ಲಿಖಿತ ಹಾಗೂ ಮೌಖಿಕ ಸ್ಪರ್ಧೆಯಲ್ಲಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಜ್ಞಾನಪರ ಪ್ರಾತಿನಿಧ್ಯ
ತಿಪಟೂರು: ಸೊಗಡು ಜನಪದ ಹೆಜ್ಜೆ ತಿಪಟೂರು, ಶಾಲಾ ಶಿಕ್ಷಣ ಇಲಾಖೆ ಹಾಗೂ ಇತರ ಸಂಘಟನೆಗಳ ಸಹಯೋಗದಲ್ಲಿ 6ನೇ ವರ್ಷದ “ಕಲ್ಪತರು ವಿದ್ಯಾರ್ಥಿ ರತ್ನ”-2026 ಪ್ರಶಸ್ತಿಗಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಕಾರ್ಯಕ್ರಮವನ್ನು ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ತಿಪಟೂರಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಗಣ್ಯರು ಶುಭಾಶಯಗಳನ್ನು ಬರೆಯುವ ಮೂಲಕ ಉದ್ಘಾಟನೆಗೊಂಡಿತು. ದುಬೈ ಸರ್ಕಾರದಲ್ಲಿ ತಾಂತ್ರಿಕ ಮತ್ತು ಕೌಶಲ್ಯ ವಿಭಾಗದಲ್ಲಿ ಉನ್ನತ ಅಧಿಕಾರಿಯಾಗಿರುವ ಶ್ರೀ ಎನ್ ಜಿ ಬಸವರಾಜು ನೊಣವಿನಕೆರೆ, ತಿಪಟೂರು ತಾಲೂಕುರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಕ್ಕಳೊಂದಿಗೆ ಸಂವಾದ ನಡೆಸಿಕೊಟ್ಟರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಲಿಖಿತ ಹಾಗೂ ಮೌಕಿಕ ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಲಿಖಿತ ಪರೀಕ್ಷೆಯಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಲಿಖಿತ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 15 ವಿದ್ಯಾರ್ಥಿಗಳನ್ನು ರಸಪ್ರಶ್ನೆ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿ ಪಂಚಭೂತಗಳ ಹೆಸರಿನ ಗಾಳಿ, ನೀರು, ಮಣ್ಣು, ಬೆಂಕಿ, ಆಕಾಶ ಹೆಸರಿನ ಐದು ತಂಡಗಳನ್ನು ರಚಿಸಿ 10 ಸುತ್ತುಗಳ ಪ್ರಶ್ನಾವಳಿಗಳೊಂದಿಗೆ ಸ್ಪರ್ಧೆ ನಡೆಸಲಾಯಿತು. ತಂಡಗಳು ಉತ್ತರಿಸಲಾಗದ ಪ್ರಶ್ನೆಗಳಿಗೆ ಪೋಷಕರು ಹಾಗೂ ವಿದ್ಯಾರ್ಥಿಗಳು ಉತ್ತರಿಸಿ ಪುಸ್ತಕ ಬಹುಮಾನಗಳನ್ನು ಪಡೆದುಕೊಂಡರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕು. ಚರಿತ ಎಸ್.ಸುಜಾ, ಕಲ್ಪತರು ಸೆಂಟ್ರಲ್ ಶಾಲೆ. ಕು.ಚಿರಂತ್ ಎಂ. ಎಂ. ಡಿ.ಆರ್. ಎಸ್ ಮತ್ತು ಕು.ಪ್ರೀತಂ, ನಳಂದ ಪ್ರೌಢಶಾಲೆ ತಿಪಟೂರು ಇವರುಗಳನ್ನು ಒಳಗೊಂಡ “ಬೆಂಕಿ “ತಂಡ ವಿಜೇತರಾಗಿ 2025 ನೇ ಸಾಲಿನ “ಕಲ್ಪತರು ವಿದ್ಯಾರ್ಥಿ ರತ್ನ” ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಪ್ರಶಸ್ತಿಯನ್ನು ದಿನಾಂಕ 26.01.2026ರ ಗಣರಾಜ್ಯೋತ್ಸವ ದಿನದಂದು ತಾಲೂಕು ಮಟ್ಟದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾನ್ಯ ಶಾಸಕರು ಹಾಗೂ ಗಣ್ಯರು ಸಮ್ಮುಖದಲ್ಲಿ ವಿತರಿಸಲಾಗುವುದು. ಶ್ರೀ ಪ್ರದೀಪ್, ಪ್ರಾಂಶುಪಾಲರು, ಟೈಮ್ಸ ಪಿ.ಯು.ಕಾಲೇಜು, ತಿಪಟೂರು ಭಾಗವಹಿಸಿ, ವಿಜೇತ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಶುಲ್ಕ ವಿನಾಯಿತಿ ನೀಡುವುದಾಗಿ ತಿಳಿಸಿ, ಸ್ಪೂರ್ತಿದಾಯಕ ಮಾತುಗಳನ್ನಾಡಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪುಸ್ತಕ ಮತ್ತು ಒತ್ತಿಗೆಗಳನ್ನು ವಿತರಣೆ ಮಾಡಿ ಪ್ರೋತ್ಸಾಹಿಸಿದರು. ತಿಪಟೂರು ತಾಲ್ಲೂಕಿನ ಸ್ಥಳೀಯ ವಿಶೇಷತೆಯ ಪ್ರಶ್ನೆಗಳೊಂದಿಗೆ ವಿಜ್ಞಾನ,ಗಣಿತ, ಸಮಾಜ ವಿಜ್ಞಾನ, ಸಾಹಿತ್ಯ, ರಾಜಕೀಯ, ಕ್ರೀಡೆಗಳಿಗೆ ಸಂಬಂಧಿಸಿದ ಕುತೂಹಲ ಭರಿತ ಪ್ರಶ್ನಾವಳಿ ಒಳಗೊಂಡ ರಸಪ್ರಶ್ನೆ ಕಾರ್ಯಕ್ರಮವನ್ನು ಶ್ರೀಯುತ ಸುರೇಶ್ ಶಾಂತನಹಳ್ಳಿ, ಇವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಮಧ್ಯಾಹ್ನದ ದಾಸೋಹ ವ್ಯವಸ್ಥೆಯನ್ನು ಶರಣ ಅನಂದ್ ಕುಮಾರ್ ದಂಪತಿಗಳು ನಡೆಸಿಕೊಟ್ಟರು.
ಮೋಹನ್ ಬೀರಸಂದ್ರ ಇವರು ಎಲ್ಲರಿಗೂ ಗೆಜ್ಜು ಹುಣಸೇಹಣ್ಣಿನ ರುಚಿ ಹಂಚಿದರು. ಅಧ್ಯಕ್ಷತೆ ವಹಿಸಿದ್ದ ಸಿರಿಗಂಧ ಗುರು ರವರು ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಹುರುಪು ನೀಡುವಂತಿದ್ದು, ಶಾಲಾ ಶಿಕ್ಷಕರಿಂದ ಹೆಚ್ಚಿನ ಪ್ರೋತ್ಸಾಹ ದೊರೆತಲ್ಲಿ ಎಸ್. ಎಸ್.ಎಲ್.ಸಿ ಮಕ್ಕಳಿಗೆ ಬ್ರಿಡ್ಜ್ ಕೋರ್ಸ್ ನಡೆಸಲು ಯೋಜಿಸಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸೊಗಡು ಜನಪದ ಹೆಜ್ಜೆ ಸಂಘದ ಉಪಾಧ್ಯಕ್ಷರಾದ ನಿಜಗುಣ ಮಾರನಗೆರೆ, ಕಾರ್ಯದರ್ಶಿ ಚಿದಾನಂದ ಮೂರ್ತಿ ಬೀರಸಂದ್ರ, ಪದಾಧಿಕಾರಿಗಳಾದ, ಸುಧಾಕರ, ತರಕಾರಿ ಗಂಗಾಧರ್, ದಾಕ್ಷಾಯಣಮ್ಮ ಉಪ್ಪಿನಹಳ್ಳಿ, ಮಂಜುಳ ತಿಮ್ಮೇಗೌಡ, ಮೋನಿಕ,ಭರತ್ ಗುರು, ಮಧು, ಜ್ಯೋತಿ ಬಿಳಿಗೆರೆ,ಲಾವಣ್ಯ, ಶೀತಲ್ ಹಾಗು ಹಲವಾರು ಪೋಷಕರು ಭಾಗವಹಿಸಿದ್ದರು.
For More Updates Join our WhatsApp Group :




