ಶ್ರೀಲೀಲಾ ಮೇಲೆ AI ಕಾಟ: ದೂರು ದಾಖಲು.

ಶ್ರೀಲೀಲಾ ಮೇಲೆ AI ಕಾಟ: ದೂರು ದಾಖಲು.

ಪ್ಯಾನ್ ಇಂಡಿಯಾ ನಟಿ ಶ್ರೀಲೀಲಾ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ.

ಕನ್ನಡ ಸಿನಿಮಾಗಳ ಮೂಲಕ ನಟನೆ ಆರಂಭಿಸಿದ ಬೆಂಗಳೂರಿನ ಹುಡುಗಿ ಶ್ರೀಲೀಲಾ ಈಗ ಪ್ಯಾನ್ ಇಂಡಿಯಾ ನಟಿಯಾಗಿ ಮಿಂಚುತ್ತಿದ್ದಾರೆ. ನೆರೆಯ ಟಾಲಿವುಡ್​​ನಲ್ಲಿ ಕಡಿಮೆ ಅವಧಿಯಲ್ಲಿಯೇ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡು ತೆಲುಗಿನ ಸ್ಟಾರ್ ನಟರುಗಳಾದ ಮಹೇಶ್ ಬಾಬು, ಪವನ್ ಕಲ್ಯಾಣ್, ಬಾಲಕೃಷ್ಣ, ರವಿತೇಜ ಇನ್ನೂ ಕೆಲವರೊಟ್ಟಿಗೆ ನಟಿಸಿದ ಶ್ರೀಲೀಲಾ, ಇದೀಗ ಬಾಲಿವುಡ್​​ಗೆ ಕಾಲಿಟ್ಟಿದ್ದು ಅಲ್ಲಿಯೂ ಸಹ ಬಲು ಬೇಡಿಕೆಯಲ್ಲಿದ್ದಾರೆ. ಆದರೆ ಇದೀಗ ಶ್ರೀಲೀಲಾಗೆ ಸಂಕಟ ಎದುರಾಗಿದೆ. ಈ ಹಿಂದೆ ರಶ್ಮಿಕಾ ಮಂದಣ್ಣ ಅವರಿಗೆ ಆಗಿದ್ದಂತೆ ಎಐ ಕಾಟ ಶ್ರೀಲೀಲಾಗೂ ಶುರುವಾಗಿದೆ. ಕೆಲ ಕಿಡಿಗೇಡಿಗಳು ಶ್ರೀಲೀಲಾರ ನಕಲಿ ವಿಡಿಯೋಗಳನ್ನು ಎಐ ಮೂಲಕ ಸೃಷ್ಟಿಸಿ ಹರಿಬಿಟ್ಟಿದ್ದಾರೆ.

ಈ ಬಗ್ಗೆ ನಟಿ ಶ್ರೀಲೀಲಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ‘ನಾನು ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ, ನೆಟ್ಟಿಗರು ದಯವಿಟ್ಟು ಈ ಎಐ ಅಸಂಬದ್ಧತೆಯನ್ನು ಬೆಂಬಲಿಸಬೇಡಿ. ತಂತ್ರಜ್ಞಾನದ ಬಳಕೆಗೂ, ದುರ್ಬಳಕೆಗೂ ವ್ಯತ್ಯಾಸವಿದೆ. ತಂತ್ರಜ್ಞಾನದಲ್ಲಿ ಬೆಳವಣಿಗೆ, ಜೀವನವನ್ನು ಸರಳಗೊಳಿಸಬೇಕೆ ವಿನಃ ಜೀವನವನ್ನು ಇನ್ನಷ್ಟು ಕಠಿಣಗೊಳಿಸಬಾರದು’ ಎಂದಿದ್ದಾರೆ ನಟಿ.

‘ಇಲ್ಲಿರುವ ಪ್ರತಿ ಹೆಣ್ಣು ಸಹ ಯಾರೊ ಒಬ್ಬರಿಗೆ ಮಗಳು, ಮೊಮ್ಮಗಳು, ಸಹೋದರಿ ಆಗಿರುತ್ತಾರೆ. ಮಹಿಳೆ ಕಲೆಯನ್ನು ತನ್ನ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡ ಮಾತ್ರಕ್ಕೆ ಆಕೆಯ ಮೇಲೆ ದಾಳಿ ಮಾಡಬಹುದು ಎಂದಲ್ಲ. ನಾವು ಮನೊರಂಜನಾ ಕ್ಷೇತ್ರ ಸೇರಿರುವುದು ಮನರಂಜನೆ ನೀಡಲು, ಖುಷಿ ಹಂಚಲು. ನಮ್ಮ ಸುತ್ತಲೂ ಒಂದು ಸಂರಕ್ಷಿತ ವಲಯ ಇದೆ ಎಂಬ ನಂಬಿಕೆಯಿಂದ ನಾವು ಇಲ್ಲಿ ಬಂದಿದ್ದೇವೆ. ನನ್ನ ಬ್ಯುಸಿ ಕೆಲಸಗಳ ನಡುವೆ ಆನ್​ಲೈನ್​​ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾನು ಗಮನಿಸಿರಲಿಲ್ಲ. ಆದರೆ ನನ್ನ ಆತ್ಮೀಯರು ಅದನ್ನು ನನ್ನ ಗಮನಕ್ಕೆ ತಂದಿದ್ದಾರೆ ನಾನು ಅವರಿಗೆ ಋಣಿಯಾಗಿದ್ದೀನಿ’ ಎಂದಿದ್ದಾರೆ ನಟಿ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *