ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಯಾವ ಆಹಾರ ಸೇವಿಸಬೇಕು? ಯಾವುದನ್ನು ತಪ್ಪಿಸಬೇಕು? ಎಂಬ ಗೊಂದಲ ಹಲವರಿಗೆ ಇದೆ. ಈ ಹಿನ್ನೆಲೆಯಲ್ಲಿ ಸದ್ಗುರು ನಾಲ್ಕು ಪ್ರಮುಖ ಆಹಾರ ಪದಾರ್ಥಗಳನ್ನು ದೂರವಿಡುವಂತೆ ಸಲಹೆ ನೀಡಿದ್ದಾರೆ. ಅವರ ಪ್ರಕಾರ, ಹೊಟ್ಟೆ ತುಂಬಿಸುವುದೇ ಆರೋಗ್ಯಕರ ಅನ್ನವಾಗುವುದಿಲ್ಲ; ಕೆಲವು ಆಹಾರಗಳು ದೇಹಕ್ಕೆ ಹಾನಿ ಮಾಡುತ್ತವೆ
1. ಸಕ್ಕರೆ
ಹೆಚ್ಚು ಸಕ್ಕರೆಯ ಸೇವನೆಯಿಂದ ದೇಹಕ್ಕೆ ಅಗತ್ಯ ಶಕ್ತಿ ಸಿಗುವುದಿಲ್ಲ.
* ಸಂಸ್ಕರಿಸಿದ ಸಕ್ಕರೆಯಲ್ಲಿ ಜೀವಸತ್ವ–ಖನಿಜಗಳು ನಾಶವಾಗುತ್ತವೆ.
* ಕೇವಲ ರುಚಿ ನೀಡುವುದಲ್ಲದೆ, ಆರೋಗ್ಯ ಹಾಳುಮಾಡುವ ಅಪಾಯ.
2. ಹಾಲು
* ಸದ್ಗುರು ಪ್ರಕಾರ, ಮೂರು ವರ್ಷದೊಳಗಿನ ಮಕ್ಕಳಿಗಷ್ಟೇ ಹಾಲು ಸೂಕ್ತ.
* ದೊಡ್ಡವರಲ್ಲಿ ಹಾಲನ್ನು ಜೀರ್ಣಿಸುವ ಕಿಣ್ವ ಕಡಿಮೆ
* ಅಜೀರ್ಣ, ಮಲಬದ್ಧತೆ ಉಂಟುಮಾಡುವ ಸಾಧ್ಯತೆ.
* ಹಾಲಿನ ಬದಲು ಕ್ಯಾಲ್ಸಿಯಂ ಪಡೆಯಲು ಬೇರೆ ಆಹಾರ ಮೂಲಗಳನ್ನು ಬಳಸುವಂತೆ ಸಲಹೆ.
3. ಸಂಸ್ಕರಿಸಿದ ಧಾನ್ಯಗಳು
* ಧಾನ್ಯಗಳಲ್ಲಿ ಇರುವ ಫೈಬರ್, ಜೀವಸತ್ವ, ಖನಿಜಗಳು ಸಂಸ್ಕರಣೆಯಲ್ಲಿ ನಾಶವಾಗುತ್ತವೆ.
* ಪಿಷ್ಟ ಮಾತ್ರ ಉಳಿಯುವುದರಿಂದ ಪೋಷಕಾಂಶ ಕೊರತೆ.
* ನಾರಿನಂಶ ಕಡಿಮೆ → ಜೀರ್ಣಕ್ರಿಯೆ ಸಮಸ್ಯೆಗಳು.
* ಸಾಧ್ಯವಾದಷ್ಟು ಅಸಂಸ್ಕರಿತ ಧಾನ್ಯ ಸೇವನೆ ಉತ್ತಮ.
4. ಟೀ, ಕಾಫಿ
* ಹೆಚ್ಚು ಸೇವನೆಯಿಂದ ಕೆಫೀನ್ ಅಡ್ಡ ಪರಿಣಾಮಗಳು
* ಮನಸ್ಥಿತಿ ತಾತ್ಕಾಲಿಕ ಬದಲಾವಣೆ, ಶಕ್ತಿ ಕುಸಿತ.
* ಪ್ರತಿದಿನ ಅತಿಯಾಗಿ ಕುಡಿಯುವುದರಿಂದ ತ್ರಾಣ ಕಡಿಮೆ
* ತಂಪು ಪಾನೀಯಗಳು ಹಾಗೂ ಸಂಸ್ಕರಿಸಿದ ಆಹಾರಗಳನ್ನು ತಪ್ಪಿಸುವುದೂ ಒಳಿತು.
ಸದ್ಗುರು ಸಲಹೆ: ಆರೋಗ್ಯಕರ ಜೀವನಕ್ಕಾಗಿ ಉತ್ತಮ, ಸ್ವಾಭಾವಿಕ ಹಾಗೂ ಪೌಷ್ಟಿಕ ಆಹಾರ ಸೇವನೆ ಮಾಡಬೇಕು.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH