ಆಕೆ ಆರೋಪಿಸಿದ್ದಾಳೆ. ಇನ್ನು ಆರೋಪಿ ಪ್ರವೀಣ್ ಕುಮಾರ್ ಮಾಡಿದ ಮೋಸದ ಬಗ್ಗೆ ಸ್ವತಃ ಸಂತ್ರಸ್ತೆ ಬಳಿ ಹಂಚಿಕೊಂಡಿದ್ದಾಳೆ.
For More Updates Join our WhatsApp Group :




