50 ದಿನ ಟ್ರಿಪ್, 27 ನದಿ ಮಾರ್ಗ : ಎಂವಿ ಗಂಗಾ ವಿಲಾಸ್ʼ ವೈಶಿಷ್ಟ್ಯ ಗೊತ್ತಾ?

ನದಿ ಮಾರ್ಗದ ಪ್ರವಾಸೋದ್ಯಮಕ್ಕೆ ಹೊಸ ದಿಸೆ ನೀಡಲು ಭಾರತ ಸಜ್ಜಾಗಿದೆ. ಜಗತ್ತಿನ ಅತ್ಯಂತ ಉದ್ದದ ನದಿ ವಿಹಾರ ನೌಕೆʼಎಂವಿ ಗಂಗಾ ವಿಲಾಸ್ʼ ಐಷರಾಮಿ ಪ್ರವಾಸಿ ನೌಕೆ. 62.5 ಮೀಟರ್ ಉದ್ದ ಮತ್ತು 12.8 ಮೀಟರ್ ಅಗಲ ಇರುವ ಈ ನೌಕೆ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ನೌಕೆಯಲ್ಲಿರುವ ಸೌಲಭ್ಯಗಳು ಪ್ರವಾಸಕ್ಕೆ ಹೇಳಿಮಾಡಿಸಿದಂತಿದೆ. ನದಿ ಮಾರ್ಗದ ಪ್ರವಾಸ ಕೈಗೊಳ್ಳುವವರಿಗೆ ಇದರಿಂದ ವಿಶೇಷ ಅನುಭವ, ಅನುಭೂತಿ ಸಿಗುವುದಂತು ಗ್ಯಾರಂಟಿ.

ಈ ಐಷರಾಮಿ ಪ್ರವಾಸಿ ನೌಕೆಯ ವೈಶಿಷ್ಟ್ಯತೆ ಏನು? ಏನೇನು ಸೌಲಭ್ಯಗಳಿವೆ? ಯಾವ್ಯಾವ ತಾಣಗಳಿಗೆ ಪ್ರವಾಸ ಕೈಗೊಳ್ಳಬಹುದು? ಟಿಕೆಟ್ ದರ ಎಷ್ಟು? ಪ್ರವಾಸಕ್ಕೆ ಬುಕ್ ಮಾಡೋದು ಹೇಗೆ.. ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

ಏನಿದು ಎಂವಿ ಗಂಗಾ ವಿಲಾಸ್?

ಇದೊಂದು ಐಷರಾಮಿ ಪ್ರವಾಸಿ ನೌಕೆ. ಪಂಚತಾರಾ ಹೋಟೆಲ್ ಮಾದರಿ ವ್ಯವಸ್ಥೆಯನ್ನು ನೌಕೆ ಹೊಂದಿದೆ. ನೌಕೆಯಲ್ಲಿ 3 ಅಂತಸ್ತುಗಳಿವೆ. ಪ್ರವಾಸಿಗರು ಆರಾಮಾಗಿ, ಎಂಜಾಯ್ ಮಾಡುತ್ತಾ ನದಿ ಮಾರ್ಗವಾಗಿ ಪ್ರವಾಸ ಕೈಗೊಳ್ಳಬಹುದು.

ಏನಿದರ ವೈಶಿಷ್ಟ್ಯ?

ಈ ನೌಕೆಯು 62.5 ಮೀಟರ್ ಉದ್ದ ಮತ್ತು 12.8 ಮೀಟರ್ ಅಗಲ ಇದೆ. ಪ್ರವಾಸಿಗರು ಕೊಠಡಿಯಿಂದಲೂ ಹೊರಗಿನ ದೃಶ್ಯಗಳನ್ನು ನೋಡಬಹುದು. ಇದರಲ್ಲಿ 40 ಆಸನಗಳ ರೆಸ್ಟೋರೆಂಟ್, ಸ್ಪಾ ಕೊಠಡಿ ಕೂಡ ಇದೆ. ಪ್ರವಾಸಿಗರಿಗೆ ಉಳಿದುಕೊಳ್ಳಲು ಒಟ್ಟು 18 ಸೂಟ್ ರೂಮ್ಗಳನ್ನು ನೌಕೆ ಹೊಂದಿದೆ. ಅಷ್ಟೇ ಅಲ್ಲದೇ ಇದರಲ್ಲಿ ಓಪನ್ ಬಾಲ್ಕನಿ ಕೂಡ ಇದೆ. ಐಷರಾಮಿ ಸೌಲಭ್ಯಗಳನ್ನು ಹೊಂದಿರುವ ಈ ನೌಕೆಯಲ್ಲಿ ಜಿಮ್ ಹಾಗೂ ಇತ್ಯಾದಿ ವ್ಯವಸ್ಥೆ ಇದೆ. ಒಮ್ಮೆಗೆ 32 ಪ್ರವಾಸಿಗರಿಗೆ ಅವಕಾಶ ಸಿಗಲಿದೆ

ಭಾರತ-ಬಾಂಗ್ಲಾದೇಶದ 27 ನದಿಗಳಲ್ಲಿ ಯಾನ

ಎಂವಿ ಗಂಗಾ ವಿಲಾಸ್ 3,200 ಕಿಮೀ ಯಾನ ಮಾಡಲಿದೆ. ನೌಕೆಯು ಭಾರತ ಮತ್ತು ಬಾಂಗ್ಲಾದೇಶದ 27 ನದಿ ವ್ಯವಸ್ಥೆ ಮಾರ್ಗವಾಗಿ ಸಾಗಲಿದೆ. ಆ ಮೂಲಕ ವಿಶ್ವ ಪಾರಂಪರಿಕ ತಾಣಗಳು, ರಾಷ್ಟ್ರೀಯ ಉದ್ಯಾನಗಳು, ಘಾಟ್ಗಳು ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಪ್ರಯಾಣವನ್ನು ಸ್ಮರಣೀಯ ಆಗಲಿಸಲಿದೆ. ಬಿಹಾರದ ಪಟ್ನಾ, ಜಾರ್ಖಂಡ್ನ ಶಿವಗಂಜ್, ಪಶ್ಚಿಮ ಬಂಗಾಳದ ಕೋಲ್ಕತ್ತ, ಬಾಂಗ್ಲಾದೇಶದ ಢಾಕಾ, ಅಸ್ಸಾಂನ ಗುವಾಹಟಿಯಂತಹ ನಗರಗಳೂ ಈ ವಿಹಾರದ ಹಾದಿಯಲ್ಲಿವೆ.

ಬಿಹಾರದ ಬೌದ್ಧ ಯಾತ್ರಾ ಸ್ಥಳ ಸಾರನಾಥ, ಪ.ಬಂಗಳಾದ ಸುಂದರಬನ್, ಅಸ್ಸಾಂನ ಮಯೊಂಗ್ ಮತ್ತು ಮಜೌಲಿ, ಹುಲಿಗಳ ಆವಾಸಸ್ಥಾನವಾಗಿರುವ ಸುಂದರ್ಬನ್ನಲ್ಲಿಯೂ ನೌಕೆ ನಿಲುಗಡೆ ಇರುತ್ತದೆ

Pragati TV Social Connect for more latest u

Leave a Reply

Your email address will not be published. Required fields are marked *