‘ಎಎಂಬಿಸಿ ನಿಮಾಸ್ಕ ಪಾಲಿ’ಗೆ ಭೇಟಿ; ಗಾಂಧಿನಗರದಲ್ಲಿ ಅಭಿಮಾನಿಗಳ ದಂಡು.
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಇಂದು ಬೆಂಗಳೂರಿಗೆ ನೀಡಿದ್ದರು. ತಮ್ಮ ಒಡೆತನದ ನೂತನ ಮಲ್ಟಿಪ್ಲೆಕ್ಸ್ ‘ಎಎಂಬಿ ಸಿನಿಮಾಸ್ ಕಪಾಲಿ’ ಗೆ ಅವರು ಭೇಟಿ ನೀಡಿದ್ದು, ನೆಚ್ಚಿನ ನಟನನ್ನು ನೋಡಲು ಗಾಂಧಿನಗರದ ಚಿತ್ರಮಂದಿರದ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು.
ದಕ್ಷಿಣ ಭಾರತದ ಮೊದಲ ‘ಡಾಲ್ಬಿ ಸಿನಿಮಾ’ ತಂತ್ರಜ್ಞಾನವನ್ನು ಹೊಂದಿರುವ ಈ ಚಿತ್ರಮಂದಿರದ ಕಾರ್ಯವೈಖರಿ ಮತ್ತು ಗುಣಮಟ್ಟವನ್ನು ಪರಿಶೀಲಿಸಲು ಮಹೇಶ್ ಬಾಬು ಇಂದು ಖುದ್ದಾಗಿ ಆಗಮಿಸಿದ್ದರು. ವಿಮಾನ ನಿಲ್ದಾಣದಿಂದ ನೇರವಾಗಿ ಮಲ್ಟಿಪ್ಲೆಕ್ಸ್‌ಗೆ ಆಗಮಿಸಿದ ಅವರನ್ನು ನೋಡಲು ಕಿಕ್ಕಿರಿದು ಸೇರಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
For More Updates Join our WhatsApp Group :




