ಬೆಂಗಳೂರು : ಸದ್ಗುರು ಸನ್ನಿಧಿ ಚಿಕ್ಕಬಳ್ಳಾಪುರದಲ್ಲಿ, ಆದಿಯೋಗಿಯ ಸಮ್ಮುಖದಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಬೆಳಗ್ಗೆ 8 ಗಂಟೆಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಆಶ್ರಮವಾಸಿಗಳು, ಸದ್ಗುರು ಸನ್ನಿಧಿಯ ಸುತ್ತಮುತ್ತಲಿನ ಸ್ಥಳೀಯ ಸಮುದಾಯಗಳ ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಕುರ್ಲಹಳ್ಳಿ ಗ್ರಾಮದ ಅವಲಗುರ್ಕಿ ಪಂಚಾಯತ್ ಸದಸ್ಯರಾದ ಶ್ರೀ ವಿ. ಎನ್. ರಾಘವೇಂದ್ರ ಅವರು ರಾಷ್ಟ್ರಧ್ವಜವನ್ನು ಹಾರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸಾಂಪ್ರದಾಯಿಕ ಭಾರತೀಯ ಉಡುಪನ್ನು ಧರಿಸಿ ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಸೌಂಡ್ಸ್ ಆಫ಼್ ಈಶ ದಿಂದ ಸಂಗೀತ ಪ್ರದರ್ಶನವನ್ನು ಅರ್ಪಿಸಲಾಯಿತು.