ಕೊನೆಗೂ ರೈತನಿಗೆ 66 ಪೈಸೆ ಮರುಪಾವತಿ.

ಕೊನೆಗೂ ರೈತನಿಗೆ 66 ಪೈಸೆ ಮರುಪಾವತಿ.

ಬ್ಯಾಂಕ್ ನೋಟಿಸ್‌ಗೆ ಕೋಪಗೊಂಡ ರೈತ; ಪೈಸೆಗೆ ಪೈಸೆ ಲೆಕ್ಕ ಕೇಳಿದ ಘಟನೆ ವೈರಲ್

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ರೈತನಿಗೆ ಕೆನರಾ ಬ್ಯಾಂಕ್ ನೀಡಬೇಕಿದ್ದ 66 ಪೈಸೆ ಹಣವನ್ನು ಕೊನೆಗೂ ಮರುಪಾವತಿಸಿದೆ. ಕೆಲವು ವರ್ಷಗಳ ಹಿಂದೆ ಹೊಸಕೊಪ್ಪಲು ಗ್ರಾಮದ ರೈತ ಚೊಕ್ಕಣ್ಣಗೌಡ 50 ಸಾವಿರ ರೂ. ಸಾಲವನ್ನು ಕೆನರಾ ಬ್ಯಾಂಕ್‌ನಲ್ಲಿ ಪಡೆದಿದ್ದರು. ಸಕಾಲಕ್ಕೆ ಸಾಲ ತೀರುವಳಿ ಮಾಡಿದ್ದ ರೈತನಿಗೆ ಕೆಲವು ದಿನಗಳ ನಂತರ ಇನ್ನೂ 9.34 ಪೈಸೆ ಸಾಲ ಬಾಕಿ ಇದ್ದು ತಕ್ಷಣವೇ ಮರುಪಾವತಿಸುವಂತೆ ನೋಟಿಸ್‌ ನೀಡಿದ್ದಲ್ಲದೆ ಪದೇಪದೆ ಕರೆ ಮಾಡುತ್ತಿದ್ದರು. ಇದರಿಂದ ಬೇಸತ್ತ ರೈತ ಬ್ಯಾಂಕಿಗೆ ತೆರಳಿ 10 ರೂ. ನೀಡಿ ಸಾಲಕ್ಕೆ ಜಮಾ ಮಾಡಿಕೊಂಡು ಉಳಿದ 66 ಪೈಸೆ ವಾಪಸ್ ನೀಡುವಂತೆ ಬ್ಯಾಂಕ್‌ ಕ್ಯಾಷಿಯರ್ ಗೆ ಒತ್ತಾಯಿಸಿದ್ದರು. ಪೈಸೆಗೆ ಪೈಸೆ ಲೆಕ್ಕ ಹಾಕಿ ತಮ್ಮ ಹಣವನ್ನು ವಾಪಸ್‌ ಕೇಳುತ್ತೀರಾ. ನಮಗೂ ಹಣ ವಾಪಸ್ ಕೊಡಿ ಎಂದು ರೈತ ಚೊಕ್ಕಣ್ಣಗೌಡ ಬ್ಯಾಂಕ್ ಸಿಬ್ಬಂದಿಗೆ ಚಳಿ ಬಿಡಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇದೀಗ ಬ್ಯಾಂಕ್, ಚೊಕ್ಕಣ್ಣಗೌಡ ಖಾತೆಗೆ 66 ಪೈಸೆ ಹಣವನ್ನು ಅಕೌಂಟ್‌ಗೆ ಹಾಕಿದೆ.

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ ರೈತ ಚೊಕ್ಕಣ್ಣಗೌಡ ಅವರು ಹಲವು ವರ್ಷಗಳಿಂದೆ ಬೆಳೆ ಸಾಲ ಪಡೆದುಕೊಂಡಿದ್ದರು. ಬಳಿಕ ಸಾಲವನ್ನು ವಾಪಸ್ ಕಟ್ಟಿದ್ದರು. ಆದ್ರೆ, ಬಾಕಿದ್ದ ಇದ್ದ 9 ರೂಪಾಯಿ 34 ಪೈಸೆ ಬಾಕಿ ಸಾಲ ಪಾವತಿಸುವಂತೆ ಬ್ಯಾಂಕ್ ಬೆನ್ನುಬಿದ್ದಿತ್ತು.

ಅಲ್ಲದೇ ರೈತನ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬ್ಯಾಂಕ್​​ನವರಿಗೆ ಸರಿಯಾಗಿಯೇ ಚಳಿ ಬಿಡಿಸಿದ್ದಾರೆ ಚೊಕ್ಕಣ್ಣಗೌಡರ ಪರ ಬ್ಯಾಟಿಂಗ್ ಮಾಡಿದ್ದರು. ಇನ್ನು ಈ ವಿಚಾರ ಬ್ಯಾಂಕ್​​​ಮ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ನಂತರ 66 ಪೆಸೆಯನ್ನು ರೈತನ ಅಕೌಂಟ್‌ಗೆ ಹಾಕಿ ಎಸ್‌ಎಂಎಸ್ ಕಳುಹಿಸಿದೆ. ಇದರೊಂದಿಗೆ ಪೈಸೆಗೆ ಪೈಸೆ ಕೊಡುಕೊಳ್ಳುವಿಕೆ ಸುಖಾಂತ್ಯವಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *