ನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿರುವ ಪ್ರಧಾನಿ ನರೇಂದ್ರ ನೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರ ಹಿಡಿದಾಗಿದೆ. ತಮ್ಮ ಮಂತ್ರಿ ಮಂಡಲದ ನೂತನ ಸಚಿವರಿಗೆ ಖಾತೆ ಹಂಚಿಕೆ ಬಳಿಕ ೧೦೦ ದಿನಗಳೊಳಗೆ ಮಾಡಿ ಮುಗಿಸಲೇ ಕಾರ್ಯಗಳನ್ನು ಪ್ರಧಾನಿ ನೀಡಿಯೂ ಆಗಿದೆ. ಇದೀಗ ಮೈತ್ರಿಕೂಟದ ಅತಿಹೊಡ್ಡ ಪಕ್ಷವಾಗಿರುವ ಬಿಜೆಪಿಯ ಮುಂದಿರುವ ಎರಡು ಮುಖ್ಯ ಕಾರ್ಯಗಳು. ಅದರಲ್ಲಿ ಮೊದಲನೆಯದು ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಯಾರನ್ನು ಆಯ್ಕೆ, ಎರಡನೇಯದ್ದು ಉಪ ಸ್ಪೀಕರ್ ಆಯ್ಕೆ, ಮೂರನೇಯದ್ದು ಪಕ್ಷದ ಅಧ್ಯಕ್ಷರ ನೇಮಕ ವಿಚಾರ.
ಬಿಜೆಪಿ ಅಧ್ಯಕ್ಷರಾಗಿರುವ ಜೆಪಿ ನಡ್ಡಾ ಅವರು ಕೇಂದ್ರ ಸಚಿವ ಸಂಪುಟಕ್ಕೆ ಮರಳಿದ್ದಾರೆ. ನರೇಂದ್ರ ಮೋದಿ ಅವರ ಮೊದಲನೇ ಅವಧಿಯ ಸರ್ಕಾರದಲ್ಲಿ ಜಗತ್ ಪ್ರಕಾಶ್ ನಡ್ಡಾ ಅವರು ಆರೋಗ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಅಮಿತ್ ಶಾ ಅವರು ಬಿಜೆಪಿ ಅಧ್ಯಕ್ಷರಾಗಿದ್ದರು. ೨ನೇ ಅವಧಿಯ ಸರ್ಕಾರದಲ್ಲಿ ಅಮಿತ್ ಶಾ ಅವರು ಗೃಹ ಸಚಿವರಾಗಿ ನೇಮರಾದರು. ಈ ವೇಳೆ ಅವರು ಸಚಿವಗಿರಿ ಮತ್ತು ಬಿಜೆಪಿ ಅಧ್ಯಕ್ಷಗಿರಿಗಳೆರಡನ್ನೂ ಏಕಕಾಲದಲ್ಲಿ ನಿಭಾಯಿಸಿದ್ದರು. ಬಳಿಕ ಜೆಪಿ ನಡ್ಡಾ ಅವರು ಅಧ್ಯಕ್ಷರಾದರು.
ಇದೀಗ ಜೆಪಿ ನಡ್ಡಾ ಅವರು ಮತ್ತೆ ಸಚಿವ ಸಂಪುಟಕ್ಕೆ ಮರಳಿದ್ದಾರೆ. ಅವರಿಗೆ ಈ ಹಿಂದೆ ನಿರ್ವಹಿಸುತ್ತಿದ್ದ ಆರೋಗ್ಯದೊಂದಿಗೆ ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ಗೊಬ್ಬರ ಖಾತೆಗಳನ್ನೂ ವಹಿಸಲಾಗಿದೆ.
ಹೊಸ ಪಕ್ಷಾಧ್ಯಕ್ಷರಿಗಿರುವ ಸವಾಲೇನು?
ಹೀಗಾಗಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಇದೀಗ ಮತ್ತೊಬ್ಬರನ್ನು ನೇಮಿಸಬೇಕಾಗಿದೆ. ಹೊಸದಾಗಿ ನೇಮಕವಾಗಲಿರುವ ಅಧ್ಯಕ್ಷರಿಗೆ ಮುಂಬರುವ ಜಮ್ಮು ಮತ್ತು ಕಾಶ್ಮೀರ, ಹರ್ಯಾಣ, ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಇರುತ್ತದೆ. ಈ ಸ್ಥಾನಕ್ಕೆ ಈ ಬಾರಿ ಅಮೇಥಿಯಲ್ಲಿ ಪರಾಭವಗೊಂಡಿರುವ ಮಾಜಿ ಸಚಿವೆ ಸ್ಮೃತಿ ಇರಾನಿ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ.
ಮತ್ತೊಂದೆಡೆ ಬಿಜೆಪಿ ಮುಂದಿನ ಲೋಕಸಭಾ ಅಧಿವೇಶನದೊಳಗಾಗಿ ಸ್ಪೀಕರ್ ಹುದ್ದೆuಟಿಜeಜಿiಟಿeಜಗೂ ಆಯ್ಕೆ ಮಾಡಬೇಕಾಗಿದೆ. ಇದನ್ನು ಕಮಲ ಪಕ್ಷ ತನ್ನಲ್ಲೇ ಉಳಿಸಿಕೊಳ್ಳುವುದೋ ಇಲ್ಲಾ ಮಿತ್ರ ಪಕ್ಷಗಳಾದ ಟಿಡಿಪಿ ಅಥವಾ ಜೆಡಿಯುಗೆ ಬಿಟ್ಟುಕೊಡುವುದೋ ಎಂಬ ಬಗ್ಗೆ ಕುತೂಹಲ ಮನೆ ಮಾಡಿದೆ.
ಸ್ಪೀಕರ್ ಹುದ್ದೆ ಅತ್ಯಂತ ಘನತರವಾದುದು. ಮೈತ್ರಿ ಸರ್ಕಾರ ಇರುವ ಸಂದರ್ಭದಲ್ಲAತೂ ಈ ಸ್ಥಾನದ ಹೊಣೆ ಅತ್ಯಂತ ಹೆಚ್ಚಿರುತ್ತದೆ. ಹೀಗಾಗಿ ಎನ್ ಡಿಎ ಮೈತ್ರಿ ಪಕ್ಷಗಳು ಈ ಸ್ಥಾನಕ್ಕಾಗಿ ಪೈಪೋಟಿ ನಡೆಸುವ ಸಾಧ್ಯತೆ ಇಲ್ಲದಿಲ್ಲ. ಈ ಸಂದರ್ಭದಲ್ಲಿ ಬಿಜೆಪಿಯು ಮಿತ್ರ ಪಕ್ಷಗಳ ಬೇಡಿಕೆಗೆ ಯಾವ ರೀತಿ ಮಣೆ ಹಾಕುತ್ತದೆ ಎಂಬುದೇ ಸದ್ಯಕ್ಕಿರುವ ಕುತೂಹಲದ ಪ್ರಶ್ನೆಯಾಗಿದೆ.
ಪುರಂದರೇಶ್ವರಿಗೆ ಸ್ಪೀಕರ್ ಪಟ್ಟ?
ಮೂಲಗಳ ಪ್ರಕಾರ ಬಿಜೆಪಿ ಸ್ಪೀಕರ್ ಸ್ಥಾನವನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಡಲು ಅಷ್ಟಾಗಿ ಉತ್ಸುಕವಾಗಿಲ್ಲ. ಈ ಬಗ್ಗೆ ಕೇಸರಿ ಪಡೆ ಅಧಿಕೃತವಾಗಿ ಏನನ್ನೂ ಹೇಳಿಲ್ಲವಾದರೂ ಆಂಧ್ರಪ್ರದೇಶ ಬಿಜೆಪಿ ಮುಖ್ಯಸ್ಥೆ ದುಗ್ಗುಬಾಟಿ ಪುರಂದರೇಶ್ವರಿ ಅವರು ಈ ಮಹತ್ವದ ಸ್ಥಾನ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಪುರಂದರೇಶ್ವರಿ ಅರು ಆಂಧ್ರಪ್ರದೇಶದ ಮಾಜಿ ಸಿಎಂ ಮತ್ತು ಎನ್ ಟಿ ರಾಮರಾವ್ ಅವರ ಪುತ್ರಿಯಾಗಿದ್ದಾರೆ. ಅವರ ಪತಿ ವೆಂಕಟೇಶ್ವರ ರಾವ್ ಅರು ಕಾಂಗ್ರೆಸ್ ಪಕ್ಷದ ಮಾಜಿ ಸಂಸದರಾಗಿದ್ದಾರೆ. ೨೦೦೪ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ನಿಂದ ಲೋಕಸಭೆಗೆ ಆಯ್ಕೆಯಾದ ಅವರು ೨೦೦೬ರಲ್ಲಿ ಮನ್ ಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು. ೨೦೧೪ರಲ್ಲಿ ಬಿಜೆಪಿ ಸೇರ್ಪಡೆಗೊಂಡ ಅವರು, ಇದೀಗ ಆಂಧ್ರಪ್ರದೇಶ ಬಿಜೆಪಿಯ ಅಧ್ಯಕ್ಷರಾಗಿದ್ದಾರೆ. ಅವರು ಈ ಬಾರಿಯ ಮೋದಿ ಸಚಿವ ಸಂಪುಟದಲ್ಲಿ ಕಾಣಿಸಿಕೊಳ್ಳಬಹುದೆಂಬ ನಿರೀಕ್ಷೆ ಇತ್ತು. ಆದರೆ ಅವರಿಗೆ ಸ್ಪೀಕರ್ ಹುದ್ದೆ ನೀಡಬೇಕು ಎಂಬುದು ಕಮಲ ಪಕ್ಷದ ಲೆಕ್ಕಾಚಾರ ಆಗಿದೆ ಎನ್ನಲಾಗಿದೆ.
ಇವೆರಡರೊಂದಿಗೆ ಇದೀಗ ಲೋಕಸಭೆಯ ಉಪ ಸ್ಪೀಕರ್ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡುತ್ತಿದೆ ಎಂಬ ಬಗ್ಗೆಯೂ ಕುತೂಹಲವಿದೆ. ಕಳೆದ ಬಾರಿ ಈ ಹುದ್ದೆಯನ್ನು ಎಐಎಡಿಎಂಕೆಯ ಎಂ ತಂಬಿದೊರೈ ಅವರಿಗೆ ನೀಡಲಾಗಿತ್ತು. ಈ ಸ್ಥಾನವನ್ನು ಬಿಜೆಪಿ ತನ್ನಲ್ಲೇ ಇಟ್ಟುಕೊಳ್ಳುತ್ತದಾ ಅಥವಾ ಮಿತ್ರ ಪಕ್ಷಗಳಿಗೆ ಕೊಡುಗೆಯಾಗಿ ನೀಡುತ್ತದಾ ಎಂಬ ಪ್ರಶ್ನೆಯೂ ಇದೆ.