ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 5 ಐಸಿಸ್ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಈ ದಾಳಿಯಲ್ಲಿ ಅಧಿಕಾರಿಗಳು ಬಾಂಬ್ ತಯಾರಿಕಾ ಘಟಕವನ್ನೇ ಪತ್ತೆಹಚ್ಚಿ, ಅಲ್ಲಿ ಪತ್ತೆಯಾದ ರಾಸಾಯನಿಕ, ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ದೆಹಲಿ ಪೊಲೀಸರ ವಿಶೇಷ ಘಟಕ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳ ಜಂಟಿ ತಂಡ ಈ ಆಪರೇಷನ್ ನಡೆಸಿದ್ದು,
* ಸೋಡಿಯಂ ಬಯೋಕಾರ್ಬೊನೇಟ್ (ಸ್ಫೋಟಕ ತಯಾರಿಕೆಗೆ ಬಳಸುವದು),
* ಸರ್ಕ್ಯೂಟ್ ಬೋರ್ಡ್‌ಗಳು,
* ವೈರ್‌ಗಳು, ಡಯೋಡ್‌ಗಳು,
* ಮದರ್ಬೋರ್ಡ್‌ಗಳು,
* ಲ್ಯಾಪ್ಟಾಪ್‌ಗಳು ಮತ್ತು ಮೊಬೈಲ್‌ಗಳು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಅಫ್ತಾಬ್, ಆಶರ್ ಡ್ಯಾನಿಶ್, ಸುಫಿಯಾನ್, ಕಮ್ರಾನ್ ಖುರೇಷಿ ಮತ್ತು ಹುಜೈಫ್ ಯೆಮೆನ್ ಎಂದು ಗುರುತಿಸಲಾಗಿದೆ. ಇವರಲ್ಲಿ ಕೆಲವರು ಮುಂಬೈ ನಿವಾಸಿಗಳು.
* ಅಫ್ತಾಬ್ ಮತ್ತು ಸುಫಿಯಾನ್ ಅವರನ್ನು ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ,
* ಆಶರ್ ಡ್ಯಾನಿಶ್ ಅವರನ್ನು ರಾಂಚಿಯಿಂದ,
* ಕಮ್ರಾನ್ ಖುರೇಷಿ ಅವರನ್ನು ಮಧ್ಯಪ್ರದೇಶದ ರಾಜ್ಗಢದಿಂದ,
* ಹುಜೈಫ್ ಯೆಮೆನ್ ಅವರನ್ನು ತೆಲಂಗಾಣದಿಂದ ಬಂಧಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳು ಸ್ಲೀಪರ್ ಸೆಲ್‌ನ ಭಾಗವಾಗಿದ್ದು, ಬಾಂಬ್ ತಯಾರಿ, ಶಸ್ತ್ರಾಸ್ತ್ರ ಸಂಗ್ರಹ ಮತ್ತು ಸಂಘಟನೆಯ ಬಲವರ್ಧನೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು ಎಂಬುದು ಬಹಿರಂಗವಾಗಿದೆ. ಇವರು ಪಾಕಿಸ್ತಾನದಲ್ಲಿರುವ ತಮ್ಮ ನಿರ್ವಾಹಕರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದರುಎಂದು ಮೂಲಗಳು ತಿಳಿಸಿವೆ.
ಈಗಾಗಲೇ ವಶಪಡಿಸಿಕೊಂಡ ಲ್ಯಾಪ್ಟಾಪ್ ಮತ್ತು ಮೊಬೈಲ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಹಾಗೂ ಗುಪ್ತಚರ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನ ಸಾಧ್ಯತೆ ಇದೆ ಎಂದು ಸೂಚನೆ ನೀಡಿದ್ದಾರೆ.
For More Updates Join our WhatsApp Group :
