ಬಾಕ್ಸ್ ಆಫೀಸ್‌ನಲ್ಲಿ ‘Dhurandhar’ಸಿನಿಮಾ ಅಬ್ಬರ.

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್’ಸಿನಿಮಾ ಅಬ್ಬರ.

2ನೇ ಭಾನುವಾರವೇ ‘ಧುರಂಧರ್’ ಸಿನಿಮಾ ದಾಖಲೆ ಕಲೆಕ್ಷನ್.

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಇಡೀ ಬಾಲಿವುಡ್ ಬಾಕ್ಸ್ ಆಫೀಸ್​ನ ಶೇಕ್ ಮಾಡಿ ಬಿಟ್ಟಿದೆ. ಈ ಚಿತ್ರ ನೋಡಿದ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮೊದಲು ಕೆಲವು ದಿನ ಸಾಧಾರಣ ಇದ್ದ ಕಲೆಕ್ಷನ್ ನಂತರ ಹೆಚ್ಚಿತು. ಇದು ಚಿತ್ರಕ್ಕೆ ಸಹಕಾರಿ ಆಗಿದೆ. ಬಾಯ್ಮಾತಿನ ಪ್ರಚಾರದಿಂದ ಸಿನಿಮಾ ದೊಡ್ಡ ಗೆಲುವಿನತ್ತ ಧಾಪುಗಾಲು ಹಾಕುತ್ತಿದೆ. ಸಿನಿಮಾದ ಭಾರತದ ಕಲೆಕ್ಷನ್ 350 ಕೋಟಿ ರೂಪಾಯಿ ದಾಟಿದೆ.

ಆದಿತ್ಯ ಧಾರ್ ಅವರು ‘ಉರಿ’ ಹೆಸರಿನ ಸಿನಿಮಾ ಮಾಡಿದರು. ಸರ್ಜಿಕಲ್ ಸ್ಟ್ರೈಕ್ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಯಿತು. ಈ ಚಿತ್ರ ಸೂಪರ್ ಹಿಟ್ ಆಯಿತು. ವಿಕ್ಕಿ ಕೌಶಲ್ ವೃತ್ತಿ ಜೀವನಕ್ಕೆ ದೊಡ್ಡ ಗೆಲುವು ತಂದುಕೊಟ್ಟ ಚಿತ್ರ ಇದಾಗಿದೆ. ಈಗ ಆದಿತ್ಯ ಧಾರ್ ಅವರು ‘ಧುರಂಧರ್’ ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದಿದ್ದಾರೆ. ಕಷ್ಟದಲ್ಲಿದ್ದ ರಣವೀರ್ ವೃತ್ತಿ ಜೀವನವನ್ನು ಮೇಲಕ್ಕೆ ಎತ್ತಿದ್ದಾರೆ.

‘ಧುರಂಧರ್’ ಸಿನಿಮಾ ಯಶಸ್ಸಿನ ಹಾದಿ ಹಿಡಿದಿದೆ. ಭಾನುವಾರ ಈ ಚಿತ್ರ ಬರೋಬ್ಬರಿ 59 ಕೋಟಿ ರೂಪಾಯಿ ಗಳಿಸಿದೆ. ದೇಶಾದ್ಯಂತ ಅನೇಕ ಶೋಗಳು ಹೌಸ್​ಫುಲ್ ಪರದರ್ಶನ ಕಂಡಿದೆ. ಇದು ಚಿತ್ರಕ್ಕೆ ಸಹಕಾರಿ ಆಗಿದೆ. ಶನಿವಾರ ಈ ಚಿತ್ರ 53 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಈಗ 351 ಕೋಟಿ ರೂಪಾಯಿ ಆಗಿದೆ.

‘ಧುರಂಧರ್’ ಸಿನಿಮಾದ ಒಟ್ಟಾರೆ ಕಲೆಕ್ಷನ್ 500 ಕೋಟಿ ರೂಪಾಯಿ ಅನಾಯಾಸಾವಾಗಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಹಲವು ದಾಖಲೆಗಳನ್ನು ಮುರಿಯುವ ಸಾಧ್ಯತೆ ಇದೆ. ವರ್ಷಾಂತ್ಯದಲ್ಲಿ ಬಾಲಿವುಡ್​ಗೆ ದೊಡ್ಡ ಚೈತನ್ಯ ಸಿಕ್ಕಿದೆ.

ರಣವೀರ್ ಸಿಂಗ್ ಅವರು ದೊಡ್ಡ ಗೆಲುವು ಕಾಣದೇ ಬಹಳ ವರ್ಷಗಳೇ ಕಳೆದಿದ್ದವು. ಈಗ ಅವರು ‘ಧುರಂಧರ್’ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಈ ಸಿನಿಮಾ ಅವರ ವೃತ್ತಿ ಜೀವನದ ಅತ್ಯಂತ ದೊಡ್ಡ ಸಿನಿಮಾ ಆಗುವ ಎಲ್ಲಾ ಸಾಧ್ಯತೆ ಇದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *