ಕನ್ನಡದ ಅಗ್ನಿಸಾಕ್ಷಿ, ರುಕ್ಕು ಸೀರಿಯಲ್ನಲ್ಲಿ ನಟಿಸಿದ ಶೋಭಾ ಶೆಟ್ಟಿ ಇದೀಗ ತೆಲುಗಿನ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ತೆಲುಗು ಸೀರಿಯಲ್ಗಳ ಮೂಲಕ ಗುರುತಿಸಿಕೊಂಡಿದ್ದ ನಟಿ, ಈಗ ನಾಗಾರ್ಜುನ ನಿರೂಪಣೆ ಬಿಗ್ ಬಾಸ್ ಶೋಗೆ ಎಂಟ್ರಿ ಕೊಟ್ಟಿದ್ದಾರೆ.
ತೆಲುಗಿನಲ್ಲಿ ದೊಡ್ಮನೆ ಆಟ ಆರಂಭವಾಗಿದೆ. ಬಿಗ್ ಬಾಸ್ ಸೀಸನ್ 7ಗೆ ಸೆ.4ರಂದು ಚಾಲನೆ ಸಿಕ್ಕಿದೆ. ಶಕೀಲಾ, ಕಿರಣ್ ರಾಥೋಡ್ ಇರುವ ಈ ಸೀಸನ್ನಲ್ಲಿ ಕನ್ನಡದ ಯುವ ನಟಿ ಶೋಭಾ ಶೆಟ್ಟಿ ಕೂಡ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ದೊಡ್ಮನೆಗೆ ಗ್ಲ್ಯಾಮರ್ ತುಂಬಲು ಶೋಭಾ ಕೂಡ ಸಾಥ್ ನೀಡಿದ್ದಾರೆ.
ಈ ಶೋ ಶುರುವಾಗುವ ಮುನ್ನವೇ ಶೋಭಾ ಶೆಟ್ಟಿ ಮನೆಗೆ ಹೋಗುತ್ತಾರೆ ಎಂಬ ಅಂತೆ ಕಂತೆ ಸುದ್ದಿಯಿತ್ತು. ಈಗ ಸ್ಪಷ್ಟನೆ ಸಿಕ್ಕಿದೆ. ತೆಲುಗು ಪ್ರೇಕ್ಷಕರನ್ನ ಕನ್ನಡದ ನಟಿ ಗೆದ್ದು ಬೀಗಲಿ ಎಂಬುದೇ ಕನ್ನಡ ಸಿನಿ ಪ್ರೇಮಿಗಳ ಆಶಯ. ಅಗ್ನಿಸಾಕ್ಷಿ ಸೀರಿಯಲ್ನಲ್ಲಿ ನಾಯಕಿ ವೈಷ್ಣವಿ ಗೌಡ ಅಲಿಯಾಸ್ ಸನ್ನಿಧಿ ಸಹೋದರಿ ತನು ಪಾತ್ರದಲ್ಲಿ ಶೋಭಾ ಶೆಟ್ಟಿ ನಟಿಸಿದ್ದರು. ತೆಲುಗು ಕಿರುತೆರೆಯಲ್ಲಿ ನಟಿಗೆ ಒಳ್ಳೆಯ ಫ್ಯಾನ್ ಬೇಸ್ ಇದೆ.
Facebook: https://www.facebook.com/PragathiTV/
Pragati TV Social Connect for more latest u