ಒಣಗಿದ ದಾಸವಾಳ ಹೂ ನುಂಗಿದ ಪರಿಣಾಮ ಉಸಿರುಗಟ್ಟಿ 6 ತಿಂಗಳ ಮಗು ಸಾವು
ಮೈಸೂರು: ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ನಡೆದ ದುರಂತ ಘಟನೆಯಲ್ಲಿ ಆರುವರೆ ತಿಂಗಳ ಮಗು ಸಾವನ್ನಪ್ಪಿದೆ. ಮನೆಯ ಹೊಸ್ತಿಲಿನಲ್ಲಿ ಪೂಜೆಗಾಗಿ ಇಟ್ಟಿದ್ದ ಒಣಗಿದ ದಾಸವಾಳ ಹೂವನ್ನು ಮಗು ಚಿನ್ಮಯಿಗೌಡ ಆಟವಾಡುತ್ತಾ ನುಂಗಿದೆ. ಇದರಿಂದ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಪೋಷಕರು ಇದನ್ನು ಗಮನಿಸಿದ ಕೂಡಲೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಮಗು ಅಸುನೀಗಿದೆ.
ಮಗುವಿನ ಗಂಟಲಿನಲ್ಲಿ ಒಣಗಿದ ದಾಸವಾಳ ಹೂವು ಸಿಲುಕಿಕೊಂಡಿದ್ದು ಉಸಿರುಗಟ್ಟುವಿಕೆಗೆ ಕಾರಣವಾಗಿದೆ ಎಂದು ನಂತರ ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
For More Updates Join our WhatsApp Group :




