ಟಿಕೆಟ್ ಖರೀದಿ, ಸ್ಟೇಡಿಯಂ ಎಂಟ್ರಿ ಮಾಹಿತಿ.
2026 ರ ಐಪಿಎಲ್ ಮಾರ್ಚ್ 28 ರಿಂದ ಆರಂಭವಾಗುತ್ತಿದೆ. ಟೂರ್ನಿಯ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಆರ್ಸಿಬಿ, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಇದರ ಜೊತೆಗೆ ಉಭಯ ತಂಡಗಳ ನಡುವಿನ ಈ ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದರೆ ಆರ್ಸಿಬಿ ತನ್ನ ಮೊದಲ ಪಂದ್ಯವನ್ನು ತನ್ನ ತವರು ಮೈದಾನದಲ್ಲಿ ಆಡುತ್ತಿದೆ. ಹೀಗಾಗಿ ಅಭಿಮಾನಿಗಳು ಕೂಡ ತನ್ನ ನೆಚ್ಚಿನ ತಂಡ ಮೊದಲ ಪಂದ್ಯವನ್ನು ತವರಿನಲ್ಲಿ ಆಡುವುದನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಆರ್ಸಿಬಿ ಫ್ರಾಂಚೈಸಿ ಕೂಡ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.
ಟಿಕೆಟ್ಗಳನ್ನು ಆನ್ಲೈನ್, ಆಫ್ಲೈನ್ನಲ್ಲಿ ಬುಕ್ ಮಾಡುವುದು ಹೇಗೆ?
ಆನ್ಲೈನ್ ಬುಕಿಂಗ್ಗಳಿಗಾಗಿ, ಅಭಿಮಾನಿಗಳು ಬುಕ್ಮೈಶೋ, ಅಥವಾ ಆರ್ಸಿಬಿಯ ಅಧಿಕೃತ ವೆಬ್ಸೈಟ್ಗೆ ಹೋಗಿ ತಾವು ವೀಕ್ಷಿಸಬೇಕೆಂದಿರುವ ಪಂದ್ಯವನ್ನು ಆಯ್ಕೆ ಮಾಡಬೇಕು. ಆ ನಂತರ ಆಸನ ವಿಭಾಗಗಳನ್ನು ಆಯ್ಕೆ ಮಾಡಿ ಯುಪಿಐ, ಕಾರ್ಡ್ಗಳು ಅಥವಾ ನೆಟ್ ಬ್ಯಾಂಕಿಂಗ್ನಂತಹ ಡಿಜಿಟಲ್ ಆಯ್ಕೆಗಳನ್ನು ಬಳಸಿಕೊಂಡು ಹಣವನ್ನು ಪಾವತಿ ಮಾಡಬೇಕು. ನಂತರ ಟಿಕೆಟ್ಗಳು ಇಮೇಲ್ ಅಥವಾ SMS ಮೂಲಕ ಪ್ರೇಕ್ಷಕನಿಗೆ ಲಭ್ಯವಾಗುತ್ತವೆ.
ಇನ್ನು ಆಫ್ಲೈನ್ನಲ್ಲಿ ಟಿಕೆಟ್ ಖರೀದಿಸಲು ಬಯುಸವವರು ಅಧಿಕೃತ ಕ್ರೀಡಾಂಗಣದ ಕೌಂಟರ್ಗಳಲ್ಲಿ ಖರೀದಿಸಬಹುದಾಗಿದೆ. ಅಲ್ಲಿ ಅಭಿಮಾನಿಗಳು ಆಸನಗಳನ್ನು ಆಯ್ಕೆ ಮಾಡಿ, ನಗದು ಅಥವಾ ಕಾರ್ಡ್ ಮೂಲಕ ಹಣ ಪಾವತಿಸಿ ತಕ್ಷಣವೇ ಟಿಕೆಟ್ಗಳನ್ನು ಪಡೆಯಬಹುದು. ಆದಾಗ್ಯೂ ಆಫ್ಲೈನ್ ಟಿಕೆಟ್ ಖರೀದಿ ಮಾಡುವವರು ಕಡ್ಡಾಯವಾಗಿ ತಮ್ಮ ಫೋಟೋ ಐಡಿಯನ್ನು ಹೊಂದಿರಬೇಕಾಗುತ್ತದೆ.
For More Updates Join our WhatsApp Group :




