ಸುಧಾರಾಣಿ ಮಹಿಳೆಯ ಮೋಸದಾಟ ಬಿಚ್ಚು
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ಎಂಬ ಮಹಿಳೆ, ಪ್ರೀತಿಸುವ ನಾಟಕವಾಡಿ ಮದುವೆಯಾಗಿ ಮೂವರನ್ನು ವಂಚಿಸಿರುವುದು ಬಯಲಾಗಿದೆ. ಆಕೆ ಪ್ರೀತಿಸಿ ಮದುವೆಯಾಗಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾಳೆ ಎಂದು ಆರೋಪಿಸಲಾಗಿದ್ದು, ಇದೀಗ ಆಕೆಯ ಮೋಸದಾಟದ ಬಗ್ಗೆ ಎರಡನೇ ಗಂಡ ಮಾಧ್ಯಮದ ಎದುರು ಮಾಹಿತಿ ಬಿಚ್ಚಿಟ್ಟಿದ್ದಾರೆ.
ಮೊದಲ ಪತಿ ತೀರಿಕೊಂಡಿದ್ದಾರೆ ಎಂದು ಸುಳ್ಳು ಹೇಳಿ ಸುಧಾರಾಣಿ ತನ್ನನ್ನು ಮದುವೆಯಾಗಿದ್ದಾರೆ. ಮದುವೆಯ ನಂತರ ಸುಮಾರು 25 ಲಕ್ಷ ರೂಪಾಯಿಗಳಷ್ಟು ಹಣವನ್ನು ತೆಗೆದುಕೊಂಡಿದ್ದಾಳೆ. ನಂತರ, ಸುಧಾರಾಣಿಗೆ ಮೊದಲ ಪತಿ ಹೀರೇಗೌಡ ಬದುಕಿರುವ ವಿಚಾರ ಗೊತ್ತಾಯಿತು ಎಂದು ಯುವಕ ತಿಳಿಸಿದ್ದಾರೆ. ಸುಧಾರಾಣಿ ಹೈದರಾಬಾದ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ, ಬೆಂಗಳೂರಿನಲ್ಲಿ ಶಿವಗೌಡ ಎಂಬುವವರನ್ನು ಮೂರನೇ ಮದುವೆಯಾಗಿರುವುದೂ ನಂತರ ಗೊತ್ತಾಯಿತು ಎಂದಿರುವ ಯುವಕ, ಪೊಲೀಸರಿಗೆ ದೂರು ನೀಡಿದ್ದಾರೆ.
For More Updates Join our WhatsApp Group :




