ಜಿಲ್ಲೆಯಾದ್ಯಂತ 634 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ…!

ತುಮಕೂರು ನಗರದ ಶೇ.5೦ರಷ್ಟು ಕೇಂದ್ರಗಳಿಗೆ ನಿವೇಶನ ಕೊರತೆ, ಕತ್ತಲಲ್ಲಿ 86 ಅಂಗನವಾಡಿಗಳು ರನ್..

ಎಸ್.ಹರೀಶ್ ಆಚಾರ್ಯ ತುಮಕೂರು

ಅಂಗನವಾಡಿ ಕೇಂದ್ರಗಳನ್ನು ಮಾಂಟೆಸ್ಸರಿಗಳಾಗಿ ಮೇಲ್ದರ್ಜೆಗೇರಿಸುವ ಜೊತೆಗೆ ಸೂಕ್ತ ಸ್ಥಳಾವಕಾಶ ಲಭ್ಯವಿರುವ ಅಂಗನವಾಡಿ ಕೇಂದ್ರಗಳಲ್ಲಿ  6 ತಿಂಗಳಿ0ದ 3 ವರ್ಷದೊಳಗಿನ ಮಕ್ಕಳಿಗಾಗಿ ಪಾಲನಾ ಕೇಂದ್ರಗಳನ್ನು ತೆರೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಜಿಲ್ಲೆಯಲ್ಲಿರುವ 4199 ಅಂಗನವಾಡಿ ಕೇಂದ್ರಗಳಲ್ಲಿ 15೦ಕ್ಕೂ ಅಧಿಕ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದು, 634 ಅಂಗನವಾಡಿಗಳು ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿರುವುದು ಕಂಡುಬAದಿದೆ.

ಸಿರಾದಲ್ಲಿ ಹೆಚ್ಚು ಬಾಡಿಗೆ ಅಂಗನವಾಡಿಗಳು: ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 4199 ಅಂಗನವಾಡಿ ಕೇಂದ್ರಗಳ ಪೈಕಿ 3೦೦1 ಅಂಗನವಾಡಿಗಳು ಸ್ವಂತ ಕಟ್ಟಡ ಹೊಂದಿದ್ದರೆ 246 ಕೇಂದ್ರಗಳು ಇತರೆ ಕಟ್ಟಡ, 318 ಅಂಗನವಾಡಿಗಳು ಶಾಲಾ ಕಟ್ಟಡದಲ್ಲಿ ಹಾಗೂ 634 ಅಂಗನವಾಡಿಗಳು ಬಾಡಿಗೆ ಕಟ್ಡಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಶಿರಾದಲ್ಲಿ 1೦3 ಸಂಖ್ಯೆಯ ಅಂಗನವಾಡಿಗಳು ಬಾಡಿಗೆಯಲ್ಲಿದ್ದರೆ, ನಂತರದ ಸ್ಥಾನದಲ್ಲಿ ತುಮಕೂರು ನಗರ, ಗ್ರಾಮಾಂತರ, ತಿಪಟೂರು ಇದೆ. ಜಿಲ್ಲಾ ಕೇಂದ್ರವಾದ ತುಮಕೂರು ನಗರವೊಂದರಲ್ಲೆ 95 ಅಂಗನವಾಡಿಗಳು ಬಾಡಿಗೆ ಕಟ್ಡಡದಲ್ಲಿ ನಡೆಯುತ್ತಿದ್ದರೆ, ತುಮಕೂರು ಗ್ರಾಮಾಂತರ ಹಾಗೂ ತಿಪಟೂರಿನಲ್ಲಿ ತಲಾ 64 ಅಂಗನವಾಡಿ ಕೇಂದ್ರದಲ್ಲಿ ಬಾಡಿಗೆ ಕಟ್ಟಡದಲ್ಲಿ ಮಕ್ಕಳ ಪಾಲನೆ, ಪ್ರಾಥಮಿಕ ಅಕ್ಷರಾಭ್ಯಾಸ ಮಾಡಿಸುತ್ತಿದೆ.

ನಿವೇಶನ ಲಭ್ಯವಿರದ ಅಂಗನವಾಡಿಗಳು: ಜಿಲ್ಲೆಯ ನಗರ, ಗ್ರಾಮೀಣ ಪ್ರದೇಶದಲ್ಲಿ ನಿವೇಶನ ಲಭ್ಯವಿರದ ಅಂಗನವಾಡಿಗಳ ಸಂಖ್ಯೆ 337ರಷ್ಟಿದ್ದು, ನಗರ ವ್ಯಾಪ್ತಿಯಲ್ಲಿ 26 ಕೇಂದ್ರಗಳಲ್ಲಿ ನಿವೇಶನ ಲಭ್ಯವಿದ್ದರೂ ಸ್ವಂತ ಕಟ್ಡವಿಲ್ಲ. ಇದೇ ರೀತಿ ಗ್ರಾಮೀಣ ಪ್ರದೇಶದಲ್ಲಿ  127 ಕೇಂದ್ರಗಳಲ್ಲಿ ನಿವೇಶನ ಕೊರತೆಯಿದ್ದು, 367 ನಿವೇಶನ ಲಭ್ಯವಿದ್ದರೂ ಸ್ವಂತ ಸೂರಿಲ್ಲದ ಸ್ಥಿತಿಯಲ್ಲಿವೆ. ನಗರ ಪ್ರದೇಶದ ಪೈಕಿ ತುಮಕೂರು ನಗರದಲ್ಲಿ ಅತೀ ಹೆಚ್ಚು ನಿವೇಶನ ಕೊರತೆಯಿರುವ ಅಂಗನವಾಡಿಗಳಿವೆ. ನಗರದಲ್ಲಿ ಕಾರ್ಯನಿರ್ವಸುತ್ತಿರುವ 157 ಅಂಗನವಾಡಿಗಳಲ್ಲಿ ಶೇ.೫೦ಕ್ಕೂ ಅಧಿಕ ಅಂದರೆ 87 ಅಂಗನವಾಡಿಗಳಿಗೆ ಸ್ವಂತ ನಿವೇಶನವಿಲ್ಲ. ಬಾಡಿಗೆ ಕಟ್ಟಡದಲ್ಲಿ ಕಿಷ್ಕಿಂದೆಯ0ತಹ ಸ್ಥಳಗಳಲ್ಲಿ ಮಕ್ಕಳು ಸರಿಯಾಗಿ ಆಟವಾಡಲು ಆಗದ ಸ್ಥಿತಿಯಲ್ಲಿ ನಗರ ಪ್ರದೇಶದಲ್ಲಿ ಅಂಗನವಾಡಿ ಮುನ್ನೆಡೆಯುತ್ತಿವೆ.

ಗ್ರಾಮಾಂತರದಲ್ಲಿ ಅತೀ ಹೆಚ್ಚು ಶೌಚಾಲಯ ಕೊರತೆ: ಶೇ.೧೨ಕ್ಕೂ ಅಧಿಕ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವುದು ಒಂದೆಡೆಯಾದರೆೆ, 67 ಕೇಂದ್ರಗಳಲ್ಲಿ ಶೌಚಾಲಯವಿಲ್ಲದೆ ಬಯಲನ್ನೇ ಆಶ್ರಯಿಸುವಂತಾಗಿದೆ. ಅತೀ ಹೆಚ್ಚು ಶೌಚಾಲಯ ಕೊರತೆ ತುಮಕೂರು ಗ್ರಾಮಾಂತರ ಭಾಗದ ಅಂಗನವಾಡಿಗಳಲ್ಲಿದ್ದು, ಗ್ರಾಮಾಂತರದಲ್ಲಿ 499 ಅಂಗನವಾಡಿ ಕೇಂದ್ರದ ಪೈಕಿ 477 ಶೌಚಾಲಯ ಮಾತ್ರವಿದ್ದು, 22 ಅಂಗನವಾಡಿಗಳಲ್ಲಿ ಶೌಚಾಲಯವಿಲ್ಲವಾಗಿದೆ.

86 ಕೇಂದ್ರಗಳಿಗೆ ವಿದ್ಯುತ್ ಇಲ್ಲ: ಉಳಿದಂತೆ ತುರುವೇಕೆರೆಯಲ್ಲಿ ೦4, ತುಮಕೂರುನಗರದಲ್ಲಿ ೦2, ಸಿರಾದಲ್ಲಿ ೦6, ಪಾವಗಡದಲ್ಲಿ ೦4, ಕುಣಿಗಲ್‌ನಲ್ಲಿ ೦6, ಗುಬ್ಬಿಯಲ್ಲಿ ೦5 ಹಾಗೂ ಚಿ.ನಾ.ಹಳ್ಳಿಯಲ್ಲಿ ೦6 ಕೇಂದ್ರಗಳಲ್ಲಿ ಶೌಚಾಲಯದ ಕೊರತೆ ಇದೆ. ಇನ್ನೂ ವಿದ್ಯುತ್ ಸಂಪರ್ಕವನ್ನು ೪೧೧೩ ಕೇಂದ್ರಗಳಿಗಷ್ಟೇ ಇದ್ದು, 86 ಕೇಂದ್ರಗಳಿಗೆ ವಿದ್ಯುತ್ ಸೌಲಭ್ಯವೇ ಇಲ್ಲ.  ಈ ಪೈಕಿ ವಿದ್ಯುತ್ ಸಂಪರ್ಕ ಹೊಂದಿರದ ಹೆಚ್ಚಿನ ಅಂಗನವಾಡಿಗಳು ಚಿಕ್ಕನಾಯಕನಹಳ್ಳಿ ತಾಲ್ಲೂಕಿನುಲ್ಲಿ 2೦ ಹಾಗೂ ಕೊರಟಗೆರೆ ತಾಲ್ಲೂಕಿನಲ್ಲಿ 18 ಸಂಖ್ಯೆಯಲ್ಲಿ ಕಂಡುಬAದಿವೆ. ಸರ್ಕಾರಿ ಶಾಲೆಯ ಆಯ್ಕೆ ಪರಿಹಾರ: ಇನ್ನೂ ನಗರ ಪ್ರದೇಶದಲ್ಲಿ ಸ್ವಂತ ಕಟ್ಟಡವಿಲ್ಲದ ಸಮಸ್ಯೆ ಎದುರಿಸುತ್ತಿರುವ ಅಂಗನವಾಡಿಗಳಿಗೆ ಸಿಎ, ಸರ್ಕಾರಿ ಭೂಮಿ ಹೀಗೆ ಜಾಗ ಹುಡುಕುವ ಪ್ರಯತ್ನದಲ್ಲೆ ಆಡಳಿತ ಕಾಲಹರಣ ಮಾಡದೆ ಸರ್ಕಾರಿ ಶಾಲೆ ಅಂಗಳಕ್ಕೆ ಅಂಗನವಾಡಿಗಳನ್ನು ಬಾಡಿಗೆ ಕಟ್ಟಡದಿಂದ ಸ್ಥಳಾಂತರಿಸುವ ಅಭಿಪ್ರಾಯಗಳು ಕೇಳಿಬಂದಿವೆ. ನಗರ ವ್ಯಾಪ್ತಿಯಲ್ಲಿ ಎಷ್ಟೋ ಸರ್ಕಾರಿ ಕನ್ನಡ ಕಿರಿಯ, ಹಿರಿಯ ಪ್ರಾಥಮಿಕ ಪಾಠ ಶಾಲೆಗಳುವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲ್ಪಟ್ಟಿದ್ದು, ಕೆಲವು ಶಾಲೆಗಳಲ್ಲಿ ಕಡಿಮೆ ಸಂಖ್ಯೆಯಿ0ದ ಹಲವು ತರಗತಿ ಕೊಠಡಿಗಳು ಖಾಲಿ ಹೊಡೆಯುತ್ತಿವೆ. ಇದನ್ನು ಇಲಾಖಾ ಆದೇಶಗಳ ಮುಖಾಂತರ ತ್ವರಿತವಾಗಿ ಅಂಗನವಾಡಿಗಳಿಗೆ ಹಸ್ತಾಂತರಿಸಿದರೆ ಮುಂದೆ ಮಾಂಟೆಸ್ಸರಿಗಳಾಗಿ ಮೇಲ್ದರ್ಜೆಗೇರುತ್ತಿರುವ ಅಂಗನವಾಡಿಗಳ ಮಕ್ಕಳು, ನಂತರದಲ್ಲಿ ಇದೇ ಅಂಗಳದ ಸರ್ಕಾರಿ ಶಾಲೆಯಲ್ಲಿ ಮುಂದುವರಿದು ಸರ್ಕಾರಿ ಶಾಲೆಗಳ ಉಳಿವಿಗೂ ಅವಕಾಶವಾಗುತ್ತದೆ.

ಜಿಲ್ಲೆಯಲ್ಲಿ ಮಧುಗಿರಿಯಲ್ಲಿ ಮಾತ್ರ ಪೂರ್ಣ ಸೌಲಭ್ಯ.!

ಅಂಗನವಾಡಿಗಳಲ್ಲಿ ವಿದ್ಯುತ್ ಸಂಪರ್ಕ ಶೌಚಾಲಯ ಕೊರತೆಯಿರದ ಜಿಲ್ಲೆಯ ಏಕೈಕ ತಾಲ್ಲೂಕೆಂದರೆ ಮಧುಗಿರಿ ತಾಲ್ಲೂಕೆಂಬ ಹೆಗ್ಗಳಿಕೆ ಗಳಿಸಿದೆ. ಮಧುಗಿರಿ ತಾಲ್ಲೂಕಿನಲ್ಲಿರುವ 43೦ ಅಂಗನವಾಡಿಗಳಲ್ಲಿ, ಶೌಚಾಲಯ, ವಿದ್ಯುತ್, ಫ್ಯಾನ್, ನೀರು ಈ ನಾಲ್ಕು ಅಗತ್ಯ ಸೌಕರ್ಯಗಳು ಲಭ್ಯವಿದೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರತಿನಿಧಿಸುತ್ತಿರುವ ಮಧುಗಿರಿಯಲ್ಲಿರುವ 43೦ ಅಂಗನವಾಡಿ ಕೇಂದ್ರಗಳ ಪೈಕಿ 6೦ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿದ್ದು ಇವುಗಳಿಗೆ ಸ್ವಂತ ನಿವೇಶನ, ಕಟ್ಡಡವನ್ನು ಸಚಿವರು ಒದಗಿಸಲು ಮುಂದಾದರೆರೆ ಇಡೀ ಜಿಲ್ಲೆಗೆ ಮಧುಗಿರಿ ತಾಲ್ಲೂಕು ಅಂಗನವಾಡಿಯಲ್ಲಿ ಮಾದರಿ ತಾಲ್ಲೂಕೆನಸಲಿದೆ.

ಸಿಎ ನಿವೇಶನದ ಸಲಹೆ, ವಾಸ್ತವದಲ್ಲಿ ಸಾಧುವೇ..?: ಕಳೆದ ವಾರ ಜಿಪಂ ಸಭಾಂಗಣದಲ್ಲಿ ಜರುಗಿದ ಇಲಾಖಾ ಪ್ರಗತಿ ಪರಿಶೀಲನಾ ವೇಳೆ ಅಂಗನವಾಡಿಗಳು ಸ್ವಂತ ನೆಲೆ ಕಂಡುಕೊಳ್ಳಲು ಜಿಲ್ಲಾಡಳಿತ ಅಗತ್ಯ ನಿವೇಶನ ಒದಗಿಸಿಕೊಡಲು ಮುಂದಾಗಬೇಕೆ0ದು ಸಚಿವೆ ಲಕ್ಷಿö್ಮ ಹೆಬ್ಬಾಳ್ಕರ್ ಸೂಚನೆ ನೀಡಿದ್ದಾರೆ. ನಗರ ವ್ಯಾಪ್ತಿಯಲ್ಲಿರುವ ಅಂಗನವಾಡಿಗಳಿಗೆ ಸ್ವಂತ ಸೂರಿನ ಸಮಸ್ಯೆ ಹೆಚ್ಚಾಗಿದ್ದು, ನಗರ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಸಿಎ ನಿವೇಶನಗಳನ್ನು ಅಂಗನವಾಡಿಗೆ ಒದಗಿಸಿಕೊಡುವಂತೆ ನಿರ್ದೇಶಿಸಿದ್ದಾರೆ.ಆದರೆ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ 3೦ ವರ್ಷ ಗುತ್ತಿಗೆ ಆಧಾರದಲ್ಲಿ ಸಂಘ ಸಂಸ್ಥೆಗಳಿಗೆ ಎಸ್‌ಆರ್ ದರವನ್ನಾಧರಿಸಿ ಹಣ ಕಟ್ಟಿಸಿಕೊಂಡು ನೀಡುತ್ತಿರುವ ಸಿಎ ನಿವೇಶನಗಳು ಅಷ್ಟು ಸುಲಭವಾಗಿ ಅಂಗನವಾಡಿಗಳಿಗೆ ಧಕ್ಕುವುದೇ..? ಎಂಬ ಪ್ರಶ್ನೆ ಎದುರಾಗಿದೆ. ಉಚಿತವಾಗಿ ಇಲ್ಲವೇ ಅತ್ಯಂತ ಕಡಿಮೆ ದರಕ್ಕೆ ಸಿಎ ನಿವೇಶನ ಪಡೆಯಬೇಕಾದರೆ ಸರ್ಕಾರದ ಹಂತದಲ್ಲಿ ಹಲವು ಆಡಳಿತ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಾಗುತ್ತದೆ. ಸರ್ಕಾರದ ಆದೇಶದೊಂದಿಗೆ ಅಂಗನವಾಡಿಗಳಿಗೆ ಹಸ್ತಾಂತರಗೊಳ್ಳಬೇಕಾಗುತ್ತದೆ. ಒಂದು ವೇಳೆ ಊರಿನ ಹೊರಗಡೆ ಸಿಎ ನಿವೇಶನಗಳು ಸಿಕ್ಕರೆ ಅಲ್ಲಿ ಅಂಗನವಾಡಿ ತೆರೆದರೆ ಮಕ್ಕಳ ಬರುವರೇ ಎಂಬ ವಾಸ್ತವಿಕ ಪ್ರಶ್ನೆಯೂ ಎದುರಾಗಿದ್ದು, ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ಅಂಗನವಾಡಿಗೆ ಯಾವ ರೀತಿ ನೆಲೆಯನ್ನು ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಲ್ಪಿಸಿಕೊಡಲಿದೆ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *