ಗ್ರಾಮೀಣ ಡಾಕ್​ ಸೇವಕ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 1 ದಿನ ಬಾಕಿ

ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಒಟ್ಟು 1940 ಗ್ರಾಮೀಣ ಡಾಕ್​ ಸೇವಕ್​ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಆಗಸ್ಟ್​ 5 ಕಡೇಯ ದಿನವಾಗಿದೆ. ಎಸ್​ಎಸ್​ಎಲ್​ಸಿ ಉತ್ತೀರ್ಣರು ಈ ಹುದ್ದೆಗೆ ಅರ್ಜರಾಗಿದ್ದಾರೆ. ಬ್ರಾಂಚ್​ ಪೋಸ್ಟ್​ ಮಾಸ್ಟರ್​ (ಬಿಪಿಎಂ) ಅಸಿಸ್ಟೆಂಟ್​ ಬ್ರಾಂಚ್​ ಪೋಸ್ಟ್​ ಮಾಸ್ಟರ್​​ (ಎಬಿಪಿಎಂ) ಹುದ್ದೆಗಳ ನೇಮಕಾತಿ ನಡೆಯಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

ಒಟ್ಟು ಹುದ್ದೆ: ಕರ್ನಾಟಕದ ಬಿಪಿಎಂ ಮತ್ತು ಎಬಿಪಿಎಂನ ಹುದ್ದೆ ನೇಮಕಾತಿ ಕುರಿತ ಜಿಲ್ಲಾವಾರು ಮಾಹಿತಿ

  • ಬಾಗಲಕೋಟೆ – 23
  • ಬಳ್ಳಾರಿ – 50
  • ಬೆಂಗಳೂರು ಜಿಪಿಒ – 4
  • ಬೆಳಗಾವಿ – 33
  • ಬೆಂಗಳೂರು ಪೂರ್ವ – 83
  • ಬೆಂಗಳೂರು ದಕ್ಷಿಣ – 62
  • ಬೆಂಗಳೂರು ಪಶ್ಚಿಮ – 39
  • ಬೀದರ್​​ – 59
  • ಚನ್ನಪಟ್ಟಣ – 87
  • ಚಿಕ್ಕಮಗಳೂರು – 60
  • ಚಿಕ್ಕೋಡಿ – 19
  • ಚಿತ್ರದುರ್ಗ – 27
  • ದಾವಣಗೆರೆ – 40
  • ಧಾರವಾಡ – 22
  • ಗದಗ – 18
  • ಗೋಕಾಕ್​ – 7
  • ಹಾಸನ – 78
  • ಹಾವೇರಿ – 44
  • ಕಲಬುರಗಿ – 83
  • ಕಾರವಾರ – 43
  • ಕೊಡಗು – 76
  • ಕೋಲಾರ – 106
  • ಕೊಪ್ಪಳ -36
  • ಮಂಡ್ಯ – 65
  • ಮಂಗಳೂರು – 62
  • ಮೈಸೂರು – 42
  • ನಂಜನಗೂಡು – 66
  • ಪುತ್ತೂರು – 89
  • ರಾಯಚೂರು – 63
  • ಆರ್​ಎಂಎಸ್​ ಹೆಚ್​ಬಿ – 3
  • ಆರ್​ಎಂಎಸ್​ ಕ್ಯೂ – 9
  • ಶಿವಮೊಗ್ಗ – 89
  • ಶಿರಸಿ – 66
  • ತುಮಕೂರು – 107
  • ಉಡುಪಿ – 90
  • ವಿಜಯಪುರ – 40
  • ಯಾದಗಿರಿ – 50

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 40 ವರ್ಷಗಳಾಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲ ಚೇತನ, ತೃತೀಯ ಲಿಂಗಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಇತರ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಆಯ್ಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೆರಿಟ್​ ಪಟ್ಟಿ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಜುಲೈ 15ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​​ 5 ಆಗಿದೆ. ಅರ್ಜಿಯಲ್ಲಿ ಏನಾದರೂ ತಿದ್ದುಪಡಿ ಇದ್ದಲ್ಲಿ ಸರಿಪಡಿಸುವಿಕೆಗೆ ಆಗಸ್ಟ್​ 6 ರಿಂದ 8ರ ವರೆಗೆ ಅವಕಾಶ ನೀಡಲಾಗಿದೆ.

Leave a Reply

Your email address will not be published. Required fields are marked *