ನವದೆಹಲಿ: ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳಿಗೆ ಶೇ.40 ಜಿಎಸ್ಟಿ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ ರಾಜ್ಯಗಳಿಗೆ ಸಂಭವನೀಯ ಆದಾಯ ನಷ್ಟ ಉಂಟಾಗದಂತೆ ಹೆಚ್ಚುವರಿ ಸುಂಕವನ್ನು ಮುಂದುವರಿಸಲು ಯೋಜನೆ ರೂಪಿಸಲಾಗಿದೆ.
ಹೆಚ್ಚುವರಿ ಸುಂಕದ ವ್ಯವಸ್ಥೆ:
* ಈಗಾಗಲೇ ಶೇ.28 ಜಿಎಸ್ಟಿ ಜೊತೆಗೆ ಕಾಂಪೆನ್ಸೇಶನ್ ಸೆಸ್ ವಿಧಿಸಲಾಗುತ್ತಿತ್ತು.
* ಒಟ್ಟಾರೆ ಸಿಗರೇಟುಗಳ ಮೇಲಿನ ತೆರಿಗೆ ಶೇ.50–90ರಷ್ಟಿತ್ತು.
* ಇದೀಗ ಶೇ.40 ಜಿಎಸ್ಟಿ ಸೇರಿ, ತೆರಿಗೆ ಶೇ.52–88ರಷ್ಟು ಇರುತ್ತದೆ.
ಸೆಸ್ ಹಂತ ಹಂತವಾಗಿ ಕಡಿತ:
* ಹೊಸ ಜಿಎಸ್ಟಿ ವ್ಯವಸ್ಥೆಯಲ್ಲಿ ಕೇವಲ ಶೇ.5 ಮತ್ತು ಶೇ.18 ಟ್ಯಾಕ್ಸ್ ಸ್ಲ್ಯಾಬ್‌ಗಳು ಮಾತ್ರ ಉಳಿದಿವೆ.
* ಆದರೆ ಸಿಗರೇಟು, ತಂಬಾಕು, ಲಕ್ಸುರಿ ವಸ್ತುಗಳನ್ನು “ಸಿನ್ ಗೂಡ್ಸ್”ಎಂದು ವರ್ಗೀಕರಿಸಿ ಶೇ.40 ಜಿಎಸ್ಟಿ ವಿಧಿಸಲಾಗಿದೆ.
* ರಾಜ್ಯಗಳಿಗೆ ಆದಾಯ ನಷ್ಟವನ್ನು ಪೂರೈಸಲು ಕಾಂಪೆನ್ಸೇಶನ್ ಸೆಸ್ ಮುಂದುವರಿಸಲಾಗುತ್ತದೆ.
* ಹಂತ ಹಂತವಾಗಿ ಸೆಸ್ ಕಡಿಮೆ ಮಾಡಿ, ಕೊನೆಗೆ ತೆರವುಗೊಳಿಸಲಾಗುವುದು.
* 2017ರಲ್ಲಿ ಜಿಎಸ್ಟಿ ಜಾರಿಗೆ ಬಂದಾಗ ತಂಬಾಕು ಉತ್ಪನ್ನಗಳಿಗೆ ಶೇ.28 ತೆರಿಗೆ ನಿಗದಿ ಮಾಡಲಾಯಿತು.
* ರಾಜ್ಯ ಸರ್ಕಾರಗಳ ಆದಾಯ ನಷ್ಟ ಪೂರೈಸಲು ಕಾಂಪೆನ್ಸೇಶನ್ ಸೆಸ್ ಹೇರಲಾಯಿತು.
* ಈ ಹಣವನ್ನು ಕೇಂದ್ರ ಸಂಗ್ರಹಿಸಿ, ರಾಜ್ಯಗಳಿಗೆ ಮರುಹಂಚಿಕೆ ಮಾಡಲಾಗುತ್ತಿತ್ತು.
* 2020ರ ಕೋವಿಡ್ ಸಂಕಷ್ಟದಿಂದಾಗಿ ಈ ಸೆಸ್ ಅವಧಿಯನ್ನು **2026ರ ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ.
For More Updates Join our WhatsApp Group :

