ಸ್ತನ ಕ್ಯಾನ್ಸರ್ ಮರುಕಳಿಕೆ ತಡೆಯಲು 5 ಅತೀ ಮುಖ್ಯ ಜೀವನಶೈಲಿ ಕ್ರಮಗಳು.

ಸ್ತನ ಕ್ಯಾನ್ಸರ್ ಮರುಕಳಿಕೆ ತಡೆಯಲು 5 ಅತೀ ಮುಖ್ಯ ಜೀವನಶೈಲಿ ಕ್ರಮಗಳು.

ಸ್ತನ ಕ್ಯಾನ್ಸರ್ — ಭಾರತೀಯ ಮಹಿಳೆಯರಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ಹಾಗೂ ಮಾರಕ ಕ್ಯಾನ್ಸರ್. ಆದರೆ ಸಕಾಲದಲ್ಲಿ ಪತ್ತೆ ಹಾಗೂ ಚಿಕಿತ್ಸೆ ನೀಡಿದರೆ ಗುಣಮುಖವಾಗಬಹುದಾದವು. ಆದರೂ ಕೆಲವು ಪ್ರಕರಣಗಳಲ್ಲಿ ಚಿಕಿತ್ಸೆ ಪಡೆದ ಬಳಿಕವೂ ಕ್ಯಾನ್ಸರ್ ಮರುಕಳಿಸುವ ಸಾಧ್ಯತೆ ಇರುತ್ತದೆ. ಆಂಧ್ರಿಕ ಹಂತದ ಸ್ತನ ಕ್ಯಾನ್ಸರ್ ಮರುಕಳಿಕೆಯಿಂದ ತಪ್ಪಿಸಿಕೊಳ್ಳಲು ಜಾಗೃತಿಯಿಂದ ಕೆಲ ಕ್ರಮಗಳನ್ನು ಕೈಗೊಳ್ಳುವುದು ಬಹುಅವಶ್ಯ.

ಅಂದುಕೊಂಡರೆ ಸಾಕು — “ಇನ್ನೇನು ಗುಣವಾಗಿದೆ!” ಅಂತಾ ಬಿಟ್ಟುಬಿಡಬೇಡಿ! ಎಂದು ಎಚ್ಚರಿಸುತ್ತಾರೆ ಬೆಂಗಳೂರು ಆಸ್ಥರ್ ಹಾಸ್ಪಿಟಲ್‌ನ ಡಾ. ಸಿ.ಎನ್ ಪಾಟೀಲ್. ತಮ್ಮ ವೈದ್ಯಕೀಯ ತಂಡದೊಂದಿಗೆ ನಿಕಟವಾಗಿ ಕೆಲಸಮಾಡಿ, ಸತತ ತಪಾಸಣೆ, ಆರೋಗ್ಯಕರ ಜೀವನಶೈಲಿ, ಮತ್ತು ಮನಸ್ಸಿನ ನೆಮ್ಮದಿಗೆ ಗಮನಹರಿಸುವ ಮೂಲಕ ಸ್ತನ ಕ್ಯಾನ್ಸರ್ ಮರುಕಳಿಕೆ ಕಡಿಮೆ ಮಾಡಬಹುದು.

ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಮರುಕಳಿಕೆಯನ್ನು ತಡೆಯಲು 5 ಆರೋಗ್ಯಕರ ಮಾರ್ಗಗಳು:

1.ಆರೋಗ್ಯಕರ ತೂಕ ಕಾಪಾಡಿ, ಚಟುವಟಿಕೆಯಿಂದಿರಿ

 ದೈನಂದಿನ ವ್ಯಾಯಾಮ, ಸಮತೋಲಿತ ಆಹಾರ (ಹಣ್ಣು, ತರಕಾರಿ, ಧಾನ್ಯಗಳು, ಪ್ರೋಟೀನ್)
ದೇಹದ ಉರಿಯೂತ, ಹಾರ್ಮೋನ್ ಅಸ್ವತಂತ್ರತೆ ನಿಯಂತ್ರಣ

2.ನಿಯಮಿತ ತಪಾಸಣೆ ಮಾಡಿಸಿಕೊಳ್ಳಿ

ಗಂಟು, ನೋವು, ಆಯಾಸವಂತಹ ಯಾವುದೇ ಲಕ್ಷಣ ಕಾಣಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
ಫಾಲೋ-ಅಪ್ ತಪಾಸಣೆಗೆ ಗಮನ ನೀಡಿ (ಇಮೇಜಿಂಗ್, ಲ್ಯಾಬ್ ಟೆಸ್ಟ್)

3.ಅತ್ಯಾಧುನಿಕ ಚಿಕಿತ್ಸೆ ಬಗ್ಗೆ ಮಾಹಿತಿಪಡಿಕೊಳ್ಳಿ

ಹಾರ್ಮೋನ್ ಆಧಾರಿತ ಔಷಧ, ಟಾರ್ಗೆಟ್ ಥೆರಪಿ, ಬಯೋಲಾಜಿಕಲ್ ಚಿಕಿತ್ಸೆ
ವೈದ್ಯರೊಂದಿಗೆ ಸಮಾಲೋಚನೆ ಮಾಡಿ: “ನನಗೆ ಲಭ್ಯವಿರುವ ನವೀಕೃತ ಚಿಕಿತ್ಸೆ ಯಾವುದು?”

4.ಭಾವನಾತ್ಮಕ ಆರೋಗ್ಯಕ್ಕೂ ಪ್ರಾಮುಖ್ಯತೆ ನೀಡಿ

ಕೌನ್ಸೆಲಿಂಗ್, ಮೆಂಟಲ್ ಹೆಲ್ತ್‌ಥೆರಪಿ, ಸ್ನೇಹಿತರ ಬೆಂಬಲ
ಭಯ, ಆತಂಕ, ಖಿನ್ನತೆ ಎದುರಿಸಿದರೆ ತಜ್ಞರ ನೆರವು ಪಡೆಯಿರಿ

5.ಧೂಮಪಾನ, ಮದ್ಯಪಾನವಿಲ್ಲದ ಜೀವನಶೈಲಿ

 ತಂಬಾಕು ಸೇವನೆಯು ಕ್ಯಾನ್ಸರ್ ಮರುಕಳಿಕೆಗೆ ನೇರ ಕಾರಣವಾಯ್ತು
 ಮದ್ಯಪಾನವನ್ನು ತೊರೆಯುವುದು ಆರೋಗ್ಯಪೂರ್ಣ ಬದುಕಿಗೆ ಪ್ಲಸ್ ಪಾಯಿಂಟ್

ವೈದ್ಯರ ಸಲಹೆ ಪ್ರಕಾರ ಜೀವನ ನಿರ್ವಹಣೆ ಅಗತ್ಯ

“ಕ್ಯಾನ್ಸರ್ ಗುಣವಾದಂತೆ ಕಾಣಿಸಬಹುದು. ಆದರೆ ಅದರ ಮೇಲೆ ಹಿಡಿತ ಇಡುವ ಶಿಸ್ತಿಲ್ಲದಿದ್ದರೆ, ಅದು ಮತ್ತೆ ತಲೆ ಎತ್ತಬಹುದು. ಹಾಗಾಗಿ ಆರೋಗ್ಯ ಕಾಪಾಡಲು ಪ್ರತಿ ದಿನದ ಶ್ರದ್ಧೆ ಮುಖ್ಯ!” ಎಂದು ಹೇಳುತ್ತಾರೆ ವೈದ್ಯರು.

ಸ್ತನ ಕ್ಯಾನ್ಸರ್ ಗೆ ‘ಗುಡ್‌ಬೈ’ ಹೇಳಲು – ಇಂದೇ ಆರಂಭಿಸಿ:

ನಿಯಮಿತ ತಪಾಸಣೆ
ಆರೋಗ್ಯಕರ ಆಹಾರ ಮತ್ತು ವ್ಯಾಯಾಮ
ಆಧುನಿಕ ಚಿಕಿತ್ಸಾ ಆಯ್ಕೆಗಳ ಅರಿವು
ಧೂಮಪಾನ/ಮದ್ಯಪಾನದಿಂದ ದೂರ
ಮಾನಸಿಕ ನೆಮ್ಮದಿ ಹಾಗೂ ಸಕಾರಾತ್ಮಕ ಮನೋಭಾವ

ಕ್ಯಾನ್ಸರ್ ಪತ್ತೆಯಾಗಿದ್ದೆಂದರೆ ಬದುಕು ಮುಗಿಯಲ್ಲ; ಅದು ಹೊಸ ಆರೈಕೆಗೆಯ ಪ್ರಾರಂಭ. ನಿಮ್ಮ ಜೀವನವನ್ನು ನಿಮ್ಮ ಶ್ರದ್ಧೆ, ಜ್ಞಾನ ಮತ್ತು ಆರೈಕೆಯೊಂದಿಗೆ ರಕ್ಷಿಸಿ!”

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *