‘ಸ್ಪಿರಿಟ್’ ಸಿನಿಮಾ ಬಜೆಟ್ ಉಳಿಸಲು 95 ದಿನಗಳಲ್ಲಿ ಶೂಟಿಂಗ್ ಟಾರ್ಗೆಟ್.
ನಟ ಪ್ರಭಾಸ್ ನಟನೆಯ ‘ರಾಜಾಸಾಬ್’ ಸಿನಿಮಾ ಡಿಸಾಸ್ಟರ್ ಎನಿಸಿಕೊಂಡಿತು. ಚಿತ್ರದ ಬಜೆಟ್ 400 ಕೋಟಿ ರೂಪಾಯಿಗೂ ಅಧಿಕ ಆಗಿತ್ತು. ಸಿನಿಮಾ ಕಲೆಕ್ಷನ್ ಕೂಡ ಕಡಿಮೆ ಇದ್ದಿದ್ದರಿಂದ ನಿರ್ಮಾಪಕರಿಗೆ ದೊಡ್ಡ ನಷ್ಟ ಉಂಟಾಯಿತು. ಈಗ ಮುಂದಿನ ಸಿನಿಮಾದ ಬಜೆಟ್ ಉಳಿಸಲು ಪ್ರಭಾಸ್ ಹಾಗೂ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಹೊಸ ಪ್ಲ್ಯಾನ್ ರೂಪಿಸಿದ್ದಾರೆ. ‘ಸ್ಪಿರಿಟ್’ ಚಿತ್ರದ ಬಜೆಟ್ ಅನ್ನು ತಗ್ಗಿಸಲು ಈ ಪ್ಲ್ಯಾನ್ ಸಹಕಾರಿ ಆಗಲಿದೆ.
ಸಾಮಾನ್ಯವಾಗಿ ಸ್ಟಾರ್ ಹೀರೋಗಳ ಸಿನಿಮಾಗಳ ಬಜೆಟ್ ಮಿತಿ ಮೀರುತ್ತದೆ. ವಿಸ್ತ್ರ ಶೂಟಿಂಗ್ ಶೆಡ್ಯೂಲ್ ಕೂಡ ಇದಕ್ಕೆ ಕಾರಣ. ನಿರ್ದೇಶಕರು ಎಷ್ಟೇ ಪ್ಲ್ಯಾನ್ ಮಾಡಿದರೂ ಹೀರೋಗಳ ಕಾಲ್ಶೀಟ್ನಲ್ಲಿ ವ್ಯತ್ಯಾಸ ಆಗುತ್ತದೆ. ಇದು ಸಿನಿಮಾದ ಬಜೆಟ್ ಹೆಚ್ಚಿಸುತ್ತದೆ. ಅಲ್ಲದೆ, 150-200 ದಿನ ಶೂಟ್ ನಡೆಯೋದು ಬಜೆಟ್ ಏರಲು ಕಾರಣ. ಆದರೆ, ಇದಕ್ಕೆಲ್ಲ ಬ್ರೇಕ್ ಹಾಕಲು ಪ್ಲ್ಯಾನ್ ರೂಪಿಸಿದ್ದಾರೆ ಪ್ರಭಾಸ್.
ಪ್ರಭಾಸ್ ಅವರಿಂದ ‘ರಾಜಾಸಾಬ್’ ನಿರ್ಮಾಪಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಹೀಗಾಗಿ, ‘ಸ್ಪಿರಿಟ್’ ಚಿತ್ರವನ್ನು ಕೇವಲ 95 ದಿನಗಳಲ್ಲಿ ಮಾಡಿ ಮುಗಿಸೋ ಪ್ಲ್ಯಾನ್ ಅಲ್ಲಿದ್ದಾರೆ ಪ್ರಭಾಸ್. ಈ ಎಲ್ಲಾ ಕಾರಣದಿಂದ ನಿರ್ಮಾಪಕರು ಸಾಕಷ್ಟು ಖುಷಿಪಟ್ಟಿದ್ದಾರೆ. ಸಂದೀಪ್ ರೆಡ್ಡಿ ವಂಗ ಅವರು ಪಕ್ಕಾ ಪ್ಲ್ಯಾನ್ ಮಾಡಿ ಶೂಟಿಂಗ್ ಸ್ಥಳ ಹಾಗೂ ದಿನಗಳನ್ನು ನಿಗದಿ ಮಾಡಿದ್ದಾರೆ. ಇದರ ಅನುಸಾರ ಶೂಟ್ ನಡೆಯಲಿದೆ.
ಹಾಗಂತ ಒಂದೇ ಸ್ಟ್ರೇಚ್ನಲ್ಲಿ 95 ದಿನಗಳ ಕಾಲ ಶೂಟ್ ಮಾಡೋದಿಲ್ಲ. ಹಂತ ಹಂತವಾಗಿ ಈ ಚಿತ್ರೀಕರಣ ನಡೆಯಲಿದೆ. ಒಂದೊಮ್ಮೆ ಅಂದುಕೊಂಡಂತೆ 95 ದಿನಗಳಲ್ಲಿ ಶೂಟ್ ಪೂರ್ಣಗೊಂಡಿದ್ದೇ ಆದಲ್ಲಿ ಈ ಮೊದಲು ನಿಗದಿಪಡಿಸಿದ 2027ರ ಮಾರ್ಚ್ 5ರಂದು ಸಿನಿಮಾ ತೆರೆಗೆ ಬರಲಿದೆ. ಇದರಿಂದ ನಿರ್ಮಾಪಕರಿಗೆ ಒಂದಷ್ಟು ಬಜೆಟ್ ಕೂಡ ಉಳಿತಾಯ ಆಗಲಿದೆ.
For More Updates Join our WhatsApp Group :




