ನವೋದಯ ಪರೀಕ್ಷೆಯಲ್ಲಿ ಗ್ರಾಮಕ್ಕೆ ಗೌರವ.
ಮಧುಗಿರಿ : 2026ನೇ ಸಾಲಿನ ನವೋದಯ ಪರೀಕ್ಷೆ ಯಲ್ಲಿ ಮಧುಗಿರಿ ತಾಲೂಕಿನ ಆರು ವಿದ್ಯಾರ್ಥಿ ಗಳು ಉತ್ತೀರ್ಣರಾಗಿ ನವೋದಯ ಶಾಲೆಗೆ ಆಯ್ಕೆ ಯಾಗಿರುವುದು ಸಂತಸ ನೀಡುತ್ತದೆ ಎಂದು ಗ್ರಾ ಪಂ ಮಾಜಿ ಸದಸ್ಯ ದೇವರಾಜ್ ತಿಳಿಸಿದರು. ಮಧುಗಿರಿ ತಾಲೂಕಿನ ಬಡವನಹಳ್ಳಿ ಯ ಜ್ಞಾನ ಜ್ಯೋತಿ ನವೋದಯ ತರಬೇತಿ ಕೇಂದ್ರ ದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತರಬೇತಿ ಪಡೆದು ಪರೀಕ್ಷೆ ಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿ ನವೋದಯ ಶಾಲೆಗೆ ಆಯ್ಕೆ ಯಾದ ವಿದ್ಯಾರ್ಥಿ ಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸರ್ಕಾರ ಅನೇಕ ರೀತಿಯ ವಸತಿ ಶಾಲೆಗಳನ್ನು ತೆರೆದು ವಿದ್ಯಾರ್ಥಿ ಗಳಿಗೆ ಅನುಕೂಲ ಮಾಡಿಕೊಡುತ್ತದೆ ಅದರಲ್ಲೂ ವಿಶೇಷವಾಗಿ ಜಿಲ್ಲೆಗೆ ಒಂದು ನವೋದಯ ಶಾಲೆ ಯನ್ನು ತೆರೆದು ಉತ್ತಮ ಗುಣಮಟ್ಟದ ಶಿಕ್ಷಣ ಕೊಡುತ್ತದೆ. ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ತರಬೇತುದಾರ ಕುಶಕುಮಾರ್ ಮಾತನಾಡಿ ನವೋದಯ ಶಾಲೆಗೆ ಹೋಗ ಬಯಸುವ ವಿದ್ಯಾರ್ಥಿ ಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ವನ್ನು ನೀಡಿ ಅವರ ಮುಂದಿನ ವಿದ್ಯಾಭ್ಯಾಸ ಮಾಡಲು ಅನುವುಮಾಡಿಕೊಡುತ್ತದೆ. ಜ್ಞಾನ ಜ್ಯೋತಿ ನವೋದಯ ತರಬೇತಿ ಯಿಂದ ಸುಮಾರು ಆರು ವಿದ್ಯಾರ್ಥಿ ಗಳು ಉತ್ತೀರ್ಣರಾಗಿ ರುವುದು ನನಗೆ ತುಂಬಾ ಸಂತೋಷ ಕೊಡುತ್ತದೆ, ಅದರಲ್ಲಿ ನಾಲ್ಕು ವಿದ್ಯಾರ್ಥಿಗಳು ಬಡವನಹಳ್ಳಿ ಗ್ರಾಮದಿಂದ ಆಯ್ಕೆಯಾಗಿರುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮ ದಲ್ಲಿ ಬಡವನಹಳ್ಳಿ ಗ್ರಾ ಪಂ ಮಾಜಿ ಅದ್ಯಕ್ಷೆ ಬಾನುಪ್ರಿಯ ನಾಗರಾಜು, ಒಬಿಸಿ.ನಾಗರಾಜು , ಬಿ.ಹೆಚ್ ಮಂಜುನಾಥ್, ಶಾಂತಕುಮಾರ್, ಪೋಷಕ ರು ವಿದ್ಯಾರ್ಥಿ ಗಳು ಇದ್ದರು.
For More Updates Join our WhatsApp Group :




