9ನೇ ಆಯವ್ಯಯ ಮಂಡನೆ; ಮೋದಿ ಸರ್ಕಾರದಲ್ಲಿ ನಿರಂತರ ಸಾಧನೆ.
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಕೇಂದ್ರಬಜೆಟ್ ಮಂಡಿಸಿ ಹೊಸ ದಾಖಲೆ ಬರೆದಿದ್ದಾರೆ. ಫೆಬ್ರವರಿ 2024ರ ಮಧ್ಯಂತರ ಬಜೆಟ್ ಸೇರಿದಂತೆ ಒಟ್ಟು 9 ಆಯವ್ಯಯವನ್ನು ಅವರು ಮಂಡಿಸಿದ್ದು, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಸತತವಾಗಿ ಕೇಂದ್ರ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಅವರು ಮಂಡಿಸಿರುವ ಬಜೆಟ್ 53.47 ಲಕ್ಷ ಕೋಟಿ ಮೌಲ್ಯದ್ದಾಗಿದೆ.
ಇಂದು 1 ಗಂಟೆ 26 ನಿಮಿಷಗಳ ಕಾಲ ಬಜೆಟ್ ಮಂಡಿಸಿರುವ ವಿತ್ತ ಸಚಿವರು, ಹಲವು ಪ್ರಮುಖ ವಿಚಾರಗಳನ್ನು ಘೋಷಿಸಿದ್ದಾರೆ. ಹಿಂದಿನ ಬಜೆಟ್ ಮಂಡನೆಗಳಲ್ಲಿ ವಿತ್ತ ಸಚಿವರು ತೆಗೆದುಕೊಂಡಿದ್ದ ಸಮಯದ ಮಾಹಿತಿ ಇಲ್ಲಿದೆ.
- 2025-26 – 1 ಗಂಟೆ 14 ನಿಮಿಷ
- 2024-25 – 1 ಗಂಟೆ 25 ನಿಮಿಷ
- 2024 (ಮಧ್ಯಂತರ ಬಜೆಟ್) – 56 ನಿಮಿಷ
- 2023-24- 1 ಗಂಟೆ 27 ನಿಮಿಷ
- 2022-23 – 1 ಗಂಟೆ 32 ನಿಮಿಷ
- 2021-22 – 1 ಗಂಟೆ and 40 ನಿಮಿಷ
- 2020-21- 2 ಗಂಟೆ and 42 ನಿಮಿಷ
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯಲ್ಲಿ ಅಂದರೆ 2019ರಲ್ಲಿ ನಿರ್ಮಲಾ ಸೀತಾರಾಮನ್ ಅವರು ದೇಶದ ಮೊದಲ ಪೂರ್ಣಾವಧಿಯ ಮಹಿಳಾ ಹಣಕಾಸು ಸಚಿವೆಯಾಗಿದ್ದರು. 2024ರಲ್ಲಿ ಮೂರನೇ ಅವಧಿಗೆ ಅಧಿಕಾರಕ್ಕೆ ಮೋದಿ ಸರ್ಕಾರದಲ್ಲಿಯೂ ಅವರಿಗೆ ಇದೇ ಇಲಾಖೆಯ ಜವಾಬ್ದಾರಿ ಸಿಕ್ಕಿತ್ತು. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ವಿವಿಧ ಅವಧಿಗಳಲ್ಲಿ ಒಟ್ಟು 10 ಬಜೆಟ್ ಮಂಡಿಸಿದ್ದರೆ, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ 9 ಬಾರಿ ಬಜೆಟ್ ಮಂಡಿಸಿದ್ದರು. ಭಾರತದ ಹಣಕಾಸು ಸಚಿವರಾಗಿದ್ದಾಗ ಪ್ರಣಬ್ ಮುಖರ್ಜಿ ಕೂಡ 8 ಬಾರಿ ಬಜೆಟ್ ಮಂಡಿಸಿದ್ದು, ನಿರ್ಮಲಾ ಸೀತಾರಾಮನ್ ಅವರು ಮೊರಾರ್ಜಿ ದೇಸಾಯಿ ಅವರ ದಾಖಲೆ ಬ್ರೇಕ್ ಮಾಡುವ ಸನಿಹದಲ್ಲಿದ್ದಾರೆ.
For More Updates Join our WhatsApp Group :




