‘Operation Sindoor’ ಸಿನಿಮಾ ಘೋಷಣೆ.

'Operation Sindoor' ಸಿನಿಮಾ ಘೋಷಣೆ.

ಪೆಹಲ್ಗಾಮ್ ದಾಳಿಯ ಆಧಾರದಲ್ಲಿ ಹೊಸ ಚಿತ್ರ: ವಿವೇಕ್ ಅಗ್ನಿಹೋತ್ರಿ.

ವಿವೇಕ್ ಅಗ್ನಿಹೋತ್ರಿ  ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೂಲಕ ಗಮನ ಸೆಳೆದರು. ಕಾಶ್ಮೀರಿ ಪಂಡಿತರ ಮೇಲೆ ನಡೆದ ದಾಳಿಯ ಕುರಿತು ಈ ಸಿನಿಮಾ ಇತ್ತು. ನಂತರ ಬಂದ ‘ದಿ ವ್ಯಾಕ್ಸಿನ್ ವಾರ್’ ಹಾಗೂ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾಗಳು ಗಮನ ಸೆಳೆಯಲು ವಿಪಲವಾದವು. ಈಗ ವಿವೇಕ್ ಅವರು ಪೆಹಲ್ಗಾಮ್ ದಾಳಿ ಕುರಿತು ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಚಿತ್ರಕ್ಕೆ ‘ಆಪರೇಷನ್ ಸಿಂಧೂರ್’ ಎಂದು ಹೆಸರು ಇಟ್ಟಿದ್ದಾರೆ. ಪೆಹಲ್ಗಾಮ್ ದಾಳಿ ಬಳಿಕ ನಡೆಯುವ ಘಟನೆಗಳನ್ನು ವಿವೇಕ್ ಕಟ್ಟಿಕೊಡಲಿದ್ದಾರೆ.

ಜಮ್ಮು ಕಾಶ್ಮೀರದ ಪೆಹಲ್ಗಾಮ್​​ ಅಲ್ಲಿ ಉಗ್ರರು ದಾಳಿ ಮಾಡಿದರು. ವಿವಾಹಿತರಲ್ಲಿ ಪುರಷರನ್ನೇ ಟಾರ್ಗೆಟ್ ಮಾಡಿ ಈ ದಾಳಿ ನಡೆಸಲಾಯಿತು. ಒಟ್ಟೂ 26 ಜನ ಟೂರಿಸ್ಟ್​ಗಳನ್ನು ಕೊಲ್ಲಲಾಯಿತು. ಈ ದಾಳಿ ಇಡೀ ಭಾರತವೇ ತತ್ತರಿಸುವಂತೆ ಮಾಡಿತು. ಇದಕ್ಕೆ ಪ್ರತಿಯಾಗಿ ಭಾರತ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನ ಹಾಗೂ ಪಾಕಿಸ್ತಾ ಆಕ್ರಮಿತ ಭಾಗಗಳ ಮೇಲೆ ಭಾರತ ದಾಳಿ ನಡೆಸಿತು. ಈ ಘಟನೆ ಆಧರಿಸಿ ‘ಆಪರೇಷನ್ ಸಿಂಧೂರ್’ ಮಾಡಲಾಗುದು ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.

ಸದ್ಯ, ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿದೆ. ಭಾರತ ನಡೆಸಿದ ಆಪರೇಷನ್ ಆಧಾರವನ್ನು ಸ್ಫೂರ್ತಿಯಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿವೇಕ್ ಅಗ್ನಿಹೋತ್ರಿ ಈ ಚಿತ್ರ ಘೋಷಿಸಿದರೇ ಎನ್ನುವ ಪ್ರಶ್ನೆ ಮೂಡಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *