CM ಕುರ್ಚಿ ಕದನ: ಡಿಕೆಶಿಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.

CM ಕುರ್ಚಿ ಕದನ: ಡಿಕೆಶಿಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.

ಹೈಕಮಾಂಡ್ ಭೇಟಿಯ ಬಳಿಕ ದೀರ್ಘ ನಿರೀಕ್ಷೆ.

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿ ಪ್ರವಾಸದ ಬಳಿಕವೂ ಅಧಿಕಾರ ಹಸಸ್ತಾಂತರದ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಡಿಕೆಶಿಪಾಳಯವು ಒಂದು ಮಹತ್ವದ ಬೆಳವಣಿಗೆಯ ನಿರೀಕ್ಷೆಯಲ್ಲಿತ್ತು. ಆದರೆ ದೆಹಲಿ ಭೇಟಿಯು ಅಸ್ಸಾಂ ಚುನಾವಣೆ ಚರ್ಚೆಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ ಈ ಬಾರಿಯಾದರೂ ಗುಡ್ ನ್ಯೂಸ್ ಸಿಗುತ್ತದೆ ಎಂದು ಆಶಿಸಿದ್ದ ಬೆಂಬಲಿತ ಶಾಸಕರು ಮತ್ತೆ ನಿರಾಸೆಗೊಂಡಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿರುವುದು, ಅಧಿಕಾರ ಹಂಚಿಕೆ ವಿಚಾರವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಹೀಗಾಗಿ ಬಜೆಟ್ ಮುಂಚಿತವಾಗಿ ಈ ವಿಷಯ ಇತ್ಯರ್ಥವಾಗಬೇಕೆಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇನ್ನು ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಇಂದು ಅಜ್ಜಯ್ಯನ ಮೊರೆ ಹೋಗಲಿದ್ದಾರೆ. ನೊಣವಿನಕೆರೆ ಅಜ್ಯಯ್ಯ ಸನ್ನಿಧಿಗೆ ತೆರಳಲಿರುವ ಡಿಸಿಎಂ, ಜಾತ್ರಾ ಮಹೋತ್ಸವದ ಧರ್ಮಸಭೆಯಲ್ಲಿ ಭಾಗಿಯಾಗಲಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *