ತಿರುಪತಿಗೆ ಹುಂಡಿಯಿಂದಲೇ 1,450 ಕೋಟಿ ರೂ. ಸಂಗ್ರಹ

ಹೈದರಾಬಾದ್: ವಿಶ್ವದ ಶ್ರೀಮಂತ ಹಿಂದೂ (Hindu) ದೇವಸ್ಥಾನ ಎಂದೇ ಖ್ಯಾತಿ ಪಡೆದಿರುವ ತಿರುಪತಿ ದೇವಾಲಯ (Tirupati Temple) ಹುಂಡಿಯಿಂದಲೇ 1,450.50 ಕೋಟಿ ರೂ.ಆದಾಯ ಸಂಗ್ರಹಿಸಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾ ರೆಡ್ಡಿ, 2022ರಲ್ಲಿ ದೇವಸ್ಥಾನಕ್ಕೆ 2.37 ಕೋಟಿ ಭಕ್ತರು ಭೇಟಿ ನೀಡಿದ್ದು, ಹುಂಡಿ ಸಂಗ್ರಹವು 1,450.50 ಕೋಟಿ ರೂ. ಆಗಿದೆ ಎಂದು ತಿಳಿಸಿದ್ದಾರೆ

2021 ರಲ್ಲಿ 1.04 ಕೋಟಿ ಭಕ್ತರು ಭೇಟಿ ನೀಡಿ 833.41 ಕೋಟಿ ರೂ. ಹುಂಡಿ ಸಂಗ್ರಹವಾಗಿತ್ತು. 2021 ಮತ್ತು 2022ರ ಆರಂಭದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಇಳಿಕೆಯಾಗಿತ್ತು.

ಡಿಸೆಂಬರ್ ತಿಂಗಳೊಂದರಲ್ಲೇ 129.ಕೋಟಿ ರೂ. ಹುಂಡಿ ಸಂಗ್ರಹವಾಗಿತ್ತು. ಕಳೆದ ವರ್ಷ 11.54 ಲಕ್ಷ ಲಡ್ಡು ಪ್ರಸಾದ ಮಾರಾಟ ಮಾಡಿದ್ದರೆ 2021ರಲ್ಲಿ 5.96 ಲಕ್ಷ ಇತ್ತು.

Pragati TV Social Connect for more latest u

Leave a Reply

Your email address will not be published. Required fields are marked *