ರಜಾ ದಿನಗಳಲ್ಲಿ ಸಹೋದ್ಯೋಗಿಗೆ ತೊಂದರೆ ನೀಡಿದ್ರೆ 1 ಲಕ್ಷ ದಂಡ..!

ಮುಂಬೈ: ತಾಂತ್ರಿಕ ಬದುಕಿನಿಂದಾಗಿ ಬಹುತೇಕ ಉದ್ಯೋಗಿಗಳಿಗೆ (Employees) ಬಿಡುವೇ ಇಲ್ಲದಂತಾಗಿದೆ. ರಜಾ ದಿನಗಳಿದ್ದರೂ ತುರ್ತು ಕರೆಗಳು ಬರುತ್ತಲೇ ಇರುತ್ತವೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ ದೈಹಿಕ ಸಾಮರ್ಥ್ಯ ಕುಗ್ಗುವಂತಾಗಿದೆ. ಆದ್ದರಿಂದ ಸಂಸ್ಥೆಯ ಸಿಬ್ಬಂದಿ ರಜಾ ದಿನಗಳನ್ನು ಆರಾಮದಾಯಕವಾಗಿ ಕಳೆಯುವಂತೆ ಮಾಡಲು ಮುಂಬೈ (Mumbai) ಮೂಲದ ಕಂಪನಿ ಹೊಸ ನಿಯಮ ಜಾರಿಗೊಳಿಸಿದೆ.

ಸಂಸ್ಥೆಯ ಉದ್ಯೋಗಿಗಳು ರಜೆಯಲ್ಲಿದ್ದಾಗಲೂ ಕೆಲ ಸಹೋದ್ಯೋಗಿಗಳು ಅವರಿಗೆ ಉದ್ಯಮದ ವಿಚಾರದಲ್ಲಿ ಕಿರಿಕಿರಿ ಮಾಡುವುದು, ದೂರವಾಣಿ ಕರೆ, ಇಮೇಲ್ ಕಳಿಸಿ ತೊಂದರೆ ನೀಡದಂತೆ ತಾಕೀತು ಮಾಡಿದೆ.

ಫ್ಯಾಂಟಸಿ ಸ್ಪೋರ್ಟ್ಸ್ (Fantasy Sports) ಪ್ಲಾಟ್ಫಾರ್ಮ್ ನಡೆಸುತ್ತಿರುವ ಮುಂಬೈ ಮೂಲದ ಡ್ರೀಮ್-11 (Dream11) ತನ್ನ ಸಹೋದ್ಯೋಗಿಗಳು ರಜೆಯಲ್ಲಿದ್ದಾಗ ಉದ್ಯಮದ ವಿಚಾರದಲ್ಲಿ ಕಿರಿಕಿರಿ ಮಾಡುವುದು, ಕರೆ, ಇಮೇಲ್ ಕಳಿಸಿ ತೊಂದರೆ ನೀಡುವುದು ಮಾಡಿದ್ರೆ 1 ಲಕ್ಷ ದಂಡ ಪಾವತಿಸಬೇಕಾಗುತ್ತದೆ ಎಂದು ಡ್ರೀಮ್ 11 ಸಹ-ಸಂಸ್ಥಾಪಕ ಭವಿತ್ ಶೇತ್ ತಿಳಿಸಿದ್ದಾರೆ.

2008ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ತನ್ನ ನೀತಿಯ ಪ್ರಕಾರ ಕಾರ್ಮಿಕರಿಗೆ ವಾರ್ಷಿಕವಾಗಿ ಕನಿಷ್ಠ 1 ವಾರಗಳ ದೀರ್ಘ ರಜೆ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಡ್ರೀಮ್ 11 ಮೂಲಕ ರಜೆಯಲ್ಲಿರುವ ಉದ್ರೋಗಿಯನ್ನು ಲಾಗ್ಆಫ್ ಮಾಡಲಾಗುತ್ತದೆ. ಆಗ ಅವರೊಂದಿಗೆ ಕಂಪನಿಯಿಂದ ಯಾರೊಬ್ಬರೂ ಅವರನ್ನು ಸಂಪರ್ಕಿಸುವುದಿಲ್ಲವೆಂದು ಕಂಪನಿ ಹೇಳಿದೆ.

ಪ್ರೀತಿ-ಪಾತ್ರರೊಂದಿಗೆ ಗುಣಮಟ್ಟದ ಸಮಯ ಕಳೆಯುವುದರಿಂದ, ರಜೆಯಲ್ಲಿ ಸಂಪೂರ್ಣ ಮಾನಸಿಕ ಮತ್ತು ದೈಹಿಕ ವಿಶ್ರಾಂತಿ ಪಡೆಯುವುದರಿಂದ ಕೆಲಸದಲ್ಲಿ ಉತ್ಸಾಹ ಹೆಚ್ಚುತ್ತದೆ. ಉದ್ಯೋಗಿ ಸಂತೋಷದಿಂದ ಕೆಲಸದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದೆ.

Pragati TV Social Connect for more latest u

Leave a Reply

Your email address will not be published. Required fields are marked *