Central Bank Of India || ಅಪ್ರೆಂಟಿಸ್​ಶಿಪ್​ ಹುದ್ದೆಗೆ ಮರು ಅಧಿಸೂಚನೆ

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಬೆಂಗಳೂರು: ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾದಿಂದ ದೇಶಾದ್ಯಂತ 3000 ಅಪ್ರೆಂಟಿಸ್​ ಹುದ್ದೆಗಳ ಭರ್ತಿಗೆ ಮರು ಅಧಿಸೂಚನೆ ಹೊರಡಿಸಲಾಗಿದೆ. ಅಪ್ರೆಂಟಿಸ್​ಶಿಪ್​ ಅವಧಿ ಒಂದು ವರ್ಷ ಆಗಿರಲಿದೆ. ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಅರ್ಹರಾಗಿದ್ದಾರೆ.

ಹುದ್ದೆ ವಿವರ: ದೇಶದ ವಿವಿಧ ಜಿಲ್ಲೆಗಳಿಗೆ ನಿರ್ದಿಷ್ಟ ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ಅದರ ಅನುಸಾರ ಕರ್ನಾಟಕಕ್ಕೆ 110 ಹುದ್ದೆಗಳನ್ನು ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಅಧಿಕೃತ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ: ಅಭ್ಯರ್ಥಿಗಳು ಏಪ್ರಿಲ್​ 1- 1996ರಿಂದ 31 ಮಾರ್ಚ್​ 2004ರ ನಡುವೆ ಜನಿಸಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ವಿಕಲಚೇತನ ಅಭ್ಯರ್ಥಿಗಳಿಗೆ 400, ಪ.ಜಾ, ಪ.ಪಂ, ಮಹಿಳಾ ಅಭ್ಯರ್ಥಿಗಳಿಗೆ 600 ಮತ್ತು ಇತರ ಅಭ್ಯರ್ಥಿಗಳಿಗೆ 800 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.

ಆಯ್ಕೆ: ಆನ್​ಲೈನ್​ ಮೂಲಕ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಲಾಗುವುದು.

ಈ ಹುದ್ದೆಗೆ ಮರು ಅಧಿಸೂಚನೆ ಅನುಸಾರ ಅಭ್ಯರ್ಥಿಗಳು 6 ಜೂನ್​ನಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆ ದಿನಾಂಕ ಜೂನ್​ 17 ಆಗಿದೆ. ಈ ಹುದ್ದೆಗೆ ತಾತ್ಕಾಲಿಕ ಪರೀಕ್ಷೆ ಜೂನ್​ 23ರಂದು ನಡೆಯಲಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು centralbankofindia.co.in ಭೇಟಿ ನೀಡಿ

Leave a Reply

Your email address will not be published. Required fields are marked *