ಭಾರತದಲ್ಲಿ ಪ್ರತಿ 9ರಲ್ಲಿ 1 ರಿಗೆ ತಡೆಗಟ್ಟಬಹುದಾದ ಕ್ಯಾನ್ಸರ್​ : ತಜ್ಞರು

ನವದೆಹಲಿ: ಭಾರತದಲ್ಲಿ ಕ್ಯಾನ್ಸರ್​ ಪ್ರಕರಣಗಳ ಹೊರೆ ಹೆಚ್ಚುತ್ತಿದ್ದು, 9 ರಲ್ಲಿ ಒಬ್ಬರು ಈ ಮಾರಣಾಂತಿಕ ರೋಗದ ಅಪಾಯದಲ್ಲಿದ್ದಾರೆ. ಈ ಕ್ಯಾನ್ಸರ್​ ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವ ಮೂಲಕ ತಡೆಗಟ್ಟಬಹುದಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಭಾರತದ ಮೇಲಿನ ಕ್ಯಾನ್ಸರ್​ ಹೊರೆ ಕುರಿತು ಅಪೋಲೋ ಆಸ್ಪತ್ರೆಯ ಹೆಲ್ತ್ ಆಫ್​ ನೇಷನ್​ ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಭಾರತ ವಿಶ್ವದ ಕ್ಯಾನ್ಸರ್​ ರಾಜಧಾನಿಯಾಗುವ ಅಪಾಯದ ಕುರಿತು ಎಚ್ಚರಿಕೆ ನೀಡಿತ್ತು. ವಾರ್ಷಿಕ ಕ್ಯಾನ್ಸರ್​ ಪ್ರಕರಣಗಳು ಏರಿಕೆ ಕಾಣುತ್ತಿದ್ದು, 2020ರಲ್ಲಿ ದೇಶದಲ್ಲಿ 1.4 ಮಿಲಿಯನ್​ ಪ್ರಕರಣಗಳು ಕಂಡು ಬಂದಿದ್ದು, ಇದು 2025ರ ಹೊತ್ತಿಗೆ 1.57 ಮಿಲಿಯನ್​ ಆಗಲಿದೆ ಎಂದು ತಿಳಿಸಿತ್ತು.

ಸರ್ಕಾರ ತುರ್ತು ಮತ್ತು ಸಮಗ್ರ ಕ್ರಮಗಳ ಮೂಲಕ ಹೆಚ್ಚುತ್ತಿರುವ ಈ ಕ್ಯಾನ್ಸರ್​ ಪ್ರಕರಣಗಳ ಪರಿಣಾಮಕಾರಿ ತಡೆಗಟ್ಟುವಿಕೆ ಮತ್ತು ಚಿಕಿತ್ಸಾ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಬೇಕಿದೆ

ಕ್ಯಾನ್ಸರ್​ ತಡೆಗಟ್ಟುವಿಕೆ: ಭಾರತದಲ್ಲಿ ತಂಬಾಕು ಕ್ಯಾನ್ಸರ್ ಹೆಚ್ಚುತ್ತಿದೆ. ಆದರೆ ಈ ಕ್ಯಾನ್ಸರ್​ ಅನ್ನು ​​​ ತಡೆಗಟ್ಟಬಹುದಾಗಿದೆ. ಸುಮಾರು 267 ಮಿಲಿಯನ್​ ವಯಸ್ಕರರು ತಂಬಾಕು ಬಳಕೆ ಮಾಡುತ್ತಾರೆ. ಇದು ಬಾಯಿ, ಶ್ವಾಸಕೋಶ ಮತ್ತು ಇತರ ಕ್ಯಾನ್ಸರ್​ಗೆ ಕಾರಣವಾಗುತ್ತದೆ. ಅನಾರೋಗ್ಯಕರ ಆಹಾರ ಅಭ್ಯಾಸ ಮತ್ತು ಜಡ ಜೀವನಶೈಲಿಯು ಕೊಲೆಕ್ಟರಲ್​, ಸ್ತನ ಮತ್ತು ಪ್ಯಾನ್ಕ್ರಿಯಸ್ಟಿಕ್​ ಕ್ಯಾನ್ಸರ್​​ಗೆ ಕಾರಣವಾಗಬಹುದು ಎಂದು ಆರ್​ಜಿಸಿಐಆರ್​ಸಿಯ ವೈದ್ಯೆ ಅಗರ್ವಾಲ್​ ತಿಳಿಸಿದ್ದಾರೆ.

Leave a Reply

Your email address will not be published. Required fields are marked *