ಭಾರತೀಯ ನರ್ಸ್​​ಗಳಿಗೆ ಹೆಚ್ಚಿದ ಬೇಡಿಕೆ : ಜಪಾನ್​ಗೆ ಹೊರಟ ದಾದಿಯರು

ಶಿಲಾಂಗ್​​: ಕಳೆದ ಆಗಸ್ಟ್​ನಲ್ಲಿ ನಡೆದ ಸಾಗರೋತ್ತರ ನರ್ಸ್​​ಗಳ ಉದ್ಯೋಗ ಮೇಳದಲ್ಲಿ ಮೇಘಾಲಯ 27 ನರ್ಸ್​ಗಳು ಜಪಾನ್​ನಲ್ಲಿ ಉದ್ಯೋಗಾವಕಾಶವನ್ನು ಪಡೆದಿದ್ದರು. ಈ 27 ನರ್ಸ್​​ಗಳು ಇದೀಗ ಜಪಾನಿ ಭಾಷೆಯ ತರಬೇತಿ ಕಲಿಕೆ ಪೂರ್ಣಗೊಳಿಸಿದ್ದು, ಇದೀಗ ದೂರದ ದೇಶದಲ್ಲಿ ವೃತ್ತಿಜೀವನದ ಪ್ರಯಾಣ ಆರಂಭಿಸಲು ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ತಮ್ಮ ಹೊಸ ಭಾಷಾ ಕೌಶಲ್ಯದೊಂದಿಗೆ ಇದೀಗ ಈ ನರ್ಸ್​​ಗಳ ಜಪಾನ್​ ವಿವಿಧ ಆಸ್ಪತ್ರೆ ಮತ್ತು ಕೇರ್​ ಹೋಮ್​ಗಳಲ್ಲಿ ನೇಮಿಸಲಾಗುವುದು ಎಂದು ಮೇಘಾಲಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ 14 ನರ್ಸ್​​ಗಳು ಸಿಂಗಾಪೂರ್​ನ ಹಲವಾರು ಸಂಸ್ಥೆಗಳಿಗೆ ನೇಮಿಸಲಾಗಿದೆ.

ರಾಜ್ಯ ಸರ್ಕಾರ ಪ್ರತಿ ವರ್ಷ 50 ಸಾವಿರ ಅಭ್ಯರ್ಥಿಗಳಿಗೆ ಮೇಘಾಲಯ ರಾಜ್ಯ ಕೌಶಲ್ಯ ಅಭಿವೃದ್ಧಿ ಸೊಸೈಟಿ ಅಡಿ ಕೌಶಲ್ಯ ಮೇಘಾಲಯ ಯೋಜನೆ ಭಾಗವಾಗಿ ತರಬೇತಿ ಅವಕಾಶವನ್ನು ಒದಗಿಸುತ್ತಿದೆ. ಮುಂದಿನ ವರ್ಷದಲ್ಲಿ 300 ನರ್ಸ್​​ಗಳನ್ನು ಈ ಯೋಜನೆಯ ಭಾಗವಾಗಿಸುವ ಗುರಿ ಹೊಂದಲಾಗಿದೆ.

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್​ ಸಂಗ್ಮಾ, ಈ ಉಪಕ್ರಮದಲ್ಲಿ ಭಾಗಿಯಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು. ಈ ವೇಳೆ ಮಾತನಾಡಿದ ಅವರು, ಸಾಗರೋತ್ತರದಲ್ಲಿ ನಮ್ಮ ರಾಜ್ಯದ ನರ್ಸ್​​ಗಳು ಸೇವೆ ಸಲ್ಲಿಸಲು ಮುಂದಾಗುತ್ತಿರುವುದು ನೋಡುವುದಕ್ಕೆ ಸಂತಸವಾಗಿದೆ.

ಎಲ್ಲಾ ಆಶೀರ್ವಾದ ಮತ್ತು ಅವರ ಕುರಿತು ಸಕಾರಾತ್ಮಕ ವಿಷಯ ಆಲಿಸುವ ಭರವಸೆಯೊಂದಿಗೆ ಅವರನ್ನು ನಾವು ಕಳುಹಿಸುತ್ತಿದ್ದೇವೆ. ಇದೇ ವೇಳೆ ನಾನು ಈ ರೀತಿ ಅವಕಾಶವನ್ನು ಪಡೆಯಲು ಮತ್ತಷ್ಟು ಜನರು ಮುಂಬರುವಂತೆ ಒತ್ತಾಯಿಸುತ್ತೇನೆ. ಕಾರಣ, ಇದು ಕೇವಲ ಸಾಗರೋತ್ತರ ದೇಶದಲ್ಲಿ ಜೀವನೋಪಯ ಕಂಡು ಕೊಳ್ಳುವ ಮಾರ್ಗವಲ್ಲ. ನಿಮ್ಮ ವೃತ್ತಿ ಮತ್ತು ಜ್ಞಾನವನ್ನು ವೃದ್ಧಿಸಿಕೊಳ್ಳಲು ಇದೊಂದು ಅದ್ಬುತ ಅವಕಾಶ ಎಂದರು.

Leave a Reply

Your email address will not be published. Required fields are marked *